ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವುದು ನೋವಿನ ಸಂಗತಿ : ಕುಮಾರಸ್ವಾಮಿಜಿ
ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವುದು ನೋವಿನ ಸಂಗತಿ : ಕುಮಾರಸ್ವಾಮಿಜಿವೀರಮಾರ್ಗ ನ್ಯೂಸ್ ಶಿಗ್ಗಾವಿ : ಇಂದಿನ ದಿನಮಾನಗಳಲ್ಲಿ ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಬಡವ, ಬಲ್ಲಿದ ಎನ್ನದೆ, ಸರ್ವರಿಗೂ ಸಮಾನ ಶಿಕ್ಷಣ ಸಿಗುವಂತಾದಾಗ ಸುಂದರ ಸುಭದ್ರ ನಾಡನ್ನು ಕಟ್ಟಬಹುದಾಗಿದೆ ಎಂದು ಸವಣೂರಿನ ಅಡವಿಸ್ವಾಮಿಮಠದ ಶ್ರೀ ಕುಮಾರ ಮಹಾಸ್ವಾಮಿಗಳು ಹೇಳಿದರು.ಸಮೀಪದ ಸದಾಶಿವಪೇಟೆ ಗ್ರಾಮದ ವೀರಕ್ತಮಠದಲ್ಲಿ ನಡೆದ ಲಿಂ. ಗುರು ಗದಿಗೇಶ್ವರರ ಹಾಗು ಲಿಂ. ಬಸವಣ್ಣೇಂದ್ರ ಸ್ವಾಮಿಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ಯುವಸಮೂಹಕ್ಕೆ ಮೊಬೈಲ್, ದೂರದರ್ಶನ ಮಾರಕವಾಗಿದ್ದು, ಅದರಿಂದ…