ನಗರದ ಶ್ರೀರಾಮ ಮಂದಿರದಲ್ಲಿ ಅದ್ದೂರಿ ರಾಮನವಮಿ ಆಚರಣೆ
ನಗರದ ಶ್ರೀರಾಮ ಮಂದಿರದಲ್ಲಿ ಅದ್ದೂರಿ ರಾಮನವಮಿ ಆಚರಣೆವೀರಮಾರ್ಗ ನ್ಯೂಸ್ ಗದಗ : ಅವಳಿ ನಗರದ ವಿವಿದೆಡೆ ರವಿವಾರ ಅದ್ದೂರಿಯಾಗಿ ಶ್ರೀರಾಮ ನವಮಿ ಆಚರಿಸಲಾಯಿತು. ಅಲ್ಲದೆ, ಬಂದ ಭಕ್ತರಿಗೆ ಕೋಸಂಬ್ರಿ ಹಾಗೂ ಪಾನಕವನ್ನು ವಿತರಿಸಲಾಯಿತು.ನಗರದ ಕುಷ್ಟಗಿ ಚಾಳದಲ್ಲಿರುವ ಐತಿಹಾಸಿಕ ಶ್ರೀರಾಮ ಮಂದಿರದಲ್ಲಿ ಪ್ರಾಥಃಕಾಲದಲ್ಲಿ ಶ್ರೀ ಲಕ್ಷ್ಮಣ ಸೀತಾಮಾತಾ ಸಮೇತ ವೇದೋಕ್ತ ಮಂತ್ರಪುಷ್ಪಾಂಜಲಿಗಳಿಂದ ಶ್ರೀರಾಮನಿಗೆ ಪಂಚಾಮೃತ ಅಭಿಷೇಕ ಮಾಡಲಾಯಿತು. ನಂತರ ದೇವಸ್ಥಾನದಲ್ಲಿರುವ ಶ್ರೀ ಆಂಜನೇಯ, ಶ್ರೀಗಣಪತಿ, ನವಗ್ರಹ ದೇವತೆಗಳು ಹಾಗೂ ಶ್ರೀ ಈಶ್ವರ ದೇವರಿಗೆ ಪೂಜೆ ಸಲ್ಲಿಸಲಾಯಿತು.ಬಳಿಕ ರಾಮತಾರಕ ಹೋಮವನ್ನು…