ಎಫ್ಐಡಿ ಮುಖಾಂತರ ಗೊಬ್ಬರ ಖರೀದಿಸಿ ಬೆಳೆ ಬೆಳೆಯುವುದು ಕಷ್ಟ,


ಎಫ್ಐಡಿ ಮುಖಾಂತರ ಗೊಬ್ಬರ ಖರೀದಿಸಿ ಬೆಳೆ ಬೆಳೆಯುವುದು ಕಷ್ಟ, “

ಆದೇಶ ಈ ವರ್ಷ ಬೇಡ ಮುಂದಿನ ವರ್ಷ ದಿಂದ ಹಂತ ಹಂತವಾಗಿ ಮಾಡಿ

ವೀರಮಾರ್ಗ ನ್ಯೂಸ್ : ಹಾವೇರಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ರಸಗೊಬ್ಬರ. ಬಿತ್ತನೆ ಬೀಜ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಫ್ ಐ ಡಿ ಮುಖಾಂತರ ರೈತರು ಗೊಬ್ಬರ ಖರೀದಿ ಮಾಡಿ ಬೆಳೆ ಬೆಳೆಯುವುದು ಕಷ್ಟ ಆದ್ದರಿಂದ ಮುಂದಿನ ವರ್ಷದಿಂದ ಹಂತ ಹಂತವಾಗಿ ಈ ಆದೇಶವನ್ನು ಜಾರಿಗೆ ತರಬೇಕೆಂದು ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ತಿಳಿಸಿದ್ದಾರೆ.

ಮಧ್ಯ ಪ್ರಾಚ್ಯ ದಲ್ಲಿ ಯುದ್ಧ ಉಂಟಾಗಿರುವ ಬಿಕ್ಕಟ್ಟಿನಿಂದ ಯೂರಿಯಾ ಮತ್ತು ಡಿಎಪಿ ಮುಂತಾದ ರಸಗೊಬ್ಬರ ಬೆಲೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ವಿದೇಶಗಳಿಂದ ಬರುತ್ತಿದ್ದ ಗೊಬ್ಬರ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಉತ್ಪಾದನೆ ಕೂಡ ಕಡಿತವಾಗಿದೆ ಆದಕಾರಣ ಜಿಲ್ಲಾಧಿಕಾರಿಗಳು ಹಾಗೂ ಕೃಷಿ ಜಂಟಿ ನಿರ್ದೇಶಕರು ಜಿಲ್ಲೆಗೆ ಸಮರ್ಪಕವಾಗಿ ಬೆಕಾಗುವಷ್ಟು ಗೊಬ್ಬರ ಕೊಡಿಸಲು ಪ್ರಯತ್ನ ಮಾಡಬೇಕು ಈ ವರ್ಷ ಮುಂಗಾರು ಚುರುಕುಗೊಂಡಿದ್ದು ರೈತರಲ್ಲಿ ಸಂತಸ ಮೂಡಿದೆ ರೈತರಿಗೆ ಬಿತ್ತನೆ ಮಾಡಲು ಸರಿಯಾದ ಸಮಯಕ್ಕೆ ಗೊಬ್ಬರ ಸಿಗದೇ ಹೋದರೆ ರೈತರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ 2008 ರಲ್ಲಿ ಇದೇ ಗೊಬ್ಬರ ಅಭಾವ ಸೃಷ್ಟಿಯಾಗಿ ಅಂದಿನ ಸರ್ಕಾರ ಗೋಲಿಬಾರ್ ಮಾಡಿಸಿ ಎರಡು ಜನ ರೈತರನ್ನು ಹತ್ಯೆ ಮಾಡಲಾಯಿತು ಅದು ಮರುಕಳಿಸದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದರು

ಬಹಳ ಮುಖ್ಯವಾಗಿ ಎಫ್ ಐಡಿ ಮುಖಾಂತರ ಸರಕಾರ ಬಗರ್ ಹುಕುಂ ರೈತರಿಗೆ ರಸಗೊಬ್ಬರ ಸರಬರಾಜು ಮಾಡುವುದಿಲ್ಲ ಬಗರ್ ಹುಕುಂ ಸಾಗುವಳಿದಾರರಿಗೆ ಗೊಬ್ಬರ ಸಿಗದೇ ಇದ್ದರೆ ಉತ್ಪಾದನೆ ಕುಂಟಿತವಾಗಿ ಆಹಾರ ಧಾನ್ಯದ ಸಮಸ್ಯೆ ತಲೆ ದೂರ ಬಹುದಾಗಿದೆ ಅಲ್ಲದೆ ರೈತರು ಬಿತ್ತನೆ ಮಾಡಲು ಸಾಧ್ಯವಾಗದೆ ಆಹಾರ ಉತ್ಪಾದನೆಗಳ ಉತ್ಪಾದನೆ ಕುಸಿತವಾಗುವ ಸಾಧ್ಯತೆ ಇದೆ ಆಗ ರೈತ ಸಾಲದ ಸುಳಿಯಲ್ಲಿ ಸಿಲುಕಿ ಕೊಳ್ಳುತ್ತಾನೆ ಎಂದರು

ಈ ಹಿನ್ನೆಲೆಯಲ್ಲಿ ಸರ್ಕಾರ ಬಗರ ಹುಕುಂ ಸಾಗುವಳಿದಾರರಿಗೂ ಗೊಬ್ಬರ ವಿತರಿಸಲು ಮಾನದಂಡ ರೂಪಿಸಬೇಕು ಯೂರಿಯಾ ಮತ್ತು ಡಿಎಪಿ ಗೊಬ್ಬರವನ್ನು ಎಲ್ಲಾ ರೈತರಿಗೂ ತಲುಪುವಂತೆ ವ್ಯವಸ್ಥೆ ಮಾಡಬೇಕು ಇದಕ್ಕಾಗಿ ಇಂದಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ಎಂದರು

ಪ್ರಧಾನ ಮಂತ್ರಿಗಳು ಸಾಯುವ ಕೃಷಿ ಮಾಡಬೇಕೆಂದು ಕರೆ ಕೊಟ್ಟಿದ್ದಾರೆ ಅದು ನಿಜ ಆದರೆ ಅದು ಇಂದೇ ಮಾಡಲು ಸಾಧ್ಯವಿಲ್ಲ ಮೊದಲು ಸಾವಯವ ಕೃಷಿಗೆ ಸರ್ಕಾರಗಳು ಪ್ರೋತ್ಸಾಹ ನೀಡಬೇಕು ಸಾವಯವ ಕೃಷಿಯನ್ನು ತಯಾರಿಸಲು ಬೇಕಾಗುವ ಹಸು ಖರೀದಿಸಲು ಮತ್ತು ಕೊಟ್ಟಿಗೆ ನಿರ್ಮಾಣ ಮಾಡಲುಮುಂತಾದ ಸಾಮಗ್ರಿಗಳಿಗೆ ಶೇಕಡ 50ರಷ್ಟು ಸಬ್ಸಿಡಿ ನೀಡಬೇಕೆಂದರು. ಸರ್ಕಾರಗಳು ಆದರ್ಶದ ಮಾತುಗಳನ್ನು ಆಡುತ್ತವೆ ಅರ್ಧ ಗೊಬ್ಬರ ಹಾಕಿ ಅನ್ನುತ್ತಾರೆ ಅದು ಹೇಗೆ ಸಾಧ್ಯ ಹೇಳುವುದು ಸುಲಭ ಆಚರಣೆ ಕಷ್ಟ. ರೈತನಿಗೆ ಮಾತ್ರ ಗೊತ್ತು ಯಾವ ಬೆಳೆ ಬೆಳೆಯಬೇಕು ಯಾವ ಬೆಳೆಗೆ ಎಷ್ಟು ಗೊಬ್ಬರ ಹಾಕಬೇಕು ಯಾವಾಗ ಬಿತ್ತನೆ ಮಾಡಬೇಕು ಯಾವಾಗ ಕಳೆತಗಿಯಬೇಕು ಯಾವಾಗ ಬೆಸಾಯ ಮಾಡಬೇಕೆಂದು ರೈತನಿಗೆ ಗೊತ್ತು ಅದನ್ನು ಸರ್ಕಾರವಾಗಲಿ ಅಧಿಕಾರಿಗಳಾಗಲಿ , ರೈತರಿಗೆ ಬೋಧನೆ ಮಾಡುವುದನ್ನು ಬಿಡಬೇಕು ಎಂದರು.

ರಾಜ್ಯಾದ್ಯಂತ ಪರವಾನಿಗೆ ಭೂ ಮಾಪಕರು ಮುಷ್ಕರ ಮಾಡುತ್ತಿದ್ದಾರೆ ಅದರಿಂದ ರೈತರಿಗೆ ಬಹಳಷ್ಟು ಅನಾನುಕೂಲವಾಗುತ್ತಿದೆ ಸರ್ವೆ ಹದ್ದು ಬಂದೋಬಸ್ತ್ ಪೊಡಿ ಮುಕ್ತಾ ಅಭಿಯಾನ ನ್ಯಾಯಾಲಯದ ಪ್ರಕರಣಗಳಿಗೆ ತೊಂದರೆಯಾಗಿದೆ ರಾಜ್ಯ ಸರ್ಕಾರ ಕೂಡಲೇ ಗಮನಹರಿಸಿ ಮುಷ್ಕರ ನಿರತ ಭೂ ಮಾಪಕರ ಸಮಸ್ಯೆಗಳನ್ನು ಬಗೆಹರಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಹಾವೇರಿ ಜಿಲ್ಲೆಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ