ಸಮ ಸಮಾಜದ ಹರಿಕಾರ ಡಾ.ಅಂಬೇಡ್ಕರ್ : ಡಾ.ರಮೇಶ ತೆವರಿ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಅಂಬೇಡ್ಕರ್, ಬುದ್ಧ, ಬಸವ ಆಶಯದಂತೆ ಯಾವುದೇ ಒಂದು ಜಾತಿಗೆ ಸಿಮಿತರಾಗದೇ ಜಾತ್ಯಾತೀತ ಮನೊಭಾವನೆಯನ್ನು ಮೈಗೂಡಿಸಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಯೂವಸಮೂಹ ಶ್ರಮಿಸುವಂತೆ ಡಾ.ರಮೇಶ ತೆವರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಬಂಕಾಪುರ ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ನಡೆದ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೪ನೇ ಜನ್ಮದಿನಾಚರಣೆ ಹಾಗು ಡಾ.ಬಾಬು ಜಗಜೀವನರಾಮ್ ೧೧೮ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದರು.
ಸಹಾಯಕ ಪ್ರಾಧ್ಯಾಪಕ ಲೋಕೇಶ ನಾಯಕ ಮಾತನಾಡಿ, ಡಾ.ಅಂಬೇಡ್ಕರ್ ರವರು, ೨೦ ನೇ ಶತಮಾನದಲ್ಲಿ ತುಳಿತಕ್ಕೋಳಗಾದ ಸಮಾಜದ ಜನರನ್ನು ಮುಖ್ಯವಾಹಿನಿಗೆ ತರಲು ಭಾರತಕ್ಕೆ ಶ್ರೇಷ್ಠ ಸಂವಿದಾನವನ್ನು ಕೊಡೆಗೆಯಾಗಿ ನೀಡಿದರು. ಇದರಿಂದಾಗಿ ಸರ್ವಸಮೂದಾಯದವರಿಗೆ ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ನ್ಯಾಯ ಸಿಗುವಂತಾಗಿದೆ ಎಂದು ಹೇಳಿದರು.
ಪ್ರೋ.ಮಂಜುನಾಥ ಮಾತನಾಡಿ, ಭಾರತದ ಸಂವಿಧಾನದಲ್ಲಿ ನಿರ್ಧೀಷ್ಠ ಸಮೂದಾಯದ ತುಷ್ಠಿಕರಣಕ್ಕಾಗಿ ಮಿಸಲಾತಿಯನ್ನು ಕಲ್ಪಿಸಲಾಗಿಲ್ಲ. ಸಂವಿಧಾನ ಜಾರಿಯಾದ ೧೦ ವರ್ಷದೊಳಗಾಗಿ ಸಮ ಸಮಾಜದ ನಿರ್ಮಾಣವಾಗುತ್ತದೆ ಎಂಬುದು ಅಂಬೇಡ್ಕರ್ ರವರ ಬಯಕೆಯಾಗಿತ್ತು. ಆದರೆ ಎಂಟು ದಶಕಗಳು ಕಳೆದರೂ ಮೇಲು, ಕೀಳು ಎಂಬ ಭಾವನೆ, ಸಮ ಸಮಾಜ ನಿರ್ಮಾಣ ವಾಗದೇ ಇರುವುದು ವಿಷಾದದ ಸಂಗತಿಯಾಗಿದೆ ಎಂದು ವಿಷಾದ ವ್ಯಕ್ತಪಡೆಸಿದರು.
ಪ್ರೋ. ವಿಜಯ್ ಗುಡಗೇರಿ, ನಿಂಗಪ್ಪ ಕಲಕೋಟಿ, ಮಹೇಶ ಡಮನಾಳ, ಡಾ.ದಿನೇಶಪ್ಪ ಸಿಂಗಾಪುರ, ಲುಬ್ನಾನಾಜ್, ವಿಜಯಲಕ್ಷ್ಮೀ, ನಾಜನಿನ್ ಹಿರೆಕುಂಬಿ, ಉಮೇಶ ಕರ್ಜಗಿ, ಸಂದೀಪ್ ಪಾಟೀಲ, ಮಹದೇವಪ್ಪ, ಮಲ್ಲಿಕಾರ್ಜುನ ಹೂಗಾರ, ಗದಿಗಯ್ಯ ಹಳ್ಳಿಕೊಪ್ಪಮದಮಠ, ಸವಿತಾ ಮಾಲಗಾವಿ, ಮಂಜುನಾಥ ಅಂಗಡಿ, ಶಬಿನಾ ಮುಳಗುಂದ, ದಾದಾಪೀರ, ಮಂಜಯ್ಯ, ಅಂಜಲಿ, ಮುರಗಯ್ಯ ಮಹಾಂತಿನಮಠ ಸೇರಿದಂತೆ ಇತರರು ಇದ್ದರು.
ಸಮ ಸಮಾಜದ ಹರಿಕಾರ ಡಾ. ಅಂಬೇಡ್ಕರ್ : ಡಾ. ರಮೇಶ ತೆವರಿ
