ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯ : ಪ್ರಕಾಶಾನಂದ

ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯ : ಪ್ರಕಾಶಾನಂದ
ವೀರಮಾರ್ಗ ನ್ಯೂಸ್ ರಾಣೇಬೆನ್ನೂರ :
ಮನುಷ್ಯ ಹಣಕ್ಕಿಂತ ಗುಣವನ್ನು ಪಾಲಿಸಬೇಕು. ಹಣದಿಂದ ಬದುಕುವುದಿಲ್ಲ. ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯವಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದ ಮಹಾರಾಜರು ನುಡಿದರು.
ಇಲ್ಲಿಯ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.

ದೇವಸ್ಥಾನ ಅಭಿವೃದ್ಧಿಪಡಿಸುವುದು ಅವಶ್ಯವಾಗಿದೆ. ಜೀವನದಲ್ಲಿ ಹೊರರಚನೆಯಾಗಬೇಕು. ದೇಹದಲ್ಲಿ ಹಳೆಯ ಜೀವ ಕೋಶಗಳು ಸತ್ತು ಹೊಸ ಜೀವ ಕೋಶಗಳು ಹುಟ್ಟುತ್ತವೆ. ಹಾಗೆಯೇ ಮನುಷ್ಯ ಹೊಸತನಕ್ಕೆ ಮುಂದಾಗಬೇಕು. ಮೌಲ್ಯಗಳನ್ನು ಪ್ರತಿಷ್ಟಾಪನೆ ಮಾಡಬೇಕಿದೆ. ಆ ಕೆಲಸ ಇಂತಹ ದೇವಸ್ಥಾನಗಳಿಂದ ಆಗುತ್ತದೆ. ಕಲಿಯುಗದಲ್ಲಿ ಸಂಘಕ್ಕೆ ಶಕ್ತಿಯಿದೆ ಎಂದರು.
ನಗರಸಭೆ ಸದಸ್ಯ ಮಲ್ಲಣ್ಣ ಅಂಗಡಿ ಮಾತನಾಡಿ, ಭಕ್ತಿಗೆ ಮತ್ತೊಂದು ಹೆಸರು ದೇವಾಂಗ ಸಮಾಜ. ಇಲ್ಲಿನ ಕ್ಷೇತ್ರ ಪವಿತ್ರವಾಗಿದೆ. ದೇವಸ್ಥಾನದಿಂದ ಮನಸ್ಸಿನ ಭಾವನೆಗಳು ಬದಲಾಗುತ್ತದೆ. ನಾನು ಎಂಬುವ ಮನೋಭಾವನೆಯನ್ನು ತೊರೆದು ದೇವರಿಗೆ ಮೊರೆ ಹೋಗಬೇಕು. ಸಮಾಜಕ್ಕೆ ನಮ್ಮನ್ನು ತೊಡಗಿಸಿಕೊಂಡಾಗ ಅಭಿವೃದ್ಧಿ ಸಾಧಿಸಲು ಸಾಧ್ಯವಿದೆ. ಸಮಾಜಕ್ಕೆ ಏನಾದರೂ ಕೊಡುಗೆ ಹೋದರೆ ಜೀವನಕ್ಕೆ ಅರ್ಥ ಬರುವುದಿಲ್ಲ ಎಂದರು.
ನಗರದ ವರ್ತಕ ಜಗದೀಶ ಶೆಟ್ರಗುರುವಿನಮಠ, ತಾಲೂಕ ದೇವಾಂಗ ಸಮಾಜದ ಕಾರ್ಯಾಧ್ಯಕ್ಷ ಗಣೇಶ ಶಿರಗೂರ, ಮುಖಂಡರಾದ ಸಿದ್ದಪ್ಪ ಚಿಕ್ಕಬಿದರಿ, ಕಪತಪ್ಪ ಸಾಲಿಮನಿ, ಮಹಾದೇವಪ್ಪ ಚಕ್ರಸಾಲಿ, ಶೋಭಾ ಮಾರನಾಳ, ಅನುರಾಧ ಗುಳೇದಗುಡ್ಡ, ಚೇತನಾ ಗುಡ್ಡದ, ಬಸವರಾಜ ಮೈಲಾರ, ಗಣೇಶ ಹಾವನೂರ, ಸಂಕಪ್ಪ ಮಾರನಾಳ, ಲಕ್ಷ್ಮೀಕಾಂತ ಹುಲಗೂರ, ಚಂದ್ರಣ್ಣ ಉದಗಟ್ಟಿ, ಜಯಾ ಕುಂಚೂರ, ಭೋಜರಾಜ ಗುಲಗಂಜಿ, ವಿಜಯಲಕ್ಷ್ಮಿ ಬೆಟಗೇರಿ, ನಾಗರತ್ನಾ ದಿಗಿದಿಗಿ, ಸರೋಜ ಕೊಪ್ಪದ, ಗಿರೀಶ ಗುಳೇದಗುಡ್ಡ, ಲಕ್ಷ್ಮಿ ಕದರಮಂಡಲಗಿ, ಗುಡದಯ್ಯ ನೀಲಗುಂದ, ಅಶೋಕ ದುರ್ಗದಶೀಮಿ, ಸುಮಾ ಹಳ್ಳಿ, ಗಣೇಶ ಸಾಲಗೇರಿ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *