ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ರಾಣೇಬೆನ್ನೂರು ತಾಲೂಕ ನದಿಹರಳಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ನದಿಹರಳಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಮಾನ್ಯ ಶಾಸಕರು ಶ್ರೀ ಪ್ರಕಾಶ ಕೋಳಿವಾಡ ಇವರ ನೇತೃತ್ವದಲ್ಲಿ ಹಾಗೂ ತಾಲೂಕ ಆಡಳಿತ ಅಧಿಕಾರಿಗಳು ಆರ್ ಎಚ್ ಭಾಗವನ ಹಾಗೂ ಇಲಾಖೆಯ ಸಮಸ್ತ ಅಧಿಕಾರಿಗಳೊಂದಿಗೆ ಗ್ರಾಮ ಪಂಚಾಯಿತಿ ಸಮಸ್ತ ಸಾರ್ವಜನಿಕರೊಂದಿಗೆ ಸಸಿಗೆ ನಿರುಣಿಸುವದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಈ ಒಂದು ಜನಸ್ಪಂದನ ಕಾರ್ಯಕ್ರಮಕ್ಕೆ ಸರ್ವರನ್ನು ಪುಷ್ಪ ಕೊಡುವದರ ಮೂಲಕ ಸ್ವಾಗತಸಲಾಯಿತು.
ಈ ಒಂದು ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸಿದ ಹುಲಿಕಟ್ಟಿ ನದಿಹರಳಹಳ್ಳಿ ವಡೆರಾಯನಹಳ್ಳಿ ಗ್ರಾಮಸ್ಥರ ಕುಂದು ಕೊರತೆಯ ಅರ್ಜಿಯನ್ನು ಸ್ವೀಕರಿಸಿ ಕೆಲಹೊಂದನ್ನು ಸ್ಥಳದಲ್ಲೇ ಭಗೀಹರಿಸಿ ಕೆಲಹೊಂದನ್ನು ಬಗೆಹರಿಸಲು ಸಲ್ಪ ಕಾಲಾವಕಾಶ ತೆಗೆದುಕೊಳ್ಳಲಾಯಿತು ಹಾಗೂ ವಿಧವಾ ವೇತನ ಇಂದಿರಾ ವೃಧ್ಯಾಪ ವೇತನ ಅರ್ಜಿ ತೆಗೆದುಕೊಂಡು ಬಂದ ಅರ್ಜಿದಾರರಿಗೆ ಸ್ಥಳದಲ್ಲೇ ಮುಂಜೂರಾತಿ ಆದೇಶ ಪತ್ರ ಕೊಡಲಾಯಿತು.
ಸ್ವಾಕರವೇ ತಾಲೂಕ ಅಧ್ಯಕ್ಷರು ಚಂದ್ರಪ್ಪ ಬಣಕಾರ ಹಾಗೂ ಹುಲಿಕಟ್ಟಿ ಗ್ರಾಮಸ್ಥರು ಸೇರಿಕೊಂಡು ಗ್ರಾಮದಲ್ಲಿ ನೆಡೆಯಬೇಕಾದ ಕೆಲಸ ಕಾರ್ಯಗಳ ಬಗ್ಗೆ ಅರ್ಜಿಗಳನ್ನು ಗ್ರಾಮಸ್ಥರೊಂದಿಗೆ ಶಾಸಕರ ಸಮ್ಮುಖದಲ್ಲಿ ಶಾಸಕರಿಗೆ ಅರ್ಜಿ ಕೊಡಲಾಯಿತು ನದಿರಳಹಳ್ಳಿಗೆ ಬರುವ ಬಸ್ ವೇಳಾ ಪಟ್ಟಿ ಸರಿಪಡಿಸುವ ಕುರಿತು ಬಸ್ ತುಂಗದಾಣ ಮಾಡುವ ಕುರಿತು ಶಾಲೆಯ ಶೌಚಾಲಯ ಪೂರ್ಣಗೊಳಿಸುವ ಕುರಿತು ಸ್ಮಶಾನಕ್ಕೆ ದಾರಿ ದೊರಕಿಸುವ ಕುರಿತು ಬೀದಿ ನಾಯಿಗಳ ಹಾವಳಿಯಿಂದ ಗ್ರಾಮಸ್ಥರನ್ನು ಸುರಕ್ಷಿಸುವ ಕುರಿತು ಗ್ರಾಮದಲ್ಲಿರುವ ಇತಿಹಾಸಿಕ ಗರಡಿ ಮನೆಯನ್ನು ಹೊಸದಾಗಿ ಅಭಿವೃದ್ಧಿ ಪಡಿಸುವ ಕುರಿತು ನಮ್ಮ ಮನೆಯ ರಸ್ತೆ ಬದಿಯಲ್ಲಿ ಬೀದಿ ದೀಪ ಕಂಬ ಹಾಕುವ ಕುರಿತು ಒಂದನೇ ಅಂಗನವಾಡಿ ಶಾಲೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವ ಕುರಿತು ನಮ್ಮ ಗ್ರಾಮಕ್ಕೆ ಇದುವರೆಗೂ ಕಸದ ಬುಟ್ಟಿ ಕೊಟ್ಟಿರುವುದಿಲ್ಲ ಕೂಡಲೇ ಕಸದ ಬುಟ್ಟಿಯನ್ನು ಕೊಡುವ ಕುರಿತು ಮೂರು ಗ್ರಾಮಗಳಿಗೆ ಒಬ್ಬೊಬ್ಬರಂತೆ ಸ್ವಚ್ಛತೆಯ ಸಿಪಾಯಿಗಳನ್ನ ನೇಮಕ ಮಾಡಿಕೊಳ್ಳುವ ಕುರಿತು ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಅರ್ಜಿಗಳನ್ನು ಕೊಟ್ಟು ಆದಷ್ಟು ಬೇಗನೆ ಈಡೇರಿಸಿ ಎಂದು ಮನವಿ ಪತ್ರ ಕೊಡಲಾಯಿತು.
ನದಿಹರಳಹಳ್ಳಿ ಹಾಗೂ ವಡೆರಾಯನಹಳ್ಳಿ ಗ್ರಾಮಸ್ಥರು ಸಹ ಜನಸ್ಪಂದನ ಕಾರ್ಯಕ್ರಮದಲ್ಲಿ ತಮ್ಮ ಗ್ರಾಮದಲ್ಲಿ ಹಾಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಹಾಗೂ ಕುಂದು ಕೊರತೆಯ ಬಗ್ಗೆ ಸಾಕೋಷ್ಟು ಅರ್ಜಿಗಳನ್ನು ಮಾನ್ಯ ಶಾಸಕರಿಗೆ ಕೊಟ್ಟು ಆದೊಷ್ಟು ಬೇಗನೆ ನಮ್ಮ ಮನವಿಗೆ ಸ್ಪಂದಿಸಿ ಕೊಟ್ಟ ಅರ್ಜಿಗಳನ್ನು ತಮ್ಮ ಗಮನಕ್ಕೆ ತೆಗೆದುಕೊಂಡು ಸಮಸ್ಯೆಗಳನ್ನು ಈಡೇರಿಸಿ ಎಂದು ಸಾರ್ವಜನಿಕರು ಶಾಸಕರಿಗೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣ ಇಲಾಖೆ ಅಧಿಕಾರಿಗಳು ಶಿಶು ಮತ್ತು ಮಕ್ಕಳ ಪಾಲನ ಪೋಷಣ ಇಲಾಖೆ ಅಧಿಕಾರಿಗಳು ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮ ಆಡಳಿತ ಅಧಿಕಾರಿಗಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೃಷಿ ಇಲಾಖೆ ಅಧಿಕಾರಿಗಳು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೆ ಎಸ್ ಆರ್ ಟಿ ಸಿ ಇಲಾಖೆ ಅಧಿಕಾರಿಗಳು ಕೆಇಬಿ ಇಲಾಖೆ ಅಧಿಕಾರಿಗಳು ಆರೋಗ್ಯ ಇಲಾಖೆ ಅಧಿಕಾರಿಗಳು ಸರ್ವೆ ಇಲಾಖೆ ಅಧಿಕಾರಿಗಳು ಮೂರು ಗ್ರಾಮದ ಸಾರ್ವಜನಿಕರು ಆರಕ್ಷಕ ಪೊಲೀಸ್ ಇಲಾಖೆಯವರು ಸರ್ಕಾರಿ ಕಛೇರಿಗೆ ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು ಮಾಜಿ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಅಂಗನವಾಡಿ ಕಾರ್ಯಕರ್ತರು ವಿವಿಧ ಸಂಘ ಸಂಸ್ಥೆಯವರು ಆಶಾ ಕಾರ್ಯಕರ್ತರು ಗ್ರಾಮಸ್ಥರು ಗ್ರಾಮ ಪಂಚಾಯಿತಿ ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದ್ದರು.