18 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ ಶಾಸಕ ಮಾನೆ ಚಾಲನೆ

2023-24ನೇ ಸಾಲಿನ ಕಾಲೋನಿ ಅಭಿವೃದ್ಧಿ ಯೋಜನೆ
18 ಲಕ್ಷ ರೂ ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆಗೆ ಶಾಸಕ ಮಾನೆ ಚಾಲನೆ
ವೀರಮಾರ್ಗ ನ್ಯೂಸ್ ಹಾನಗಲ್ :
ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ 2023-24ನೇ ಸಾಲಿನ ಕಾಲೋನಿ ಅಭಿವೃದ್ಧಿ ಹಾಗೂ ಪ್ರಗತಿ ಕಾಲೋನಿ ಯೋಜನೆಯಲ್ಲಿ 18 ಲಕ್ಷ ರೂ. ವೆಚ್ಚದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
10 ಲಕ್ಷ ರೂ. ವೆಚ್ಚದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಬಲಗಡೆ ರಸ್ತೆ ನಿರ್ಮಾಣ ಹಾಗೂ 8 ಲಕ್ಷ ರೂ. ವೆಚ್ಚದಲ್ಲಿ ಕುಮಾರ ಲಮಾಣಿ ಅವರ ಮನೆಯಿಂದ ಬೈಚವಳ್ಳಿ ರಸ್ತೆಯವರೆಗೆ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಶಾಸಕ ಮಾನೆ ಬಳಿಕ ಜನಸಂಪರ್ಕ ಸಭೆ ನಡೆಸಿ, ಗ್ರಾಮಸ್ಥರ ದೂರು, ದುಮ್ಮಾನಗಳಿಗೆ ಕಿವಿಗೊಟ್ಟರು.

ಸರ್ವೆ ನಂಬರಿನಲ್ಲಿ ದಾಖಲೆ ಇರುವ ತಾಂತ್ರಿಕ ಕಾರಣ ನೀಡಿ ಇ-ಸ್ವತ್ತು ಒದಗಿಸುತ್ತಿಲ್ಲ. ಇದರಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಾಗ, ತಾಪಂನಿಂದ ಗ್ರಾಮದ ಎಷ್ಟು ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ ಎನ್ನುವ ಮಾಹಿತಿ ಪಡೆಯಿರಿ. 50 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದ್ದರೆ ಉಪ ಗ್ರಾಮ ರಚನೆ ಮಾಡಲು ಸಿದ್ಧತೆ ಮಾಡಿಕೊಳ್ಳುವಂತೆ ಸ್ಥಳದಲ್ಲಿದ್ದ ಗ್ರಾಪಂ ಕಾರ್ಯದರ್ಶಿಗೆ ಶಾಸಕ ಮಾನೆ ಸೂಚಿಸಿದರು. ಗ್ರಾಮದ ಸೇವಾಲಾಲ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಗ್ರಾಮಸ್ಥರು ಮನವಿ ಮಾಡಿದಾಗ ಅನುದಾನ ಲಭ್ಯತೆ ಆಧರಿಸಿ ದೊರಕಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಕನಕಪ್ಪ ಕೊಪ್ಪದ, ಲಕ್ಷ್ಮವ್ವ ಲಮಾಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಪ್ಪ ಮರಗಡಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಗಂಗಮ್ಮ ಹಿರೇಮಠ, ಮುಖಂಡರಾದ ಸೋಮಲಪ್ಪ ಕೊಪ್ಪದ, ದ್ಯಾಮು ಲಮಾಣಿ, ಚಂದ್ರು ಕಾರಬಾರಿ, ರವಿ ಲಮಾಣಿ, ದೇವೇಂದ್ರಪ್ಪ ಕೊಪ್ಪದ, ರವೆಪ್ಪ ಲಮಾಣಿ, ಮಲ್ಲಪ್ಪ ಕೊಪ್ಪದ, ಲುಂಬಣ್ಣ ಕೊಪ್ಪದ, ಮಹದೇವಪ್ಪ ಕೊಪ್ಪದ, ರವಿ ಮಿಂಡ್ರಿ, ತವನಪ್ಪ ನಾಯ್ಕ, ದೇವೇಂದ್ರಪ್ಪ ಲಮಾಣಿ, ಯೋಗೇಶ ಕಾರಬಾರಿ, ಬಾನಪ್ಪ ಡಾವ್ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *