
ಶಿಶು ಹೊಟ್ಟೆಯಲ್ಲಿ ಭ್ರೂಣ ಪತ್ತೆ : ಕೆಎಲ್‌ಇ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ
ವೀರಮಾರ್ಗ ನ್ಯೂಸ್ : ಬೆಳಗಾವಿ ಜಿಲ್ಲಾ : ಆರು ಲಕ್ಷ ಗರ್ಭಿಣಿಯರ ಪೈಕಿ ಓರ್ವರಲ್ಲಿ ಕಂಡುಬರುವ ನವಜಾತ ಶಿಶುವಿನ ಹೊಟ್ಟೆಯಲ್ಲಿ ಬೆಳಿಯುತ್ತಿದ್ದ ಭ್ರೂಣವನ್ನು ಕೆಎಲ್‌ಇ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತಗೆದಿರುವ ಅಪರೂಪದ ಘಟನೆ ನಡೆದಿದೆ.ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಚಿಕ್ಕಮಕ್ಕಳ ಶಸ್ತ್ರಚಿಕಿತ್ಸಕರು ಹೆರಿಗೆಯಾಗಿದ್ದ ಮಹಿಳೆಯ ನವಜಾತ ಶಿಶುವಿನ ಹೊಟ್ಟೆಯಲ್ಲಿ ಇದ್ದ ಭ್ರೂಣವನ್ನು ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತಗೆದಿದ್ದಾರೆ. ಮಹಾರಾಷ್ಟ್ರದ ಚಂದಗಡದ 7 ತಿಂಗಳ ಗರ್ಭಿಣಿ ಮಹಿಳೆಯ…