ಅಕ್ರಮ ಮರಳು ಸಾಗಾಟಕ್ಕೆ ಟಾಸ್ಕ್ ಪೋರ್ಸ್ ಸಮಿತಿ ಮೌನ.

ಅಕ್ರಮವಾಗಿ ನೂರಾರು ಟ್ರಿಪ್ ಮರಳು ಸಂಗ್ರಹಣೆ,,,,

ಕಾನೂನು ರೀತಿ ಕ್ರಮ ಯಾಕೇ ಇಲ್ಲ,,,?

ಅಕ್ರಮವಾಗಿ ಸಂಗ್ರಹಿಸಿ ಇಟ್ಟ ಮರಳಿಗೆ ರಾಯಲ್ಟಿ ಅಷ್ಟೇ ಕಟ್ಟುವುದು ಯಾಕೇ,,,,?

ಮರಳು ಕದ್ದು ಸಂಗ್ರಹ ಮಾಡಿದಂತಹ ದಂಧೆ ಕೋರರಿಗೆ ಸುಲಭ ಪರಿಹಾರ,,,

ಟಾಸ್ಕ್ಫೋರ್ಸ್ ಸಮಿತಿಯ ನಿರ್ಲಕ್ಷದಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ,,,,

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ತುಂಗಭದ್ರಾನದಿ ಹಾವೇರಿ ಸುತ್ತುವರಿದಿದ್ದು ನದಿ ಪಾತ್ರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ ನಿರಂತರ ನಡೆಯುತ್ತಿದ್ದು, ಜಿಲ್ಲಾಡಳಿತ ಮತ್ತು ತಾಲೂಕಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಟಾಸ್ ಪೋರ್ಸ್ ಸಮಿತಿಯ ಕಾರ್ಯವೈಖರಿ ಮೇಲೆ ಅನುಮಾನಗಳು ಸಾರ್ವಜನಿಕ ವ್ಯಕ್ತವಾಗುತ್ತಿದೇ.

ಕಳೆದ ಹದಿನೈದು ದಿನಗಳ ಹಿಂದೆ ಲೋಕಾಯುಕ್ತ ದಾಳಿ ನಡೆದಾಗ ದಂಧೆಗೆ ಕಡಿವಾಣ ಬೀಳಬಹುದು ಎನ್ನಲಾಗಿತ್ತು. ಕಳೆದ ಒಂದು ವಾರದಿಂದ ಮತ್ತೆ ಅಕ್ರಮ ಗಣಿಗಾರಿಕೆ ಚುರುಕುಗೊಂಡಿದೆ. ತುಂಗಭದ್ರ ನದಿ ಪಾತ್ರದ ಹಿರೇಬಿದಿರಿ, ಕೋಣನತಂಬಿಗಿ, ಸೋಮಲಾಪುರ, ಹಿಲದಹಳ್ಳಿ, ಕುದ್ರಿಹಾಳ, ಹರನಗಿರಿ, ಚಂದಾಪುರ, ಬೆಲೂರು, ಐರಣಿ, ಚೌಡಯ್ಯ ದಾನಪುರ, ಚಂದಾಪುರ, ಚಿಕ್ಕಕುರುವತ್ತಿ ಹಾಗೂ ಗುತ್ತಲ, ಪತ್ಯಪುರ ಕೋಟಿಹಾಳ, ಗ್ರಾಮಗಳಲ್ಲಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. ಚಂದಾಪುರ ಹಾಗೂ ಚೌಡಯ್ಯದಾನಪುರ ಭಾಗದಲ್ಲಿ ಜೆಸಿಬಿ ಯಂತ್ರ ನದಿಗೆ ఇಳಿసి ಮರಳು ತೆಗೆಯಲಾಗುತ್ತಿದೆ ಎನ್ನತ್ತಿದ್ದಾರೆ ಸಾರ್ವಜನಿಕರು.

ರಾತ್ರಿ ದಂಧೆ, ಪೊಲೀಸರ ಮೇಲೆ ಅನುಮಾನ,,,, ರಾತ್ರಿ ವೇಳೆಯಲ್ಲಿ ಹೆಚ್ಚಾಗಿದ್ದು, ‘ಒಂದು ದಿನ ಬಿಟ್ಟು ಒಂದು ದಿನ’ ಎಂಬ ಮಾದರಿಯಲ್ಲಿ ನಡೆಯುತ್ತಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ ಇದರಿಂದ ದಂಧೆಕೋರರಿಗೆ ಯಾರದೂ ಭಯವಿಲ್ಲ ಎಂಬುಂದು ಸ್ಪಷ್ಟವಾಗಿ ಕಾಣುತ್ತಿದ್ದು, ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಹೆಚ್ಚು ಮರಳು ಗಣಿಗಾರಿಕೆ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ಗಮನ ಹರಿಸಬೇಕೆಂಬ ಸಾರ್ವಜನಿಕ ಆಗ್ರಹ ಕೇಳಿ ಬರುತ್ತಿದೆ.

ಟಾಸ್ಕ್‌ಪೋರ್ಸ್ ಸಮಿತಿ ನೆಪಕ್ಕೆ ಮಾತ್ರ,,, ಆಟಕ್ಕೆ ಉಂಟು ಲೆಕ್ಕಕ್ಕಿಲ್ಲಾ, ತಂಭಾ ಚನ್ನಾಗಿದೆ.

ಆದರೆ, ತಾಲೂಕಿನಲ್ಲಿನ ನಿರಂತರವಾಗಿ ನೆಡೆಯುತ್ತಿರುವು ಅಕ್ರಮ ಮರಳು ಗಣಿಗಾರಿಕೆ ತಡೆಯಲು ರಚಿಸಲಾದ ಟಾಸ್ಕ್ ಪೋಸ್ ಸಮಿತಿಯು ಮತ್ತು ಪೆಟ್ರೋಲಿಂಗ್, ವಾಹನ ರಾತ್ರಿಗಸ್ತಿನಲ್ಲಿ ಇದ್ದರು, ಮತ್ತು ಗ್ರಾಮಗಳಲ್ಲಿ ಮನೆಮನೆಗೆ ಪೋಲಿಸ್ ಎನ್ನುವ ಕಾನೂನು ಜಾರಿಯಲ್ಲಿ ಇದೆ ಆದರೂ ಕೂಡಾ ಅಕ್ರಮ ಮರಳು ಗಾಣಿಗರಿಕೆ ತಡೆಯುವಲ್ಲಿ ವಿಫಲವಾಗಿದೆ ಟಾಸ್ಕ್ ಪೋರ್ಸ್ ಸಮಿತಿ ಎನ್ನುತಿದ್ದಾರೆ,ಸಾರ್ವಜನಿಕರು, ಅಕ್ರಮ ಮರಳು ತಾಲೂಕಿನಲ್ಲಿ ಹೊರವಲಯದಲ್ಲಿ ಕೋಸ್ಟ್ ದಸ್ತಾನೂ ಸ್ಟಾಕ್ ಮಾಡಿರುವ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮಾಹಿತಿ ಇದ್ದರು ಕೂಡಾ ವಶಪಡಿಸಿಕೊಂಡು ಕ್ರಮ ಕೈಗೊಳ್ಳುವುದು ಪ್ರಮುಖ ಜವಾಬ್ದಾರಿಗಳನ್ನು ಅದನ್ನೇ ಮರೆತು ಮಾಹಿತಿ ಕೊಟ್ಟವರ ಮಾಹಿತಿಯನ್ನು ಕೊಟ್ಟು ಗಲಭೆ ಎಬ್ಬಿಸುವ ಪ್ರಯತ್ನ ಮಾಡುತ್ತಿರುವವರ ಅಧಿಕಾರಿಗಳಿಗೆ, ಯಾವ ಭಾಷೆಯಯಲ್ಲಿ ಮಾತನಾಡಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ ಸಾರ್ವಜನಿಕರು.

ಕಟ್ಟುನಿಟ್ಟಿನ ಕ್ರಮಕ್ಕೆ ಒತ್ತಾಯ,,,, J M ರಾಜಶೇಖರ್, ಮಾಹಿತಿ ಹಕ್ಕು ತಜ್ಞರು.

ತಾಲೂಕಾಡಳಿತ, ಪೊಲೀಸ್ ಇಲಾಖೆ ಹಾಗೂ ಟಾಸ್ಕ್ ಪೋಸ್ ಸಮಿತಿಯ ನಿರ್ಲಕ್ಷ್ಯದ ವಿರುದ್ಧ ಜನರ ಆಕ್ರೋಶ ಉಕ್ಕಿದೆ. ಅಧಿಕಾರಿಗಳ ಮೌನವೇ ದಂಧೆಗೆ ಬೆಂಬಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಅಕ್ರಮ ಮರಳು ದಂಧೆಗೆ ತಕ್ಷಣ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಶಾಶ್ವತ ಕಡಿವಾಣ ಹಾಕಬೇಕು. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು ಎಂಬುದು J M ರಾಜಶೇಖರ್ ಮಾಹಿತಿ ಹಕ್ಕು ತಜ್ಞರು ಆಗ್ರಹಿಸಿದ್ದಾರೆ.

ಕಾರ್ಯ ಕ್ಷಮತೆ ಮೇಲೂ ಪ್ರಶ್ನೆ ಎಬ್ಬಿಸಿವೆ. ಸಮಿತಿಯ ಮೃದುವಾದ ಧೋರಣೆಯೇ ಈ ದಂಧೆಗೆ ಅವಕಾಶ ಕಲ್ಪಿಸುತ್ತಿದೆ ಎಂಬ -ಆರೋಪಗಳು ಕೇಳಿಬರುತ್ತಿವೆ.

ಕೆಡಿಪಿ ಸಭೆಯಲ್ಲಿ ತಹಶೀಲ್ದಾರ : ಆಕ್ರೋಶ

ಈ ತಿಂಗಳಲ್ಲಿ ನಡೆದ ಕೆಡಿಪಿ ಸಭೆಯಲ್ಲಿಯೂ ಅಕ್ರಮ ಮರಳು ದಂಧೆ ವಿಚಾರ ಪ್ರಸ್ತಾಪವಾಗಿದ್ದು, ತಹಶೀಲ್ದಾರ ಆರ್.ಎಚ್. ಭಾಗವಾನ್ ಅವರು ನದಿ ಪಾತ್ರದಲ್ಲಿ ನಿಯೋಜಿಸಿರುವ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಆದಾಗ್ಯೂ, ಕೂಡ ಪೊಲೀಸ
ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಅಧಿಕಾರಿಗಳು ಇಲ್ಲಿಯವರಿಗೂ ಯಾವುದೇ ಕ್ರಮಕೈಗೊಳ್ಳದೆ ಇರುವುದು ಅನುಮಾನಕ್ಕೆ ಎಡೆಮಾಡಿದೆ.

ಪರಿಸರದ ಮೇಲಿನ ದುಷ್ಟಪರಿಣಾಮ ಮುಂಗಾರು ಮಳೆ ಕೈಕೊಟ್ಟಿರುವುದರಿಂದ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಅಕ್ರಮ ಗಣಿಗಾರಿಕೆಗೆ ಅನುಕೂಲಕರ ಪರಿಸ್ಥಿತ ಅವಕಾಶ ದಂಧೆ ನಿರ್ಮಾಣವಾಗಿದೆ. ದುರುಪಯೋಗಪಡಿಸಿಕೊಂಡ ದಂದೇಕೋರರು ನದಿ ದಿನನಿತ್ಯ ಅಕ್ರಮ ಮರಳು ದಂದೇಕೋರರು ದೋಚುತ್ತಿದ್ದಾರೆ.

ಗಣಿಗಾರಿಕೆಯಿಂದ ನದಿ ತಳ ಕುಸಿತದಿಂದ ನೀರಿನ ಮಟ್ಟ ಕುಗ್ಗುತ್ತಿದೆ. ಭೂಮಿ ಇಳಿಕೆ ಉಂಟಾಗುತ್ತಿದೆ,ಎಂದು J M ರಾಜಶೇಖರ್ ರವರ ವಾದ.