ಜಿಲ್ಲೆಯ ಶಾಸಕರಿಗೆ ಅಭಿನಂದನೆಗಳು ಭುವನೇಶ್ವರ್ ಶಿಡ್ಲಾಪುರ.

ಜಿಲ್ಲೆಯ ಶಾಸಕರಿಗೆ ಅಭಿನಂದನೆಗಳು ಭುವನೇಶ್ವರ್ ಶಿಡ್ಲಾಪುರ

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಕಾರಣ ಬೆಳೆಗಳು ಒಣಗುತ್ತಿವೆ ಬಿತ್ತಿದ ಬೀಜಗಳು ಮೊಳಕೆ ಒಡೆದು ಒಣಗಿವೆ ಮತ್ತೆ ಮರು ಬಿತ್ತನೆಗಾಗಿ ರೈತ ಕಾಯುತ್ತಿದ್ದಾನೆ ಮಳೆ ಇಲ್ಲ ಇಂತಹ ಸಮಯದಲ್ಲಿ ಸರಕಾರ ಮೋಡ ಬಿತ್ತನೆ ಕಾರ್ಯಕ್ರಮವನ್ನು ಕೈಗೊಳ್ಳಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಪತ್ರಿಕೆಗಳ ಮುಖಾಂತರ ಸುದ್ದಿಮಾಡಿ ಸರ್ಕಾರದ ಗಮನ ಸೆಳೆದಿದ್ದರು .

ಅದರಂತೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಸರ್ ಹಾಗೂ ಜಿಲ್ಲೆಯ ಆರು ಶಾಸಕರು ಅದರ ಬಗ್ಗೆ ಚರ್ಚಿಸಿ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಸ್ವಂತ ಖರ್ಚಿನಿಂದ ಮೋಡ ಬಿತ್ತನೆ ಮಾಡುತ್ತೇವೆ ಎಂದು ಹೇಳಿರುವುದು ಜಿಲ್ಲೆಯ ರೈತರಿಗೆ ತುಂಬಾ ಸಂತೋಷವಾಗಿದೆ ಎರಡು ಮೂರು ದಿನಗಳಲ್ಲಿ ಮೋಡ ಬಿತ್ತನೆ ಕಾರ್ಯಕ್ರಮವನ್ನು ಮಾಡುತ್ತಿವೆ ಎಂದು ಸನ್ಮಾನ್ಯ ಶ್ರೀ ಪ್ರಕಾಶ್ ಕೋಳಿವಾಡ್ ರಾಣಿಬೆನ್ನೂರು ಶಾಸಕರು ಪ್ರಕಟಣೆ ಮಾಡಿದ್ದು ತುಂಬಾ ಸಂತೋಷವಾಗಿದೆ ಜಿಲ್ಲೆಯ ಎಲ್ಲ ಶಾಸಕರು ಸೇರಿಕೊಂಡು ರೈತರ ಬೆಳೆ ಉಳಿಸಿಕೊಡುವುದು ರೈತ ಕಷ್ಟದಲ್ಲಿದ್ದಾಗ ಅವನಿಗೆ ನಾವಿದ್ದೇವೆ ಎಂದು ಧೈರ್ಯ ಹೇಳಿರುವುದು ತುಂಬಾ ಸಂತೋಷದ ಸಂಗತಿ ಆಗಿದೆ ಮತ್ತು ರಾಜ್ಯ ಸರ್ಕಾರ ಆದಷ್ಟು ಬೇಗನೆ ಕೃಷಿ ಮಂತ್ರಿಗಳನ್ನು ನೇಮಕ ಮಾಡಿ ರಾಜ್ಯದ ರೈತರ ಕಷ್ಟಗಳಿಗೆ ಸ್ಪಂದಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಧನ್ಯವಾದಗಳು ತಿಳಿಸಿದ್ದಾರೆ