ಶ್ರೀ ದುರ್ಗಾದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಶ್ರೀಗಳಿಂದ ಚಾಲನೆ
ಶ್ರೀ ದುರ್ಗಾದೇವಿ ಉತ್ಸವ ಮೂರ್ತಿ ಮೆರವಣಿಗೆಗೆ ಶ್ರೀಗಳಿಂದ ಚಾಲನೆವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರಾಮಹೋತ್ಸವದ ಅಂಗವಾಗಿ ನಡೆದ, ಶ್ರೀ ದುರ್ಗಾದೇವಿ ನೂತನ ಉತ್ಸವ ಮೂರ್ತಿ ಮೆರವಣಿಗೆಗೆ ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ, ಕೆಂಡದಮಠದ ಶ್ರೀ ಶಿವಪುತ್ರಯ್ಯ ಸ್ವಾಮಿಜಿ ಪೂಜೆಸಲ್ಲಿಸುವ ಮೂಲಕ ಚಾಲನೆ ನೀಡಿದರು.ಮೆರವಣಿಗೆ ಸಕಲ ವಾಧ್ಯವೈಭವಗಳೊಂದಿಗೆ ಹೊಂಡದ ದುರ್ಗಾದೇವಿ ದೇವಸ್ಥಾನದ ಆವರಣದಿಂದ ಪ್ರಾರಂಭಗೊಂಡು ಪಟ್ಟಣದ ರಾಜಬೀದಿಗಳಲ್ಲಿ ಸಾಗಿಬಂದಿತು. ಮೆರವಣಿಗೆಯನ್ನು ಭಕ್ತರೂ ತಳಿರು ತೋರಣಕಟ್ಟಿ, ರಂಗೋಲಿಹಾಕಿ ಬರಮಾಡಿಕೊಂಡು ಉತ್ಸವಮೂರ್ತಿಗೆ…