ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವುದು ನೋವಿನ ಸಂಗತಿ : ಕುಮಾರಸ್ವಾಮಿಜಿ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಇಂದಿನ ದಿನಮಾನಗಳಲ್ಲಿ ಶಿಕ್ಷಣ ವ್ಯಾಪಾರಿಕರಣವಾಗುತ್ತಿರುವುದು ನೋವಿನ ಸಂಗತಿಯಾಗಿದೆ. ಬಡವ, ಬಲ್ಲಿದ ಎನ್ನದೆ, ಸರ್ವರಿಗೂ ಸಮಾನ ಶಿಕ್ಷಣ ಸಿಗುವಂತಾದಾಗ ಸುಂದರ ಸುಭದ್ರ ನಾಡನ್ನು ಕಟ್ಟಬಹುದಾಗಿದೆ ಎಂದು ಸವಣೂರಿನ ಅಡವಿಸ್ವಾಮಿಮಠದ ಶ್ರೀ ಕುಮಾರ ಮಹಾಸ್ವಾಮಿಗಳು ಹೇಳಿದರು.
ಸಮೀಪದ ಸದಾಶಿವಪೇಟೆ ಗ್ರಾಮದ ವೀರಕ್ತಮಠದಲ್ಲಿ ನಡೆದ ಲಿಂ. ಗುರು ಗದಿಗೇಶ್ವರರ ಹಾಗು ಲಿಂ. ಬಸವಣ್ಣೇಂದ್ರ ಸ್ವಾಮಿಜಿಯವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮವನ್ನುದ್ದೇಸಿಸಿ ಆಶೀರ್ವಚನ ನೀಡಿದ ಶ್ರೀಗಳು, ಇಂದಿನ ಯುವಸಮೂಹಕ್ಕೆ ಮೊಬೈಲ್, ದೂರದರ್ಶನ ಮಾರಕವಾಗಿದ್ದು, ಅದರಿಂದ ದೂರವಿರುವಂತೆ ಮಕ್ಕಳಿಗೆ, ಯುವಕರಿಗೆ ಸಲಹೆ ನೀಡಿದರು. ಇಂದಿನ ಆದುನಿಕ ತಂತ್ರಜ್ಞಾನದಯುಗದಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವವಿದ್ದು, ಪ್ರತಿಯೊಬ್ಬರೂ ಸಮಯ ಪಾಲನೆ ಮಾಡುವಂತೆ ಸಲಹೆ ನೀಡಿದರು.

ಡಾ.ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಇಂದಿನ ಯುವಕರು ಧರ್ಮದಿಂದ ದೂರವಾಗುತ್ತಿರುವುದು ವಿಷಾದದ ಸಂಗತಿಯಾಗಿದೆ. ಸಂಸ್ಕಾರ ರಹಿತ ಜೀವನ ಶೈಲಿ ಮಾತುಗಳು ಮೌಲ್ಯವನ್ನು ಕಳೆದುಕೊಳ್ಳುತ್ತವೆ. ಗುರುಹಿರಿಯರಲ್ಲಿ ಗೌರವ, ಧರ್ಮದಲ್ಲಿ ನಂಬಿಕೆ, ಕಾಯಕದಲ್ಲಿ ನಿಷ್ಠೆ ಇದ್ದಾಗ ಸುಂದರ ಬದುಕನ್ನು ಕಟ್ಟಿಕೊಳ್ಳಲು ಸಾದ್ಯ. ಸದಾಶಿವಪೇಟೆ ವೀರಕ್ತಮಠಕ್ಕೆ ೫ ನೂರು ವರ್ಷಗಳ ಇತಿಹಾಸವಿದ್ದು, ಗುರು ಗದಿಗೇಶ್ವರ ಶ್ರೀಗಳು ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದವರಾಗಿದ್ದರು. ಅಂತಹ ಪಾವಿತ್ರ್ಯೆತೆ ಶ್ರೀಮಠಕ್ಕಿದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದೆ ಎಂದು ಹೇಳಿದರು.
ಬಂಕಾಪುರ ದೇಸಾಯಿಮಠದ ಶ್ರೀ ಮಹಾಂತಸ್ವಾಮಿಜಿ, ದೇವಸ್ಥಾನದ ಸೇವಾ ಸಮೀತಿ ಅಧ್ಯಕ್ಷ ಶರಣಬಸವ ಬಿ.ಕೆ, ಮಾತನಾಡಿದರು.
ಸಭೆಯನಂತರ ಡಾ.ರಾಜ್ ಗುರು ಮೆಲೋಡಿ ಗಾನ ಕಲಾ ತಂಡದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಮುಖಂಡರಾದ ರವಿ ಬಂಕಾಪುರ, ನಾರಾಯಣಪುರ ಗ್ರಾ.ಪಂ.ಅಧ್ಯಕ್ಷ ಸಂಗಪ್ಪ ವಡವಿ, ಬಂಕಾಪುರ ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಸಾಹಿತಿ ಎ.ಕೆ. ಆದವಾನಿಮಠ, ಹುಚ್ಚಯ್ಯಸ್ವಾಮಿ ಹುಚ್ಚಯ್ಯನಮಠ, ಶಂಕರ ಭಾಗಣ್ಣವರ, ಮಹೇಶ ಹೊಳಲಾಪುರ, ಗದಿಗೇಪ್ಪ ಕಿವುಡನವರ, ಪ್ರಭಾಕರ ಬಡಿಗೇರ ಸೇರಿದಂತೆ ಇತರರು ಇದ್ದರು. ಶಿಕ್ಷಕ ಶಿವು ಹಿರೇಮಠ ನಿರೂಪಿಸಿದರು.