ವಿದ್ಯಾರ್ಥಿಗಳು ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಬೇಕು ಮಾನ್ಯ ಜಿಲ್ಲಾಧಿಕಾರಿಗಳು.
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಅಧೀನದಲ್ಲಿ ಬರುವ ದಾನವೀರ ಸಿರಸಂಗಿ ಶ್ರೀ ಲಿಂಗರಾಜ ದೇಸಾಯಿ ತೋಟಗಾರಿಕಾ ಅಭಿಯಾಂತ್ರಿಕ ಮತ್ತು ಆಹಾರ ತಂತ್ರಜ್ಞಾನ, ದೇವಿಹೊಸೂರು ಮಹಾವಿದ್ಯಾಲಯದ 2026ನೇ ಸಾಲಿನ 10ನೇ ವಾರ್ಷಿಕೋತ್ಸವ ಮಹಾವಿದ್ಯಾಲಯ ಮತ್ತು ವಿದ್ಯಾರ್ಥಿ ವಸತಿ ನಿಲಯಗಳ ಸಮಾರಂಭ ಕಾರ್ಯಕ್ರಮವು ದಿನಾಂಕ 10.06.2026 ರಂದು ಹಮ್ಮಿಕೊಳ್ಳಲಾಯಿತು.
ಮೊದಲನೆದಾಗಿ ವೇದಿಕೆ ಮೇಲೆ ಉಪಸ್ಥಿತರಿರುವ ಎಲ್ಲಾ ಗಣ್ಯರನ್ನು ಡಾ. ವೀಣಾ ಎನ್. ಸಹ ಪ್ರಾದ್ಯಾಪಕರು ಸ್ವಾಗತಿಸಿದರು. ಈ ಕಾರ್ಯಕ್ರಮಕ್ಕೆ ಡಾ. ವಿಜಯ ಮಹಾಂತೇಶ ಬಿ. ದಾನಮ್ಮನವರ ಭಾ.ಆ.ಸೇ. ಜಿಲ್ಲಾಧಿಕಾರಿಗಳು, ಡಾ. ಸುರೇಶ ಎಚ್.ಜಂಗಮಶೆಟ್ಟಿ ಗೌರವಾನ್ವಿತ ಕುಲಪತಿಗಳು, ಹಾವೇರಿ ವಿಶ್ವವಿದ್ಯಾಲಯ, ಮತ್ತು ಡಾ. ಲಕ್ಷ್ಮಣ ಕುಕನೂರ ಡೀನ್ ದಾ.ಸಿ.ಲಿಂ.ದೇ.ತೋ.ಅ.ಆತ ಹಾಗೂ ಇನ್ನಿತರೇ ಗಣ್ಯರು ಹೊಂಬಾಳೆಯ ಗರಿಯನ್ನು ತೆರೆಯುವುದರ ಮೂಲಕ ವಿಶಿಷ್ಠವಾಗಿ ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾಧಿಕಾರಿಗಳು ಉದ್ಘಾಟಿಸಿ ಮಾತನಾಡಿ ಮಹಾವಿದ್ಯಾಲಯವು ಅತಿ ಕಡಿಮೆ ಅವದಿಯಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿದೆ ಮತ್ತು ಆಹಾರ ತಂತ್ರಜ್ಞಾನ ಪದವಿ ಪಡೆದ ವಿದ್ಯಾರ್ಥಿಗಳಿಗೆ ಆಹಾರ ಸಂಸ್ಕರಣಾ ವಿಭಾಗದಲ್ಲಿ ವಿಶ್ವ ಮಟ್ಟದ ಅವಕಾಶಗಳಿವೆ, ರಾಷ್ಟ್ರೀಯ ಮಟ್ಟದಲ್ಲಿ ಆಹಾರ ಸಂಸ್ಕರಣಾ ಕ್ಷೇತ್ರವು ತ್ವರಿತವಾಗಿ ಅಭಿವೃದ್ಧಿಯಾಗುತ್ತಿದೆ ಇದರಿಂದ ಕೃಷಿ ಹಾಗೂ ಭಾರತದ ಆರ್ಥಿಕತೆ ಕೂಡ ಹೆಚ್ಚು ಬೆಳೆಯುತ್ತಿದೆ ಹಾಗೂ ವಿದ್ಯಾರ್ಥಿಗಳು ಹೊಸ ಆವಿಷ್ಕಾರಗಳು, ಸ್ಟಾರ್ಟ್‍ಅಪ್‍ಗಳು ಮತ್ತು ತಂತ್ರಜ್ಞಾನ ಅಭಿವೃದ್ಧಿ, ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಡಾ. ಸುರೇಶ ಎಚ್.ಜಂಗಮಶೆಟ್ಟಿ ಕುಲಪತಿಗಳು, ಹಾವೇರಿ ವಿಶ್ವವಿದ್ಯಾಲಯ ಇವರು ಮಾತನಾಡಿ ಕೃಷಿ ಎಂಜಿನಿಯರಿಂಗ್ ಹಾಗೂ ಆಹಾರ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರಗಳ ಅಗತ್ಯವಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಮೂಲಕ ಕೃಷಿ ಹಾಗೂ ಆಹಾರ ಸಂಸ್ಕರಣಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸಬೇಕು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಾವಿದ್ಯಾಲಯದ ಡೀನ್ ರವರಾದ ಡಾ. ಲಕ್ಷ್ಮಣಕೂಕನೂರ ರವರು ಪ್ರಚಲಿತ ಸವಾಲುಗಳನ್ನು ಎದುರಿಸಿ ವಿದ್ಯಾರ್ಥಿಗಳು ಆಹಾರ ತಂತ್ರಜ್ಞಾನದಲ್ಲಿರುವ ಕಠಿಣ ಪರಿಶ್ರಮದೊಂದಿಗೆ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಕರೆ ನೀಡಿದರು.
ಮಹಾವಿದ್ಯಾಲಯದ ವಾರ್ಷಿಕ ವರದಿಯನ್ನು ಡಾ. ಶೋಭಾ ಎಸ್. ಸಹ ಪ್ರಾದ್ಯಾಪಕರು, ಮತ್ತು ವಸತಿನಿಲಯಗಳ ವರದಿಯನ್ನು ಶ್ರೀಮತಿ. ಅನ್ನಪೂರ್ಣಾ ನೀರಲಗಿ, ಸಹಾಯಕ ಪ್ರಾದ್ಯಾಪಕರು ಮಂಡಿಸಿ ವಿದ್ಯಾರ್ಥಿಗಳ ಶೈಕ್ಷಣಿಕಕ, ಕ್ರೀಡಾ ಹಾಗೂ ವಸತಿನಿಲಯಗಳ ಸೌಲಭ್ಯ, ಸಾಂಸ್ಕøತಿಕ ಸಾಧನೆಗಳ ಕುರಿತು ವಿವರಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ಗಣ್ಯರು ವಿತರಿಸಿದರು.
ಕಾರ್ಯಕ್ರಮದ ತದನಂತರ ಸಾಯಂಕಾಲ ವಿದ್ಯಾರ್ಥಿಗಳಿಂದ ನೃತ್ಯ, ಸಂಗೀತ, ನಾಟಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿದವು ಈ ಕಾರ್ಯಕ್ರಮದಲ್ಲಿ ಕಾಲೇಜಿನ, ಶಿಕ್ಷಕ-ಶಿಕಕ್ಷೇತರ ವೃಂದ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ವಂದನಾರ್ಪಣೆಯನ್ನು ಡಾ. ಶ್ರಿನಿವಾಸ ಜಿ ನೇರವೆರಿಸಿದರು.