
ಅತ್ಯಧಿಕ ಮೈಲೇಜ್ ನೀಡುತ್ತಿದ್ದು, ದೇಶಾಧ್ಯoತ ಭಾರೀ ಬೇಡಿಕೆ ಹೊಂದಿರುವ ಸುಜುಕಿ ಎಕ್ಸಸ್ ಮೋಟಾರ್ ಬೈಕ್ ಅನ್ನು ಕೆ.ಆರ್.ಪೇಟೆ ಗ್ರಾಮಾoತರ ಪೊಲೀಸ್ ಇನ್ಸ್ ಪೆಕ್ಟರ್ ಆನಂದೇಗೌಡ ಅವರು ಲೋಕಾರ್ಪಣೆ ಗೊಳಿಸಿ, ಶುಭ ಕೋರಿದರು
ಕೆ.ಆರ್.ಪೇಟೆ ಪಟ್ಟಣದ ಮೈಸೂರು ಚನ್ನರಾಯಪಟ್ಟಣ ರಸ್ತೆಯ ಹೇಮಾವತಿ ಬಡಾವಣೆಯಲ್ಲಿರುವ ಶ್ರೀ ಮಾರುತಿ ಸುಜುಕಿ ಮೋಟಾರ್ ಬೈಕ್ ಷೋ ರೂಮ್ ನಲ್ಲಿ ನಡೆದ ಸಮಾರಂಭದಲ್ಲಿ ಆನಂದೇಗೌಡ ಅವರು ಲ್ಯಾಪ್ ಟಾಪ್, ಮೊಬೈಲ್ ಚಾರ್ಜಿಂಗ್ ಸೇರಿದಂತೆ ಅತ್ಯಾಧುನಿಕ ಫಿಚರ್ಸ್ ಸೌಲಭ್ಯಗಳನ್ನು ಹೊಂದಿರುವ ಸುಜುಕಿ ಎಕ್ಸಸ್ ಮೋಟಾರ್ ಬೈಕ್ ಅನ್ನು ಬಿಡುಗಡೆ ಮಾಡಿ ಯುವ ಜನರು ಹಾಗೂ ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಮೋಟಾರ್ ಬೈಕ್ ಚಾಲನೆ ಮಾಡಬೇಕು. ಬೈಕ್ ಚಾಲನೆ ಮಾಡುವ ಸಮಯದಲ್ಲಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು…