ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀ
ಮನುಷ್ಯನಲ್ಲಿ ದೇವತ್ವದ ಭಾವಮೂಡಿ ನಡೆನುಡಿ ಶುದ್ಧವಾಗಿಟ್ಟಾಗ ಜೀವನ ಪಾವನ : ಶಿವಯೋಗಿಶ್ರೀವೀರಮಾರ್ಗ ನ್ಯೂಸ್ ಶಿಗ್ಗಾವಿ : ಮನುಷ್ಯರಲ್ಲಿ ದೇವತ್ವದ ಭಾವಮೂಡಿ, ಪರೋಪಕಾರ ಮೈಗೂಡಿಸಿಕೊಂಡು, ನಡೆ, ನುಡಿ ಶುದ್ಧವಾಗಿಟ್ಟುಕೊಂಡು ನಡೆಯುವಾತನ ಜೀವನ ಪಾವನವಾಗಲು ಸಾಧ್ಯವಿದೆ ಎಂದು ಹತ್ತಿಮತ್ತೂರಿನ ವೀರಕ್ತಮಠದ ಶ್ರೀ ನಿಜಗುಣ ಶಿವಯೋಗಿ ಮಹಾ ಸ್ವಾಮಿಗಳು ನುಡಿದರು.ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ೨ ನೇ ದಿನದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದರು. ಭಾರತ ನಿಜವಾಗಲೂ ಸರ್ವಜನಾಂಗದವರಿಗೆ ಆಶ್ರಯನೀಡುವ ಶಾಂತಿಯ ಹೂದೊಟವಾಗಿದೆ. ಭಾರತದಲ್ಲಿ ವಾಸಿಸುವ ಹಿಂದು,…