ಡಾ.ಅಂಬೇಡ್ಕರ್, ಅಣ್ಣ ಬಸವಣ್ಣನವರು ಸಮಾಜ ಸುಧಾರಣೆಯ ಅಮೋಘ ರತ್ನಗಳು : ಶಾಸಕ ಪಠಾಣ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಡಾ. ಬಿ.ಆರ್. ಅಂಬೇಡ್ಕರ್ ರವರು, ಭಾರತದ ಸಂವಿಧಾನ ರಚಿಸಿ ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದರೆ, ಅಣ್ಣ ಬಸವಣ್ಣನವರು ತಮ್ಮ ವಚನಗಳಮೂಲಕ ಸರ್ವ ಜನಾಂಗದವರಲ್ಲಿ ಸಮಾನತೆ ತರಲು ಶ್ರಮಿಸಿದವರಾಗಿದ್ದರು ಎಂದು ಶಾಸಕ ಯಾಸೀರಹಮ್ಮದಖಾನ ಪಠಾಣ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಹರಿಜನಕೇರಿಯಲ್ಲಿ, ಕರ್ನಾಟಕ ದಲಿತ ಸಂಘರ್ಷ ಸಮೀತಿ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ರವರ ೧೩೪ ನೇ ಜನ್ಮದಿನಾಚರಣೆ ಹಾಗು ಡಾ.ಬಾಬು ಜಗಜೀವನರಾಮ್ ೧೧೮ ನೇ ಜನ್ಮದಿನಾಚರಣೆ ಅಂಗವಾಗಿ ಅಂಬೇಡ್ಕರ್ ರವರ ಪಂಚಲೋಹದ ಮೂರ್ತಿಗೆ ಹಾಲೆರೆದು ವಿಶೇಷ ಪೂಜೆಸಲ್ಲಿಸಿ ಮಾತನಾಡಿದ ಅವರು, ಅಂಬೇಡ್ಕರ್ ರವರು ರಚಿಸಿದ ಸಂವಿಧಾನದಡಿಯಲ್ಲಿ ನಾವು ನೀವುಗಳೇಲ್ಲಾ ಬದುಕು ಸಾಗಿಸುವಂತಾಗಿದೆ. ಅಂಬೇಡ್ಕರ್ ರವರು ಸಂವಿಧಾನ ರಚಿಸದೇ ಇದ್ದರೆ, ಅನ್ಯಾಯ, ಆಕ್ರಮಗಳು ತಾಂಡವಾಡಿ ಬದುಕು ದುಸ್ತರವಾಗುತ್ತಿತ್ತು. ನಾನು ಕೂಡಾ ಈ ಕ್ಷೇತ್ರದ ಜನರ ಆಶೀರ್ವಾದ ಪಡೆದು ಶಾಸಕನಾಗಿರುವುದು ಅಂಬೇಡ್ಕರ್ ರವರು ರಚಿಸಿದ ಸಂವಿಧಾನದಡಿಯಲ್ಲಿ ಎಂದು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮೀತಿ ರಾಜ್ಯ ಕಾರ್ಯಾಧ್ಯಕ್ಷ ಬಸವರಾಜ ಕಟ್ಟಿಮನಿ, ತಹಶೀಲ್ದಾರ ರವಿ ಕೊರಗರ, ಉಪತಹಶೀಲ್ದಾರ ವಿ.ವಿ.ಕುಲಕರ್ಣಿ, ಬಿ.ಇ.ಒ. ಎಂ.ಬಿ.ಅಂಬಿಗೇರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಗಜಕೋಶ, ಸಿಪಿಐ ಅನೀಲ್ ರಾಠೋಡ, ಪಿ.ಎಸ್.ಐ. ನಿಂಗರಾಜ ಕರಕಣ್ಣನವರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಮಾಜಿ ಪು.ಸ.ಅಧ್ಯಕ್ಷೆ ಮುಕ್ತಾ ಕಟ್ಟಿಮನಿ ಸೇರಿದಂತೆ ಪುರಸಭೆ ಸದಸ್ಯರು, ಗಣ್ಯಮಾನ್ಯ ಪ್ರತಿಷ್ಠಿತರು, ಸಾರ್ವಜನಿಕರು ಉಪಸ್ಥಿತರಿದ್ದರು.
ಡಾ.ಅಂಬೇಡ್ಕರ್, ಅಣ್ಣ ಬಸವಣ್ಣನವರು ಸಮಾಜ ಸುಧಾರಣೆಯ ಅಮೋಘ ರತ್ನಗಳು : ಶಾಸಕ ಪಠಾಣ
