ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಬೇಕು : ಸಂಗನಬಸವಶ್ರೀ

ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಬೇಕು : ಸಂಗನಬಸವಶ್ರೀ
ವೀರಮಾರ್ಗ ನ್ಯೂಸ್ ಶಿಗ್ಗಾವಿ :
ಹಾಲುಮತ ಸಮಾಜದವರು, ಮುಗ್ದರು, ಪ್ರಭುದ್ಧರಾಗಿ ಸರ್ವ ಜನಾಂಗದವರ ಸಹಮತದೊಂದಿಗೆ ಜಾತ್ರೋತ್ಸವ ಆಚರಿಸಿಕೊಂಡು ಬರುತ್ತಿರುವುದು ನಮ್ಮೂರ ಜಾತ್ರೆ ಏಶಸ್ವಿಗೆ ಕಾರಣವಾಗಿದೆ ಎಂದು ಶಿಗ್ಗಾವಿ ವಿರಕ್ತಮಠದ ಶ್ರೀ ಸಂಗನಬಸವ ಸ್ವಾಮಿಜಿ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ದುರ್ಗಾದೇವಿ ಜಾತ್ರಾಮಹೋತ್ಸವ ಅಂಗವಾಗಿ ನಡೆದ ಧರ್ಮಸಭೆಯನ್ನುದ್ದೇಸಿಸಿ ಮಾತನಾಡಿದ ಶ್ರೀಗಳು, ಅರ್ಥವಿಲ್ಲದ ವ್ಯರ್ಥ ಜಾತ್ರೆ ಎನಿಸಿಕೊಳ್ಳಬಾರದು. ಸರ್ವ ಸಮೂದಾಯದವರು, ಸೌಹಾರ್ಧತೆಯಿಂದ ಕೂಡಿ ಮಾಡುತ್ತಿರುವ ಹೊಂಡದ ದುರ್ಗಾದೇವಿ ಜಾತ್ರೆ ಪ್ರತಿಯೊಬ್ಬ ಸಮೂದಾಯದವರ ಜಾತ್ರೆಯಾಗಿ, ನಮ್ಮೂರ ಜಾತ್ರೆಯಾಗಿ ಹೊರಹೊಮ್ಮಿರುವುದು ಪಟ್ಟಣದ ಹಿರಿಮೆಯನ್ನು ಹೆಚ್ಚಿಸಿದಂತಾಗಿದೆ ಎಂದು ಹೇಳಿದರು.
ಗಡಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೆವಿನಮರದ ಮಾತನಾಡಿ, ಜಾನಪದ ಕಲೆ, ಸಂಸ್ಕೃತಿ, ವೈಭವ ಮರೆಮಾಚುತ್ತಿರುವ ಇಂದಿನ ದಿನಮಾನಗಳಲ್ಲಿ ಜಾತ್ರೋತ್ಸವ ಸೇವಾ ಸಮೀತಿಯವರು, ವೇದಿಕೆ ಮೂಲಕ ಗತಕಾಲದ ವೈಭವವನ್ನು ಬಿಂಬಿಸಿರುವುದು ಮನಸ್ಸಿಗೆ ಉಲ್ಲಾಸವನ್ನು ತಂದಿದೆ. ಅದರೊಂದಿಗೆ ಜಾನಪದ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಲು ಭರತ ನಾಟ್ಯ, ಜಾನಪದ ಸಂಗೀತ ರಸಮಂಜರಿ ಕಾರ್ಯಕ್ರಮ, ಜನಮಾನಸದಿಂದ ದೂರವಾಗುತ್ತಿರುವ ನಾಟಕ ಪ್ರದರ್ಶನವನ್ನು ಆಯೋಜಿಸಿರುವುದು ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ನಮ್ಮೂರಜಾತ್ರೆ ವೈಭವ ಹೆಚ್ಚಾಗಿ ಜಾನಪದ ಸೊಗಡನ್ನು, ಕಲೆ, ಕಲಾವಿದರನ್ನು ಉಳಿಸಿ, ಬೆಳೆಸುವಂತಾಗಲಿ ಎಂದು ಆಶಿಸಿದರು.
ಅರಳೆಲೆಮಠದ ಶ್ರೀ ರೇವಣಸಿದ್ದೇಶ್ವರ ಸ್ವಾಮಿಜಿ, ಕೆಂಡದಮಠದ ಶ್ರೀ ಸಿದ್ದಯ್ಯ ಸ್ವಾಮಿಜಿ ಅಶೀರ್ವಚನ ನೀಡಿದರು. ಪುರಸಭೆ ಉಪಾಧ್ಯಕ್ಷ ಆಂಜನೇಯ ಗುಡಗೇರಿ ಮಾತನಾಡಿದರು.
ಭೂದಾನಿ ಸಿದ್ದಪ್ಪ ಹರವಿ, ಉತ್ಸವಮೂರ್ತಿ ದಾನಿ ದಿವಾಕರ ವೆರ್ಣೆಕರ, ಮುಖಂಡರಾದ ಎಂ.ಎಂ.ಪಠಾಣ, ಕುರಬಸಂಘದ ತಾಲೂಕಾ ಅಧ್ಯಕ್ಷ ಫಕ್ಕೀರಪ್ಪ ಕುಂದೂರ, ಸುರೇಶಪ್ಪ ಹಂಡೆ, ಬಸಪ್ಪ ಸೊಪ್ಪಿನ, ಗಂಗಾಧರ ಬಡ್ಡಿ, ಶಿವಾನಂದ ರಾಮಗೇರಿ, ಎಂ.ಎನ್.ಹೊನಕೇರಿ, ಎ.ಹೆಚ್ಚ.ತಹಶೀಲ್ದಾರ, ಪ್ರಕಾಶ ಆಲದಕಟ್ಟಿ, ಮಹದೇವಪ್ಪ ಸುಂಕದ, ಪ್ರತಾಪ ಶಿವಪ್ಪನವರ ಸೇರಿದಂತೆ ಇತರರು ಇದ್ದರು. ಬಸವರಾಜ ಸವೂರ ಸ್ವಾಗತಿಸಿದರು. ಗಂಗುಬಾಯಿ ದೇಸಾಯಿ ನಿರೂಪಿಸಿದರು.

ಕೋಟ್ : ಕಲ್ಯಾಣಿಹೊಂಡ ಅಭಿವೃದ್ಧಿಯಾಗಬೇಕು. ಪ್ರತಿದಿನ ಈ ಹೊಂಡದ ಫವಿತ್ರ ನೀರಿನಿಂದಲೇ ಶ್ರೀ ದೇವಿಯ ಪೂಜೆ ಪುನಸ್ಕಾರಗಳು ನೆರವೇರುವಂತಾಗಬೇಕು. ಅಂದಾಗ ಮಾತ್ರ ಈ ಹೊಂಡದ ಫಾವಿತ್ರ್ಯೆತೆ ಹೆಚ್ಚಾಗಲಿದೆ.
ಎ. ಕೆ. ಆದವಾನಿಮಠ ಕಸಾಪ ಹೊಬಳಿ ಘಟಕದ ಅಧ್ಯಕ್ಷ
ಕೋಟ್ : ಕಲ್ಯಾಣಿ ಹೊಂಡ, ಮಲ್ಲಪ್ಪನ ಕೆರೆ ಅಭಿವೃದ್ಧಿ, ಸಭಾಭವನ ನಿರ್ಮಾಣಕ್ಕೆ ಶಾಸಕ ಯಾಸೀರಹಮ್ಮದ ಖಾನ ಪಠಾಣ ರವರು ೨.೫ ಕೋಟಿ ರೂ ಅನುದಾನ ನೀಡುವುದಾಗಿ ಬರವಸೆ ನೀಡಿದ್ದಾರೆ.
ಬಿ. ಎಸ್. ಗಿಡ್ಡಣ್ಣವರ ಜಾತ್ರೋತ್ಸವ ಸಮೀತಿ ಸದಸ್ಯ.

Leave a Reply

Your email address will not be published. Required fields are marked *