ಸಿದ್ದರಾಮಯ್ಯ ಎದುರು ಪ್ರದೀಪ್ ಈಶ್ವರ್ ವಿವರಣೆ!!
ವೀರಮಾರ್ಗ ನ್ಯೂಸ್ : ಬೆಂಗಳೂರು : ಚಿಕ್ಕಬಳ್ಳಾಪುರ ಶಾಸಕರಾದ ಪ್ರದೀಪ್ ಈಶ್ವರ್ ಅವರು ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿ ಕೆಂಪೇಗೌಡ ಜಯಂತಿ ವೇಳೆ ನಡೆದ ಘಟನೆಯನ್ನು ವಿವರಿಸಿದರು.
ಜೆಡಿಎಸ್, ಬಿಜೆಪಿ ಕಾರ್ಯಕರ್ತರು ಚಪ್ಪಲಿ ಎಸೆದಿದ್ದಲ್ಲದೆ ತಮ್ಮ ಹಾಗೂ ತಮ್ಮ ಕುಟುಂವನ್ನು ನಿಂದಿಸಿದ್ದನ್ನು ವಿವರಿಸಿ ಪ್ರದೀಪ್ ಅವರು ಕಣ್ಣೀರು ಹಾಕಿದರು. ಪ್ರದೀಪ್ ಅವರಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ ಅವರು, ರಾಜಕಾರಣದಲ್ಲಿ ಇಂಥಹ ಘಟನೆಗಳು ಸಾಮಾನ್ಯ. ಇಂಥವನ್ನು ಎದುರಿಸಬೇಕು. ಇದರಿಂದ ಧೃತಿಗೆಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಎಂದರು.
ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಸಿದ್ದರಾಮಯ್ಯ ಅವರು ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ತಿಳಿಸಿದರು. ಪೋಲೀಸರ ಸಮ್ಮುಖದಲ್ಲೇ ಅದರಲ್ಲೂ ಆಡಳಿತ ಪಕ್ಷದ ಶಾಸಕರಿಗೆ ಈ ರೀತಿ ಆಗಿರುವುದರ ಬಗ್ಗೆ ಸಿದ್ದರಾಮಯ್ಯ ಅವರು ಬೇಸರ ವ್ಯಕ್ತಪಡಿಸಿದರು. ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕ್ರಮ ಜರಗಿಸಬೇಕು ಎಂದರು.
ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಮಧು ಬಂಗಾರಪ್ಪ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾರಿನಲ್ಲಿ ಅಲ್ಲ… ಬಸ್ಸಿನಲ್ಲಿ ಅಲ್ಲ… ಹೊಸ ಟ್ರ್ಯಾಕ್ಟರ್‌ನಲ್ಲೇ ಗೋವಾ ಪ್ರವಾಸ!
ಹಾವೇರಿ ಜಿಲ್ಲೆ : ಸವಣೂರು ತಾಲೂಕಿನ ಶಿಶುನಾಳ ಗ್ರಾಮದ 16 ಯುವ ರೈತರು ತಮ್ಮ ಹೊಸ ಟ್ರ್ಯಾಕ್ಟರ್‌ನಲ್ಲೇ ಗೋವಾ ಪ್ರವಾಸಕ್ಕೆ ಹೊರಟು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದಾರೆ.
ತಮ್ಮ ಜೀವನಾಧಾರವಾದ ಟ್ರ್ಯಾಕ್ಟರ್‌ನನ್ನೇ ಪ್ರವಾಸದ ವಾಹನವಾಗಿ ಆಯ್ಕೆ ಮಾಡಿಕೊಂಡ ಈ ಯುವಕರು, ಸ್ನೇಹ, ಕೃಷಿ ಮತ್ತು ಗ್ರಾಮೀಣ ಬದುಕಿನ ಮೇಲಿನ ಹೆಮ್ಮೆಯನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಇವರ ಈ ವಿಶಿಷ್ಟ ಪ್ರಯಾಣ ಸಾವಿರಾರು ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದ್ದು, ಸೃಜನಶೀಲತೆ, ಒಗ್ಗಟ್ಟು ಮತ್ತು ರೈತರ ಮೇಲಿನ ಅಭಿಮಾನವನ್ನು ಹೆಚ್ಚಿಸಿದೆ.
ಐಷಾರಾಮಿ ವಾಹನಗಳಲ್ಲೇ ಸಂತೋಷ ಸಿಗುವುದಿಲ್ಲ; ಆತ್ಮವಿಶ್ವಾಸ, ಸ್ನೇಹ ಮತ್ತು ತಮ್ಮ ಬೇರುಗಳ ಮೇಲಿನ ಹೆಮ್ಮೆಯಲ್ಲಿಯೇ ನಿಜವಾದ ಸಂತೋಷ ಅಡಗಿದೆ ಎಂಬುದನ್ನು ಈ ಯುವಕರು ಸಾಬೀತುಪಡಿಸಿದ್ದಾರೆ.
“ಜವಾರಿ” ಹುಡುಗರ ಈ ಟ್ರ್ಯಾಕ್ಟರ್ ಯಾನ ಈಗ ಅನೇಕರಿಗೆ ಮರೆಯಲಾಗದ ನೆನಪಿನ ಜೊತೆಗೆ ಸ್ಫೂರ್ತಿಯ ಕಥೆಯಾಗಿದೆ.
ವರದಿ: ಚನ್ನೇಶ್ ಕೆ ಎಂ
ಬೆಂಗಳೂರು