ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರದೆ, ದೇಹದ ಆರೋಗ್ಯ ಸಿರಿ ಸಂಪತ್ತನ್ನು ಕಾಯ್ದುಕೊಳ್ಳಿ : ಡಾ. ನರೇಗಲ್ಲ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಮನುಷ್ಯನಿಗೆ ಸರ್ವ ಸಂಪತ್ತುಗಳಿಗಿಂತ ಬಹುದೊಡ್ಡ ಸಂಪತ್ತು ಆರೋಗ್ಯ ಸಂಪತ್ತಾಗಿದ್ದು, ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ನಿಷ್ಕಾಳಜಿ ತೋರದೆ, ದೇಹದ ಆರೋಗ್ಯ ಸಿರಿ ಸಂಪತ್ತನ್ನು ಕಾಯ್ದುಕೊಳ್ಳುವಂತೆ ಪ್ರಸೂತಿ ತಜ್ಞ ಡಾ. ಬಸವರಾಜ ನರೇಗಲ್ಲ ಸಾರ್ವಜನಿಕರಿಗೆ ಕರೆ ನೀಡಿದರು.
ತಾಲೂಕಿನ ಬಂಕಾಪುರ ಪಟ್ಟಣದ ಕಾರ್ತಿಕೇಯ ಮಲ್ಟಿ ಸ್ಫೇಷಾಲಿಟಿ ಆಸ್ಪತ್ರೆಯಲ್ಲಿ ನಡೆದ ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣೆ, ಔಷದೋಪಚಾರ ವಿತರಣೆ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಮನುಷ್ಯನ ದಿನನಿತ್ಯದ ಜಂಜಾಟದ ಬದುಕಿನಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗಿದೆ. ನಾವು ಯಾವುದೇ ಕಾಯಕ ಮಾಡಲಿ ಅದನ್ನು ಸೇವಾ ಮನೋಭಾವನೆಯಿಂದ ಮಾಡಬೇಕು. ಸಮಾಜಕ್ಕೆ ನಮ್ಮ ಕೈಲಾದ ಸಹಾಯ ಸಹಕಾರ ನೀಡಬೇಕು. ಆ ಹಿನ್ನಲೆಯಲ್ಲಿ ಉಚಿತ ಆರೋಗ್ಯ ಶಿಬಿರ ಔಷದೋಪಚಾರ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಬಂಜೇತನ ಚಿಕಿತ್ಸೆ, ಹೃದಯ ರೋಗ, ಸಕ್ಕರೆ ಕಾಯಿಲೆ, ಪಿರಿಯಡ್ಸ್ ಸಮಸ್ಯ, ಮೂಲವ್ಯಾದಿ, ಹರ್ನಿಯಾ, ಥೈರಾಯಿಡ, ಸಂಧಿವಾತ, ಎಲಬು, ಕೀಲು, ಬೆನ್ನುಮೂಳೆ, ಅಲರ್ಜಿ, ದಮ್ಮು, ನರಗಳ ಸಮಸ್ಯ ಪ್ರೌಢಾವಸ್ತೆಯ ಸಮಸ್ಯಗಳಿಗೆ ನುರಿತ ತಜ್ಞ ವೈದ್ಯರಿಂದ ತಪಾಸಿಸಿ, ಉಚಿತವಾಗಿ ಔಷದೋಪಚಾರ ವಿತರಿಸಲಾಯಿತು. ಈ ಶಿಬಿರದಲ್ಲಿ 5 ನೂರಕ್ಕೀಂತಲೂ ಹೆಚ್ಚು ಜನರ ತಪಾಸಣೆಗೆ ಒಳಗಾಗಿ ಔಷದೀಪಚಾರ ಪಡೆದರು.
ಹೃದಯತಜ್ಞ ಡಾ.ಚೇತನ ಕೆ.ಜಿ, ಶಸ್ತ್ರಚಿಕಿತ್ಸಾ ತಜ್ಞ ಡಾ.ಸಂತೋಷಕುಮಾರ ದೊಡ್ಡಮನಿ, ಎಲಬು ಕೀಲು ತಜ್ಞ ಡಾ.ಮೃಂತ್ಯುಂಜಯ ಬಟ್ಟೂರ, ಡಾ.ಹರ್ಷಿತಾ ಬಟ್ಟೂರ, ಡಾ.ಅರುಣ ನರೇಗಲ್ಲ, ನ್ಯಾಯವಾದಿ ಬಸವರಾಜ ಕೂಲಿ, ಸಿದ್ದು ಅಂಕಲಕೋಟಿ, ಹಿರಿಯರಾದ ಶಂಕ್ರಯ್ಯ ಹುಚ್ಚಯ್ಯನಮಠ, ಬಸಪ್ಪ ಸೊಪ್ಪಿನ, ಈರಣ್ಣ ಕೂಲಿ, ಗಂಗಾಧರ ಬಡ್ಡಿ, ಸುರೇಶ ಕೂಲಿ, ದೇವರಾಜ ರಾಮಣ್ಣವರ, ರಮೇಶ ಶೆಟ್ಟರ, ಮಂಜುನಾಥ ಕೂಲಿ ಸೇರಿದಂತೆ ಇತರರು ಇದ್ದರು.