ನೇಣು ಬಿಗಿದ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ನಿ ಸಾವು,,,

ನೇಣು ಬಿಗಿದ ಸ್ಥಿತಿಯಲ್ಲಿ ಕಾನ್ಸ್ಟೇಬಲ್ ಪತ್ನಿ ಸಾವು: ಕುಟುಂಬಸ್ಥರಿಂದ ಕೊಲೆ ಆರೋಪ.

ವೀರಮಾರ್ಗ ನ್ಯೂಸ್ : ವಿಜಯನಗರ ಜಿಲ್ಲಾ : ಹರಪ್ಪನಹಳ್ಳಿ ತಾಲೂಕಿನ ಗುಳೇದಹಟ್ಟಿ ತಾಂಡಾದಲ್ಲಿ ನವವಿವಾಹಿತ ಕೌಶಲ್ಯ 25 ವರ್ಷ ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ನನ್ನ ಕಣ್ಣೆದುರೆ ಮಗಳ ಮೇಲೆ ಹಲ್ಲೆ ಮಾಡಿ ನೇಣು ಹಾಕಲಾಗಿದೆ ಎಂದು ತಾಯಿ ಜಯಭಾಗಿ ಅರಸೀಕೆರೆ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಪೊಲೀಸ್ ಕಾನ್ಸ್ಟೇಬಲ್ ಶಿವಕುಮಾರ ಹಾಗೂ ಮೈದುನ ಮಾವ ಅತ್ತೆ ಅವರಿಂದ ವರದಕ್ಷಿಣೆ ಕಿರುಕೋಳ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದು,

ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಕಾನೂನು ಅರಿತು ಕೇಸನ್ ಮುಚ್ಚಿಹಾಕಲು ಪ್ರಯತ್ನ ನೆಡೆಯುತ್ತದೆ ಎಂದು ದೂರಿದರು.

ಕಳೆದ ವರ್ಷ ಮಾರ್ಚ್ 15ರಂದು ಕೌಶಲ್ಯ ಹಾಗೂ ಶಿವಕುಮಾರ್ ಮದುವೆ ಆಗಿದ್ದು ಮದುವೆಗೆ 13 ತಲೆ ಚಿನ್ನ ಮೂರುವರೆ ಲಕ್ಷ ಕ್ಯಾಶ್ ನೀಡಿದ್ದು ಇತ್ತೀಚಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ವರದಿ: ಚನ್ನೇಶ್ ಕೆ ಎಂ,ಬೆಂಗಳೂರು.