ಸಹಕಾರ ಕ್ಷೇತ್ರ ಅಭಿವೃದ್ಧಿ ರಾಷ್ಟದ ಪ್ರಗತಿಗೆ ಮುನ್ನುಡಿ : ಬಸವರಾಜ ಅರಬಗೊಂಡ
ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಸಹಕಾರ ಕ್ಷೇತ್ರ ಅಭಿವೃದ್ಧಿಗೊಂಡಲ್ಲಿ ಮಾತ್ರ ರಾಷ್ಟದ ಪ್ರಗತಿಗೆ ಮುನ್ನುಡಿಯಾಗಲಿದೆ. ಎಂದು ಕೇಂದ್ರ ಸರ್ಕಾರ ಸಹಕಾರ ಇಲಾಖೆಯನ್ನು ಪ್ರತ್ಯೇಕಗೊಳಿಸಿರುವದು ಸಂತಸ ಸಂಗತಿಯಾಗಿದೆ ಎಂದು ಸಹಕಾರ ಮಹಾ ಮಂಡಳ ರಾಜ್ಯ ಪದಾಧಿಕಾರಿ ಬಸವರಾಜ ಅರಬಗೊಂಡ ತಿಳಿಸಿದರು.
ಸವಣೂರ ಪಟ್ಟಣದ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಂದು ಸಹಕಾರ ಸಮೃದ್ಧಿ ಸಪ್ತಾಹ ಅಂಗವಾಗಿ ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಯೂನಿಯನ್, ಧಾರವಾಡ ಕೆಸಿಸಿ ಬ್ಯಾಂಕ್, ಜಿಲ್ಲಾ ಹಾಲು ಒಕ್ಕೂಟ, ತಾಲೂಕು ಸಹಕಾರ ಸಂಘಗಳ ಒಕ್ಕೂಟ ಸಹಯೋಗದಲ್ಲಿ ಸಹಕಾರ ಜಾಗೃತಿ ರ‍್ಯಾಲಿ ಹಾಗೂ ಡಿಜಿಟಲ್ ಬ್ಯಾಂಕಿಂಗ್ ಕುರಿತು ಸಾರ್ವಜನಿಕ ಉಪನ್ಯಾಸ ಕಾರ್ಯಕ್ರಮ ಮತ್ತು ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಇಲಾಖೆ ಹಾಗೂ ಸರ್ವ ಸಹಕಾರ ಸಂಘಗಳು ಒಟ್ಟಾಗಿ ಸಹಕಾರ ಸಂಘಗಳ ಕಾರ್ಯ ಕುರಿತು ಜಾಗೃತಿ ಮೂಡಿಸುವ ಮೂಲಕ ಸಹಕಾರ ಸಪ್ತಾಹವನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳನ್ನು ಹಾಗೂ ಯುವ ಜನತೆಯನ್ನು ಸಹಕಾರ ಕ್ಷೇತ್ರದಲ್ಲಿ ಹೆಚ್ಚು ತೊಡಗಲು ಉಪನ್ಯಾಸ ಹಾಗೂ ಸಾಮಾಜಿಕ ಕಾರ್ಯಗಳನ್ನು ಏರ್ಪಡಿಸಿರುವದು ಶ್ಲಾಘನೀಯವಾಗಿದೆ ಎಂದರು.
ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸುಭಾಸ ಗಡೆಪ್ಪನವರ ಮಾತನಾಡಿ, ಸಹಕಾರ ರಂಗದೊಂದಿಗೆ ಗ್ರಾಮೀಣ ಅಭಿವೃದ್ಧಿ ಹಾಗೂ ರೈತರ ಸಮಗ್ರ ಅಭಿವೃದ್ಧಿಗಾಗಿ ಕೆಸಿಸಿ ಬ್ಯಾಂಕ್ ಶೇ. ೩ರಷ್ಟು ಬಡ್ಡಿದರದಲ್ಲಿ ವಿವಿಧ ಸಾಲ ವಿತರಣೆಗೆ ಮುಂದಾಗಿದೆ. ರೈತರು ಉಪ ಕಸಬು ಹೊಂದುವದು ಅವಶ್ಯವಾಗಿದೆ. ಆದ್ದರಿಂದ, ಸಹಕಾರ ರಂಗದಲ್ಲಿ ತರಬೇತಿ ಸಹ ಏರ್ಪಡಿಸಲಾಗುತ್ತಿದೆ. ಯುವ ಜನತೆ ಸದುಪಯೋಗವನ್ನು ಪಡೆದು ಸಹಕಾರಂವನ್ನು ಮತ್ತಷ್ಟೂ ಬಲ ಪಡೆಸಬೇಕು ಎಂದರು.
೧೦ ಯುವಕರು ರಕ್ತದಾನ ಕೈಗೊಂಡರು. ಆಪ್ತ ಸಮಾಲೋಚಕರಾದ ರೇವಣಸಿದ್ದಪ್ಪ ತೆಂಬದ, ಮಹಾಂತೇಶ ಹೊಳೆಮ್ಮನವರ, ರೋಜಾ ನದಾಫ್ ಹಾಗೂ ಸಿಬ್ಬಂದಿ ನೇತೃತ್ವ ವಹಿಸಿದ್ದರು.
ಯೂನಿಯನ್ ಜಿಲ್ಲಾ ಅಧ್ಯಕ್ಷ ಧರಿಯಪ್ಪಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ವೇಳೆಯಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್ ವತಿಯಿಂದ ತಾಲೂಕಿನ ಗ್ರಾಮೀಣ ಪ್ರದೇಶಗಳ ಒಟ್ಟು ೧೨ ಸಹಕಾರ ಸಂಘಗಳ ಸದಸ್ಯರಿಗೆ ಕೃಷಿ ಮಾಧ್ಯಮಿಕ ಸಾಲ ಮಂಜೂರಿ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರ ರಂಗದ ಪ್ರಮುಖರಾದ ಶಶಿಧರ ಯಲಿಗಾರ, ಶಿವಾನಂದ ರಾಮಗೇರಿ, ಬಿ.ಎಂ.ಪಾಟೀಲ, ಶಿದ್ದಲಿಂಗೇಶ್ವರ ಶೀಲವಂತರ, ಮಲ್ಲಪ್ಪ ಲಮಾಣಿ, ಸಿದ್ದಪ್ಪ ವಡವಿ, ರಾಮಣ್ಣ ಕಳಸದ, ನಿಂಗನಗೌಡ ಪಾಟೀಲ, ಬಸನಗೌಡ ಪಾಟೀಲ, ಸರೋಜಾ ರಾಯ್ಕರ್, ರಾಜೇಶ್ವರಿ ಬುಶೆಟ್ಟಿ ಹಾಗೂ ಇತರರು ಪಾಲ್ಗೊಂಡಿದ್ದರು.
ಬ್ರೇಕಿಂಗ್ ಬ್ರೇಕಿಂಗ್ ಸುದ್ದಿ
ಭೂ ದಾಖಲೆಗಳ ಸಹಾಯಕ ಕಛೇರಿಯ ಸಿಬ್ಬಂದಿ ರಾಮಪ್ಪ ದಾಸರ್ 5000 ಹಣ ಪಡೆದು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ?
ದಾವಣಗೆರೆ ಜಿಲ್ಲೆಯ ಲೋಕಾಯುಕ್ತ ಎಸ್ ಪಿ ಕೌಲಪುರೆ ನೇತೃತ್ವದ ತಂಡ ಹರಿಹರ ತಾಲೂಕು ಕಚೇರಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಾರ್ಯಾಲಯದ ಅಧಿಕಾರಿಯಾದ ರಾಮಪ್ಪ ದಾಸರ್( ಮೇಲ್ವಿಚಾರಕರು) ರವರ ಮೇಲೆ ದಿಢೀರ್ ದಾಳಿಯನ್ನು ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಪ್ರತಿಯೊಂದುದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ.