ಬೇಡಿ ಬಂದ ಭಕ್ತರ ಇಷ್ಠಾರ್ಥಗಳನ್ನು ಸಿದ್ಧಿಸುವ ಮಾತೆ ದುರ್ಗಾಮಾತೆ : ಭರತ್

ಬೇಡಿ ಬಂದ ಭಕ್ತರ ಇಷ್ಠಾರ್ಥಗಳನ್ನು ಸಿದ್ಧಿಸುವ ಮಾತೆ ದುರ್ಗಾಮಾತೆ : ಭರತ್
ವೀರಮಾರ್ಗ ನ್ಯೂಸ್ ಶಿಗ್ಗಾವಿ :
ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕವಾಗಿ ಐತಿಹಾಸಿಕ ಮಹತ್ವ ಪಡೆದುಕೊಂಡ ಬಂಕಾಪುರದಲ್ಲಿ ಹೊಂಡದ ದುರ್ಗಾದೇವಿ ಭಕ್ತರ ಕಷ್ಟ ಕಾರ್ಪಣ್ಯಗಳನ್ನು ಕಳೆದು, ಇಷ್ಠಾರ್ಥಗಳನ್ನು ಸಿದ್ಧಿಸುವ ಶಕ್ತದಾತೆ ಯಾಗಿದ್ದಾಳೆ ಎಂದು ಬಿಜೆಪಿ ಮುಖಂಡ ಭರತ್ ಬೊಮ್ಮಾಯಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿಯ ಹೊಂಡದ ದುರ್ಗಾದೇವಿ ಜಾತ್ರಾ ಮಹೋತ್ಸವದ ಸಮಾರೋಪದ ಸಭೆಯಲ್ಲಿ, ವಿವಿಧ ಕ್ಷೇತ್ರದ ಸಾಧಕರು, ದಾನಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಹತ್ತಾರು ಮಠಗಳನ್ನು ಹೊಂದಿದ ಪಟ್ಟಣ, ಹಲುವಾರು ಕಲಾವಿಧರಿಗೆ ಜನ್ಮ ನೀಡಿ ಕಲೆ, ಸಾಹಿತ್ಯ, ಸಾಂಸ್ಕೃತಿಕ ಮಹತ್ವ ಪಡೆದುಕೊಂಡಿದೆ. ಅದರ ವೈಭವಕ್ಕೆ ಸಾಕ್ಷಿಬೂತವಾಗಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ನಡೆದಿರುವುದು ಸಂತಸ ತಂದಿದೆ ಎಂದು ಹೇಳಿದರು.

ಕಾಗಿನೆಲೆ ಕನಕ ಗುರುಪೀಠದ ಜಗದ್ಗುರುಗಳಾದ ನಿರಂಜನಾನಂದಪುರಿ ಮಹಾಸ್ವಾಮಿಗಳು ದೇವಸ್ಥಾನಕ್ಕೆ ಆಗಮಿಸಿ, ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ದರ್ಶನ ಆಶೀರ್ವಾದ ನೀಡಿದರು.
ಕೆಂಡದಮಠ ಶ್ರೀ ಶಿವಪುತ್ರಯ್ಯಸ್ವಾಮಿಜಿ, ರಾಜ್ಯ ಚುನಾವಣಾ ಆಯುಕ್ತ ಬಿ.ಎಸ್.ಸಂಗ್ರೇಶಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ತಹಸೀಲ್ದಾರ್ ರವಿ ಕೊರವರ, ಸಿಪಿಐಗಳಾದ ಸತ್ಯಪ್ಪ ಮಾಳಗೊಂಡ, ಅನಿಲಕುಮಾರ ಗೋಪು ರಾಠೋಡ, ಉಪ ನೊಂದಣಾಧಿಕಾರಿ ವಿನಯಕಿರ್ತಿ ಆರ್, ಸಾಹಿತಿ ಶಿವಾನಂದ ಮ್ಯಾಗೇರಿ, ಪಿಎಸ್‌ಐ ಶರಣಪ್ಪ ಹಂಡ್ರಗಲ್ ಸೇರಿದಂತೆ ಶ್ರೀದುರ್ಗಾದೇವಿ ಸೇವಾ ಸಮೀತಿ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *