
ಗ್ಯಾರಂಟಿ ಗದ್ದಲಕ್ಕೆ ಕಲಾಪ ಬಲಿ, ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿ
ಗ್ಯಾರಂಟಿ ಗದ್ದಲಕ್ಕೆ ಕಲಾಪ ಬಲಿ, ವಿಧಾನಸಭೆಯಲ್ಲಿ ಪ್ರತಿಪಕ್ಷಗಳ ಧರಣಿವೀರಮಾರ್ಗ ನ್ಯೂಸ್ : ಬೆಂಗಳೂರು : ರಾಜ್ಯಸರ್ಕಾರದ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದುಪಡಿಸುವಂತೆ ಪ್ರತಿಪಕ್ಷಗಳು ಆರಂಭಿಸಿದ ಧರಣಿ ಇಂದು ವಿಧಾನಸಭೆಯಲ್ಲಿ ಮುಂದುವರೆದಿತ್ತು. ಹೀಗಾಗಿ ಎರಡನೇ ದಿನದ ಕಲಾಪವೂ ಗ್ಯಾರಂಟಿ ಗದ್ದಲಕ್ಕೆ ಬಲಿಯಾದಂತಾಯಿತು.ಬಿಜೆಪಿ, ಜೆಡಿಎಸ್ ಶಾಸಕರು ಪಟ್ಟು ಹಿಡಿದು ಗ್ಯಾರಂಟಿ ಅನುಷ್ಠಾನ ಸಮಿತಿ ರದ್ದು ಮಾಡಬೇಕೆಂಬ ನಿಲುವಿಗೆ ಅಂಟಿಕೊಂಡು ಪ್ರತಿರೋಧವನ್ನು ಮುಂದುವರೆಸಿದರೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಸರ್ಕಾರವೂ ಕೂಡ ಗ್ಯಾರಂಟಿ ಅನುಷ್ಠಾನ ಸಮಿತಿಗಳನ್ನು ರದ್ದು ಮಾಡಲು ಒಪ್ಪಲಿಲ್ಲ. ಆಡಳಿತ ಮತ್ತು…