ಬಂಕಾಪುರ : ರಾಜ್ಯಮಟ್ಟದ ಜಂಗೀ ಕುಸ್ತಿ ಪಂದ್ಯಾವಳಿಗೆ ಚಾಲನೆ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಜಂಗೀ ಕುಸ್ತಿ ಪಂದ್ಯಾವಳಿಗೆ ಭೂದಾನಿಗಳಾದ ಸಿದ್ದಪ್ಪ ಹರವಿ ಚಾಲನೆ ನೀಡಿದರು.
ಪಂದ್ಯಾವಳಿಯ ಪೂರ್ವದಲ್ಲಿ ದೇವಸ್ಥಾನದ ಅರ್ಚಕ, ಸ್ವಾಮಿಗಳವರಿಂದ ಕುಸ್ತಿ ಖಣದ ಭೂಮಿ ಪೂಜೆ ನಡೆದು, ಶಂಖನಾದವನ್ನು ಮೊಳಗಿಸುವಮೂಲಕ ಕುಸ್ತಿ ಪಂದ್ಯಾವಳಿ ನಡೆಸಲು ಮುನ್ಸೂಚನೆ ನೀಡಿದ ನಂತರ ರಾಜ್ಯ ಮಟ್ಟದ ಕುಸ್ತಿ ಪಂದ್ಯಾವಳಿಗಳು ಚಾಲನೆ ಗೋಂಡವು.
ಅಪಾರ ಸಂಖ್ಯೆಯಲ್ಲಿ ಸೇರಿದ ಕುಸ್ತಿ ಪ್ರೇಮಿಗಳು ಕೇಕೆ, ಶಿಳ್ಳೆ, ಚಪ್ಪಾಳೆ ಹೋಡೆಯೂವಮೂಲಕ ಕುಸ್ತಿ ಪಟುಗಳನ್ನು ಹುರುದುಂಬಿಸುತ್ತಿರುವುದು ಕಂಡು ಬಂದಿತು. ಈ ಕುಸ್ತಿ ಪಂದ್ಯಾವಳಿಗಳಿಗೆ ವಿವಿಧ ರಾಜ್ಯಗಳಿಂದ ಸುಪ್ರಸಿದ್ಧ ಪೈಲವಾನರು ಆಗಮಿಸಿ ವಿಶೇಷ ಪ್ರದರ್ಶನ ನೀಡಿ ಕುಸ್ತಿ ಪ್ರೇಮಿಗಳ ಕಣ್ಮನ ಸೇಳೆದರು. ಶುಕ್ರವಾರ ಅಂತಿಮ ಪಂದ್ಯ ನಡೆಯಲಿದ್ದು ಗೇಲುವಿನ ಹಾರ ಯಾರ ಕೊರಳಿಗೆ ಲಭಿಸಲಿದೆ ಎಂದು ಕಾದು ನೋಡಬೇಕಿದೆ.

ಜಾತ್ರೋತ್ಸವ ಕಮೀಟಿ ಸದಸ್ಯರಾದ ಸೋಮು ಕುರಿ, ಗಂಗಾಧರ ಪುಜಾರ, ರಾಮಕೃಷ್ಣ ಆಲದಕಟ್ಟಿ, ಸತೀಷ ಆಲದಕಟ್ಟಿ, ಬಿ.ಎಸ್.ಗಿಡ್ಡಣ್ಣವರ, ವಿಜಯ್ ರಾಣೋಜಿ, ನೀಲಪ್ಪ ಕುರಿ, ವೀರುಪಾಕ್ಷಪ್ಪ ಹುರಳಿ, ಸೋಮಂತ ಪುಆಜರ, ಮಲ್ಲೇಶಪ್ಪ ಬಡ್ಡಿ, ಯಲ್ಲಪ್ಪ ದ್ವಾಸಿ, ಜಗದೀಶ ದೊಡ್ಡಗೌಡ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.