ಶಿಗ್ಗಾಂವಿ : ಬೈಕ್ ಕಳ್ಳರಿಬ್ಬರ ಬಂಧನ, 2.50 ಲಕ್ಷ ಮೌಲ್ಯದ 5 ಬೈಕ್ ವಶ
ವೀರಮಾರ್ಗ ನ್ಯೂಸ್ ಶಿಗ್ಗಾಂವಿ : ಮನೆಗಳ ಮುಂದೆ ನಿಲ್ಲಿಸಿದ 5 ಬೈಕ್ ಕಳವು ಮಾಡಿ, ಮಾರಾಟಕ್ಕೆ ಯುತ್ನಿಸಿದ ಇಬ್ಬರನ್ನು ಬಂಧಿಸುವಲ್ಲಿ ಶಿಗ್ಗಾಂವಿ ತಾಲೂಕಿನ ಹುಲಗೂರು ಪೊಲೀಸ್ ಠಾಣೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಬಂಧಿತರಿಂದ 2.50 ಲಕ್ಷ ರೂ. ಮೌಲ್ಯದ ಬೈಕ್‌ಗಳನ್ನು ಸೋಮವಾರ ವಶಪಡಿಸಿಕೊಳ್ಳಲಾಗಿದೆ.
ಗೌಂಡಿ ಕೆಲಸದ ಕಾರ್ಮಿಕರಾದ ಸವಣೂರ ತಾಲೂಕಿನ ಗೋನಾಳ ಗ್ರಾಮದ ಸಾಹಿಲ್ ಖಾದರಸಾಬ್ ತೀರ್ಥ ಶಿಗ್ಗಾಂವಿ ತಾಲೂಕಿನ ಹುಲಗೂರು ಪ್ಲಾಟ್ ನಿವಾಸಿ ಸಲೀಂಅಹ್ಮದ ದುದ್ದು ಸಾಬ್ ನರ್ತಿ ಬಂಧಿತರು.

ಘಟನೆ ವಿವರ: ಮಾ. 8 ರಂದು ಹುಲಗೂರು ಠಾಣೆ ವ್ಯಾಪ್ತಿಯ ಮಾದಾಪುರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಬೈಕ್ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಕಾಧಿಕಾರಿ ಅಂಶುಕುಮಾರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪೊಲೀಸ್ ತಂಡ, ಆರೋಪಿಗಳನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ಐದು ಬೈಕ್ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಬೈಕ್ ಕಳವು ಕುರಿತು ಹುಲಗೂರ 2, ತಡಸ 1, ಗುಡಗೇರಿ 1, ಸವಣೂರ ಠಾಣೆಯಲ್ಲಿ 1 ದೂರು ದಾಖಲಾಗಿತ್ತು ಪಿಎಸ್‌ಐ ನಿರೋಳ್ಳಿ ನೇತೃತ್ವದಲ್ಲಿ ಸಿಬ್ಬಂದಿ ರಮೇಶ ಕುರಿ, ವಿನಾಯಕ ಚಿನ್ನೂರ, ಜುಂಜಪ್ಪ ವಗನವರ, ಸುರೇಶ ವರ್ದಾನವರ, ರಮೇಶ ದಾನಮ್ಮನವರ, ಅಲ್ಲಾಭಕ್ಷ ನದ್ಯಾ, ದೇವೆಂದ್ರ ಬಿ.ಎಂ., ಮಂಜು ಈಳಗೇರ ಅವರು ಬೈಕ್‌ಗಳ ಸಮೇತ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ. ಹುಲಗೂರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.