ಮೋಟೆಬೆನ್ನೂರು ಹತ್ತಿರ ಭೀಕರ ಅಪಘಾತ ಒಂದೇ ಕುಟುಂಬದ ಆರು ಮಂದಿ ಮೃತ್ಯು

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಮೋಟೆಬೆನ್ನೂರು ಹತ್ತಿರ : ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ಬಳಿ ನಡೆದಿದೆ.

ಮೃತರು ರಾಣೇಬೆನ್ನೂರು ನಗರ ನಿವಾಸಿಗಳು ಎಂದು ತಿಳಿದು ಬಂದಿದೆ.

ಅಪಘಾತದಲ್ಲಿ ಇಬ್ಬರಿಗೆ ಗಂಭೀರ ಗಾಯಗಲಾಗಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಹಿನ್ನಲೆಯಲ್ಲಿ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ಇಂದು ಬೆಳಗ್ಗೆ 11.20 ಗಂಟೆ ಸುಮಾರಿಗೆ ಬ್ಯಾಡಗಿ ಪಿಎಸ್ ವ್ಯಾಪ್ತಿಯ ಕೋಟೆಗುಡ್ಡದ ಬಳಿ ಅಪಘಾತ ಸಂಭವಿಸಿದ್ದು, ಹೆಚ್ಆರ್-26 ಸಿಜೆ 5360 ಸಂಖ್ಯೆಯ ಆಡಿ ಕಾರು ಟಿಎನ್-52ಎಸಿ 9759 ಸಂಖ್ಯೆಯ ಲಾರಿಗೆ ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಆರು ಮಂದಿ ಮೃತಪಟ್ಟಿದ್ದಾರೆ. ಸ್ಥಳದಲ್ಲೇ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಉನ್ನತ ಚಿಕಿತ್ಸೆ ಹುಬ್ಬಳ್ಳಿಗೆ ರವಾನಿಸಲಾಗಿದ್ದು, ಮೃತರ ವಿವರ..

1.ಫರ್ಹಾನ್ s/o ಇಮಾಮುಲ್ಲಾ ಸುಮಾರು 27 ವರ್ಷ ವಯಸ್ಸಿನವರು, ಹರಿಹರದ ಸ್ಕ್ರ್ಯಾಪ್ ವ್ಯಾಪಾರ ನಿವಾಸಿ, ಡಿವಿಜಿ ಜಿಲ್ಲೆ.

2.ಉಮ್ಮಿ ಶಿಫಾ ಅಫ್ರೋಜ್ ಉದಗಟ್ಟಿ ಪ್ರಾಯ 16 ವರ್ಷ ರಾಣೆಬೆನ್ನೂರಿನ ನಿವಾಸಿ.

  1. ಅಲಿಶಾ ಡಿ/ಓ ಅಕ್ಬರ್ ನಾರಂಗಿ ವಯಸ್ಸು 20 ಗೋವಾ ನಿವಾಸಿ.

4.ಫುಲ್ಖಾನ್ s/o ಅಕ್ಬರ್ ನಾರಂಗಿ ವಯಸ್ಸು 20 ಗೋವಾ ನಿವಾಸಿ.

5.ಉಮ್ಮೆರಾ ಡಿ/ಓ ಇಮಾಮುಲ್ಲಾ ಹರಿಹರದ ನಿವಾಸಿ.

6.ಏಷ್ಯಾ ಖಲಂದರ್ ಹೊನ್ನಾಳಿ, ಧಾರವಾಡ ನಿವಾಸಿ, ಸುಮಾರು 16 ವರ್ಷ.

7.ಗೋವಾ ನಿವಾಸಿ ಮೆಹಕ್ 18 ವರ್ಷ ಗಾಯಾಳು..

8.ಟಾಸ್ಕಿನ್ ವಯಸ್ಸು 18… ಹರಿಹರ ನಿವಾಸಿ, ಗಾಯಾಳು.