ಲಕ್ಷ್ಮೇಶ್ವರ : ಬೃಹತ್ ಆಕರ್ಷಕ ಪಥಸಂಚಲನ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಶ್ರೀರಾಮ ಸೇನಾ ಲಕ್ಷ್ಮೇಶ್ವರ ತಾಲೂಕ ಘಟಕದಿಂದ ಶ್ರೀರಾಮ ನವಮಿ ಪ್ರಯುಕ್ತ ಶ್ರೀರಾಮ್ ಸೇನಾ ಕಾರ್ಯಕರ್ತರಿಂದ ಭಾನುವಾರ ಲಕ್ಷ್ಮೇಶ್ವರದಲ್ಲಿ ಬೃಹತ್ ಆಕರ್ಷಕ ಪಥಸಂಚಲನ ನಡೆಯಿತು.
ಶ್ರೀ ರಾಮಸೇನಾ ಸಂಘಟನೆ ಸ್ಥಾಪನೆಯಾಗಿ ೨೦ವರ್ಷ. ಶ್ರೀರಾಮಸೇನಾ ಸಂಸ್ಥಾಪಕ ಹಾಗೂ ರಾಷ್ಟ್ರಿಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಜಿ ಅವರ ೭೦ನೇ ವರ್ಷದ ಸಂಭ್ರಮ ನಿಮಿತ್ಯ ೨೦೦ ಕ್ಕೂ ಹೆಚ್ಚು ಶ್ರೀರಾಮ್‌ಸೇನಾ ಕಾರ್ಯಕರ್ತರು ಗಣವೇಶಗಳೊಂದಿಗೆ ಆಕರ್ಷಕ ಪಥಸಂಚಲನ ನಡೆಸಿದರು.

ಪಥಸಂಚಲನ ರಂಭಾಪುರಿ ಕಲ್ಯಾಣ ಮಂಟಪದಿಂದ ಪ್ರಾರಂಭಗೊಂಡು ಪಂಪ್ ವೃತ್ತ, ಬಸ್ತಿಕೇರಿ, ವಿದ್ಯಾರಣ್ಯ ವೃತ್ತ, ಹಾವಳಿ ಆಂಜನೇಯ ದೇವಸ್ಥಾನ, ಕಾಳಮ್ಮದೇವಿ ದೇವಾಸ್ಥಾನ, ಕೋರ್ಟ್ ಸರ್ಕಲ್, ಹಳ್ಳದಕೇರಿ, ತಹಸೀಲ್ದಾರ ಆಫೀಸ್, ಭರಮದೇವರ ಸರ್ಕಲ್, ಪಾದಗಟ್ಟಿ, ಸರಕಾರಿ ಆಸ್ಪತ್ರೆ, ಹಳೇ ಬಸ್ ಸ್ಟಾಂಡ್, ಕಿತ್ತೂರರಾಣಿ ಚನ್ನಮ್ಮ ವೃತ್ತ ಮುಖಾಂತರ ಸಾಗಿ ಪಿಎಸ್‌ಬಿಡಿ ಗರ್ಲ್ಸ್ ಹೈಸ್ಕೂಲ್/ತೋಟದ್ದೇವರಮಠಕ್ಕೆ ಸಂಪನ್ನಗೊಡಿತು.
ಬಿಳಿಶರ್ಟ್, ನೀಲಿ ಪ್ಯಾಂಟ್ ಧರಿಸಿದ ಕಾರ್ಯಕರ್ತರು ತಮ್ಮದೇ ಆದ ವಿಶಿಷ್ಠ ಪದ್ದತಿಯಂತೆ ಅತ್ಯಂತ ಅಚ್ಚುಕಟ್ಟಿನಿಂದ ಶಾಂತಿಯುತ ಮತ್ತು ವೈಭವದಿಂದ ಪಥಸಂಚನ ನೆರವೇರಿ ಗಮನಸೆಳೆಯಿತು. ಪಂಥಸಚಲನ ಹಿನ್ನಲೆ ಇಡೀ ಪಟ್ಟಣ ಕೇಸರಿಮಯವಾಗಿತ್ತು. ಪಥಸಂಚಲನ ಸಾಗುವ ಮಾರ್ಗದುದ್ದಕ್ಕೂ ಮಹಿಳೆಯರು, ಮಕ್ಕಳು ತಮ್ಮ ಮನೆಗಳ ಮುಂದೆ ರಂಗೋಲಿ ಬಿಡಿಸಿ ಹೂಗಳಿಂದ ಅಲಂಕರಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ತಳಿರು ತೋರಣ, ಕೇಸರಿ ಧ್ವಜ ಕಟ್ಟಿ ಅತ್ಯಂತ ವಿನಮ್ರವಾಗಿ ಸಾಗರೋಪಾದಿಯಲ್ಲಿ ಬಂದ ಸ್ವಯಂ ಸೇವಕರನ್ನು ಸ್ವಾಗತಿಸಿದರು. ಕೇಸರಿ ಧ್ವಜಗಳಿಂದ ಕಾರ್ಯಕರ್ತರು ಭಾರತಮಾತೆ, ಶ್ರೀರಾಮನ ಜಯಘೋಷಣೆಯೊಂದಿಗೆ ಸಾಗಿ ದೇಶಭಕ್ತಿ ಮೆರೆದರು.
ಶಾಂತಿಯುತ ಪಥಸಂಚಲನಕ್ಕಾಗಿ ಇರ್ವರು ಎಸ್‌ಪಿ ನೇತೃತ್ವದಲ್ಲಿ ಮುಂಜಾಗೃತ ಕ್ರಮ ಕೈಗೊಳ್ಳಲಾಗಿತ್ತು. ಮೂವರು ಡಿವೈಎಸ್‌ಪಿ, ೭ಸಿಪಿಐ, ೧೬ ಪಿಎಸ್‌ಐ, ೧೫ ಎಎಸ್‌ಐ,೭೨ ಪೊಲೀಸರು, ೫೫ ಹೋಮಗಾಡ್ಸ್, ಕೆಎಸ್‌ಆರ್‌ಪಿ, ಡಿಆರ್ ಸಿಬ್ಬಂದಿಗಳು ಇದ್ದರು.