ಬಿಜೆಪಿ ಹೆಮ್ಮರವಾಗಿ ಬೆಳೆದು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವೆಂಬ ಖ್ಯಾತಿ ಪಡೆದಿದೆ : ಶಾಸಕ ಲಮಾಣಿ

ಬಿಜೆಪಿ ಹೆಮ್ಮರವಾಗಿ ಬೆಳೆದು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವೆಂಬ ಖ್ಯಾತಿ ಪಡೆದಿದೆ : ಶಾಸಕ ಲಮಾಣಿ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ :
ಬಿಜೆಪಿ ಪಕ್ಷ ಜಗತ್ತಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಒಳಗೊಂಡ ದೊಡ್ಡ ಪಕ್ಷ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು ಅವರು
ಪಟ್ಟಣದಲ್ಲಿ ಬಿಜೆಪಿ ಸಂಸ್ಥಾಪನಾ ದಿನವಾದ ಪ್ರಯುಕ್ತ ಬಾಲಾಜಿ ಆಸ್ಪತ್ರೆಯಲ್ಲಿ ಬಿಜೆಪಿ ಪಕ್ಷದ ಧ್ವಜವನ್ನು ಹಾರಿಸಿ, ಸಂಸ್ಥಾಪನಾ ದಿನವನ್ನು ಉದ್ದೇಶಿಸಿ ಮಾತನಾಡುತ್ತಾ.
ಅನೇಕ ನೇತಾರರ ರಾಷ್ಟ್ರಹೀತದ ಚಿಂತನೆಯಿಂದಾಗಿ ರಚನೆಯಾದ ಭಾರತೀಯ ಜನತಾ ಪಾರ್ಟಿಯು ಹೆಮ್ಮರವಾಗಿ ಬೆಳೆದು, ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವೆಂಬ ಖ್ಯಾತಿ ಪಡೆದಿದೆ. ಪಕ್ಷದ ಬಲವರ್ಧನೆಯ ಕೊಡುಗೆಗೆ ಅನೇಕ ಹಿರಿಯ ನಾಯಕರ ಕೊಡುಗೆವಿದೆ, ಹಿರಿಯರು ಹಾಕಿ ಕೊಟ್ಟ ಮಾರ್ಗದಲ್ಲಿ ಶಿಸ್ತಿನ ಸಿಪಾಯಿಗಳಂತೆ ಕಾರ್ಯಕರ್ತರು ಪಕ್ಷದ ಚಟುವಟಿಕೆಯಲ್ಲಿ ಬಾಗವಹಿಸಬೇಕು ದೇಶಕ್ಕೆ ಬಿಜೆಪಿ ಪಕ್ಷದ ಕೊಡುಗೆ ಅಪಾರವಾದದ್ದು ಎಂದು ಹೇಳಿದರು.

ಈ ವೇಳೆ ಶಿರಹಟ್ಟಿ ಮಂಡಲದ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ ನಗರ ಘಟಕ ಬಿಜೆಪಿ ಅಧ್ಯಕ್ಷ ನವೀನ ಬೆಳ್ಳಟ್ಟಿ ಬಿ.ಡಿ. ಪಲ್ಲೇದ ನಿಂಗಪ್ಪ ಬನ್ನಿ, ನೀಲಪ್ಪ ಹತ್ತಿ ಮಂಡಳದ ಯುವ ಮೋರ್ಚಾ ಅಧ್ಯಕ್ಷ ಬಸವರಾಜ ಚಕ್ರಸಾಲಿ ಮಂಡಲದ ಪ್ರ ಕಾರ್ಯದರ್ಶಿ ಅನಿಲ ಮುಳಗುಂದ ಸಂತೋಷ ಜಾವೂರ ಇ ಪಕ್ಷದ ಹಿರಿಯ ಮುಖಂಡರು, ವಿವಿಧ ಮೋರ್ಚಾದ, ಪ್ರಮುಖರ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *