ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ
ರಾಜ್ಯದಲ್ಲೇ ಬಾಲಕಿಯರದ್ದೇ ಮೇಲುಗೈ, ಹಾವೇರಿ ೨೧ನೇ ಸ್ಥಾನ, ಗದಗ ೨೫ನೇ ಸ್ಥಾನ ಲಭಿಸಿದೆ
ವೀರಮಾರ್ಗ ನ್ಯೂಸ್ ಬೆಂಗಳೂರು :
ವಿದ್ಯಾರ್ಥಿ ಜೀವನದ ೨ನೇ ಅತಿ ಮಹತ್ವದ ಘಟ್ಟ ಎನಿಸಿದ ದ್ವಿತೀಯ ಪಿಯುಸಿ ಪರೀಕ್ಷೆ-೧ರ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.೭೩.೪೫ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.೭.೭ರಷ್ಟು ಕುಸಿತ ಕಂಡಿದೆ. ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಶೇ.೮೧.೧೫ರಷ್ಟು ಬಂದಿತ್ತು. ಈ ಬಾರಿ ಶೇ.೭೩.೪೫ ಬಂದಿದೆ.
ಕಲಾ ವಿಭಾಗದಲ್ಲಿ ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲ್ಲೂಕು ಕೊಟ್ಟೂರಿನ ಹಿಂದೂ ಪಿಯು ಕಾಲೇಜಿನ ಎಲ್.ಆರ್.ಸಂಜನಾ ಬಾಯಿ ಅವರು ೬೦೦ ಅಂಕಗಳಿಗೆ ೫೯೭ ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕೆನರಾ ಪಿಯು ಕಾಲೇಜಿನ ವಿದ್ಯಾರ್ಥಿನಿ ದೀಪಶ್ರೀ ೬೦೦ಕ್ಕೆ ೫೯೯ ಹಾಗೂ ವಿಜ್ಞಾನ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಕ್ಸ್‌ಪರ್ಟ್ ಪಿಯುಸಿ ಕಾಲೇಜಿನ ವಿದ್ಯಾರ್ಥಿನಿ ಅಮೂಲ್ಯ ಕಾಮತ್ ೬೦೦ ಅಂಕಗಳಿಗೆ ೫೯೯ ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧುಬಂಗಾರಪ್ಪ ಪರೀಕ್ಷಾ ಮಂಡಳಿ ಅಧ್ಯಕ್ಷ ಬಸವ ರಾಜೇಂಧ್ರ, ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್, ಪದವಿಪೂರ್ವ ಮಂಡಳಿ ನಿರ್ದೇಶಕಿ ಸಿಂಧು ರೂಪೇಶ್ ಮತ್ತಿತರರು ಇಂದು ಫಲಿತಾಂಶವನ್ನು ಪ್ರಕಟಿಸಿದರು.
ಬಾಲಕಿಯರದ್ದೇ ಮೇಲುಗೈ : ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು ೩,೪೫,೬೯೪ ಬಾಲಕಿಯರು ಹಾಜರಾಗಿದ್ದರು. ಈ ಪೈಕಿ ೨,೬೯,೨೧೨ ಬಾಲಕಿಯರು ಉತ್ತೀರ್ಣರಾಗಿದ್ದಾರೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟು ೬,೩೭,೮೦೫ ವಿದ್ಯಾರ್ಥಿಗಳ ಪೈಕಿ ೪,೬೮,೪೩೯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಒಟ್ಟಾರೆ ಶೇಕಡಾ ೭೩.೪೫ ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾದಂತಾಗಿದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.೫೭.೧೧ರಷ್ಟು ಫಲಿತಾಂಶ ಬಂದಿದೆ. ಅನುದಾನಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ ೬೨.೬೯ರಷ್ಟು, ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ ೮೨.೬೬ರಷ್ಟು, ಬಿಬಿಎಂಪಿ ವ್ಯಾಪ್ತಿಯ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ ೬೮.೮೮ರಷ್ಟು, ವಿಭಜಿತ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ.೭೮.೫೮ರಷ್ಟು ಹಾಗೂ ವಸತಿ ಶಾಲಾ ಪದವಿ ಪೂರ್ವ ಕಾಲೇಜುಗಳಲ್ಲಿ ಶೇ ೮೬.೧೮ರಷ್ಟು ಫಲಿತಾಂಶ ಬಂದಿದೆ.

ಮಾರ್ಚ್ ೧ರಿಂದ ಮಾರ್ಚ್ ೨೦ರ ವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಒಟ್ಟು ೧೧೭೧ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯವು ೭೬ ಕೇಂದ್ರಗಳಲ್ಲಿ ಮಾ.೨೧ರಿಂದ ಏ.೨ರವರೆಗೆ ೨೮,೦೯೨ ಮೌಲ್ಯಮಾಪಕರಿಂದ ನಡೆಸಲಾಗಿತ್ತು.

ಶೇ.೧೦೦ರಷ್ಟು ಫಲಿತಾಂಶ:
ಸರ್ಕಾರಿ ಪದವಿ ಪೂರ್ವ ಕಾಲೇಜು -೧೩
ಅನುದಾನಿತ ಪದವಿಪೂರ್ವ ಕಾಲೇಜು ೩
ಅನುದಾನರಹಿತ ಪದವಿಪೂರ್ವ ಕಾಲೇಜು ೧೦೩
ವಿಭಜಿತ ಪದವಿಪೂರ್ವ ಕಾಲೇಜು -೦
ವಸತಿ ಶಾಲಾ ಪದವಿಪೂರ್ವ ಕಾಲೇಜು- ೧೫
ಒಟ್ಟು ೧೩೪

ಶೂನ್ಯ ಫಲಿತಾಂಶ
ಸರ್ಕಾರಿ ಪದವಿ ಪೂರ್ವ ಕಾಲೇಜು -೦೮
ಅನುದಾನ ಪದವಿಪೂರ್ವ ಕಾಲೇಜು ೨೦
ಅನುದಾನರಹಿತ ಪದವಿಪೂರ್ವ ಕಾಲೇಜು ೯೦
ವಿಭಜಿತ ಪದವಿಪೂರ್ವ ಕಾಲೇಜು -೦
ವಸತಿ ಶಾಲಾ ಪದವಿಪೂರ್ವ ಕಾಲೇಜು- ೦೫
ಒಟ್ಟು ೧೨೩

ಯಾವ ಶ್ರೇಣಿಯಲ್ಲಿ ಎಷ್ಟು ಮಂದಿ ಉತ್ತೀರ್ಣ:
ಉನ್ನತ ಶ್ರೇಣಿ- ೧,೦೦,೫೭೧
ಪ್ರಥಮ ದರ್ಜೆ- ೨,೭೮,೦೫೪
ದ್ವೀತಿಯ ದರ್ಜೆ-೭೦೯೬೯
ತೃತೀಯ ದರ್ಜೆ-೧೮೮೪೫

ಕಲಾ ವಿಭಾಗ :
೧.ಸಂಜನಾಬಾಯಿ ೫೯೭ ಅಂಕ, ಇಂದೂ ಪಿಯು ಕಾಲೇಜು ವಿಜಯನಗರ ಜಿಲ್ಲೆ
೨.ನಿರ್ಮಾಲಾ ೫೯೬ ಅಂಕ ,ಪಂಚಮಸಾಲಿ ಪಿಯು ಕಾಲೇಜು ಹೂವಿನಹಡಗಲಿ
೩.ಕೆ.ಆರ್.ಶ್ರೀಜಯ ದರ್ಶನಿ ೫೯೫, ಬೆಂಗಳೂರು ಮಹಾರಾಣಿ ಕಾಲೇಜು

ವಾಣಿಜ್ಯ ವಿಭಾಗ :
೧. ದೀಪಶ್ರೀ.ಎಸ್ ಕೆನರಾ ಪಿಯು ಕಾಲೇಜು, ಮಂಗಳೂರು- ಅಂಕ-೫೯೯
೨. ತೇಜಸ್ವಿನಿ- ಭಾರತಮಾತಾ ಪಿಯು ಕಾಲೇಜು ಕೊಪ್ಪ, ಮೈಸೂರು, ಅಂಕ-೫೯೮
೩. ಎಚ್.ವಿ.ಭಾರ್ಗವಿ, ಮಹಿಳಾ ಸಮಾಜ ಪಿಯು ಕಾಲೇಜು, ಕೋಲಾರ, ಅಂಕ-೫೯೭
ವಿಜ್ಞಾನ ವಿಭಾಗ
೧. ಅಮೂಲ್ಯ ಕಾಮತ್ ? ಎಕ್?ಸಫರ್ಟ್ ಪಿಯು ಕಾಲೇಜು ಮಂಗಳೂರು, ಅಂಕ-೫೯೯
೨. ದೀಕ್ಷಾ.ಆರ್ ವಾಗ್ದೇವಿ ಪಿಯು ಕಾಲೇಜು ತೀರ್ಥಹಳ್ಳಿ, ಅಂಕ-೫೯೯
೩. ಬಿಂದು ನಾವಳೆ-ಆಳ್ವಾಸ್ ಕಾಲೇಜು ಮೂಡಬಿದಿರೆ, ಅಂಕ-೫೯೮
ಜಿಲ್ಲವಾರು ಫಲಿತಾಂಶ
೧. ಉಡುಪಿ : ಶೇ. ೯೩.೯೦
೨. ದ.ಕನ್ನಡ : ಶೇ.೯೩.೫೭
೩. ಬೆಂಗಳೂರು ದಕ್ಷಿಣ : ಶೇ.೮೫.೩೬
೪. ಕೊಡಗು : ಶೇ. ೮೩.೮೪
೫. ಬೆಂಗಳೂರು ಉತ್ತರ : ಶೇ. ೮೩.೩೧
೬. ಉತ್ತರ ಕನ್ನಡ : ಶೇ. ೮೨.೯೩
೭. ಶಿವಮೊಗ್ಗ : ಶೇ. ೭೯.೯೧
೮. ಬೆಂಗಳೂರು ಗ್ರಾ. : ಶೇ. ೭೯.೭೦
೯. ಚಿಕ್ಕಮಗಳೂರು : ಶೇ. ೭೯.೫೬
೧೦. ಹಾಸನ : ಶೇ. ೭೭.೫೬
೧೧. ಚಿಕ್ಕಬಳ್ಳಾಪುರ : ಶೇ.೭೫.೮೦
೧೨. ಮೈಸೂರು : ಶೇ.೭೪.೩೦
೧೩. ಚಾಮರಾಜನಗರ : ಶೇ.೭೩.೯೭
೧೪. ಮಂಡ್ಯ : ಶೇ.೭೩.೨೭
೧೫. ಬಾಗಲಕೋಟೆ : ಶೇ.೭೨.೮೩
೧೬. ಕೋಲಾರ : ಶೇ.೭೨.೪೫
೧೭. ಧಾರವಾಡ : ಶೇ.೭೨.೩೨
೧೮. ತುಮಕೂರು : ಶೇ.೭೨.೦೨
೧೯. ರಾಮನಗರ : ಶೇ.೬೯.೭೧
೨೦. ದಾವಣಗೆರೆ : ಶೇ. ೬೯.೪೫
೨೧. ಹಾವೇರಿ : ಶೇ. ೬೭.೫೬
೨೨. ಬೀದರ್ : ಶೇ.೬೭.೩೧
೨೩. ಕೊಪ್ಪಳ : ಶೇ.೬೭.೨೦
೨೪. ಚಿಕ್ಕೋಡಿ : ಶೇ.೬೬.೭೬
೨೫. ಗದಗ : ಶೇ. ೬೬.೬೪
೨೬. ಬೆಳಗಾವಿ : ಶೇ.೬೫.೩೭
೨೭. ಬಳ್ಳಾರಿ : ಶೇ.೬೪.೪೧
೨೮. ಚಿತ್ರದುರ್ಗ : ಶೇ. ೫೯.೮೭
೨೯. ವಿಜಯಪುರ : ಶೇ. ೫೮.೮೧
೩೦. ರಾಯಚೂರು : ಶೇ.೫೮.೭೫
೩೧. ಕಲಬುರುಗಿ : ಶೇ. ೫೫.೭೦
೩೨. ಯಾದಗಿರಿ : ಶೇ.೪೮.೪

Leave a Reply

Your email address will not be published. Required fields are marked *