ನಾಳೆ ಸಮಾನತೆ ರಥಯಾತ್ರೆ-ಸಮಾನತೆ ಬುತ್ತಿ ಪೂರ್ವಭಾವಿ ಸಭೆ
ವೀರಮಾರ್ಗ ನ್ಯೂಸ್ ಗದಗ : ರಾಮಮಂದಿರ ನಿರ್ಮಾಣ ಭಾರತ ದೇಶದ ಬಹುಸಂಖ್ಯಾತ ಹಿಂದೂಗಳ ಬಹು ವರ್ಷಗಳ ಬೇಡಿಕೆಯಾಗಿತ್ತು. ಜನೇವರಿ 22, 2024ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡು ಈಗಾಗಲೇ ಇತಿಹಾಸದ ಪುಟಗಳಲ್ಲಿ ಸೇರಿಯಾಗಿದೆ. ವ್ಯಕ್ತಿತ್ವ, ಆದರ್ಶಗಳ ಸಾಕ್ಷಿಯಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾಗಿದ್ದಾನೆ. ಅದರಂತೆ ವಿಶ್ವಗುರು ಬಸವಣ್ಣನವರು, ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಸಮಾನತೆಯ ಸಂದೇಶ ನೀಡಿ ನೂರಾರು ವರ್ಷಗಳೇ ಕಳೆದ್ರೂ ಇನ್ನೂವರೆಗೂ ಸಮಾಜದಲ್ಲಿ ಅಸಮಾನತೆ ಇದೆ….