ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶ : ಸದಾಶಿವಾನಂದಶ್ರೀ
ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶ : ಸದಾಶಿವಾನಂದಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ವಿದ್ಯಾರ್ಥಿಗಳ ಅಂತರಾತ್ಮದಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಹೊರತರುವುದೇ ಶಿಕ್ಷಣದ ಮುಖ್ಯ ಉದ್ದೇಶವಾಗಿದೆ. ಆ ಕಾರ್ಯವನ್ನು ಉಚಿತವಾಗಿ ಬಡ ಮಕ್ಕಳಿಗೆ ಭಾರತ ಸೇವಾ ಸಂಸ್ಥೆ ಆಶ್ರಯದಲ್ಲಿ ಮಾಡಿಕೊಂಡು ಬರುತ್ತಿರುವುದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ರವರ ಸೇವಾ ಮನೊಭಾವನೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗದಗಿನ ಶ್ರೀ ಶಿವಾನಂದ ಬೃಹನ್ ಮಠದ ಶ್ರೀ ಸದಾಶಿವಾನಂದ ಸ್ವಾಮಿಗಳು ನುಡಿದರು. ಪಟ್ಟಣದ ಶ್ರೀ ವೀರಕ್ತಮಠದ ಆವರಣದಲ್ಲಿ,…