ಜನ ಸೇವೆಗಾಗಿ ಯುವಮನಸ್ಸುಗಳನ್ನು ಸಿದ್ಧವಾಗಲಿ : ಶ್ರೀಕಾಂತ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಯುವಸಮೂಹದಲ್ಲಿ ದೇಶಭಕ್ತಿ ಭಾವನೆ, ಶಿಸ್ತು, ಸಂಯಮ, ಸಾಮಾಜಿಕ ಜವಾಬ್ದಾರಿ, ಜನ ಸೇವೆಗಾಗಿ ಯುವಮನಸ್ಸುಗಳನ್ನು ಸಿದ್ಧಪಡೆಸುವ ವೇದಿಕೆಯಾಗಿದೆ ಎಂದು ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಹೇಳಿದರು.
ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ, ಶ್ರೀಮತಿ ಗೌರಮ್ಮ ಅಂಕಲಕೋಟಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಆಶ್ರಯದಲ್ಲಿ ನಡೆದ ಎನ್.ಎಸ್.ಎಸ್.ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್.ಎಸ್.ಎಸ್. ಶಿಬಿರಾರ್ಥಿಗಳಲ್ಲಿ ಶಿಸ್ತು ಬದ್ಧ ಜೀವನ ಶೈಲಿಯನ್ನು ಕಲೆಯಿಸಿಕೊಡುವುದಲ್ಲದೆ, ಗ್ರಾಮೀಣ ಪ್ರದೇಶದ ಜನಜೀವನ ಶೈಲಿ ಅನುಭವವನ್ನು ಪಡೆದು ಜೀವನದಲ್ಲಿ ಬರುವ ಏರೀಳಿತಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಕಲಿಸಿಕೊಡಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎ.ಸಿ.ವಾಲಿ, ಗ್ರಾ.ಪ.ಅಧ್ಯಕ್ಷೆ ಗಿರಿಜವ್ವ ದೊಡ್ಡಮನಿ, ವೀರಭದ್ರಪ್ಪ ಅಂಗಡಿ, ಶಂಕ್ರಪ್ಪ ಬಟ್ಟಿ, ಬಸವರಾಜ ಯಡಪ್ಪನವರ, ಬಸವರಾಜ ನರಗುಂದ, ಪ್ರವೀಣ ಸಿದ್ದಣ್ಣವರ ಸೇರಿದಂತೆ ಇತರರು ಇದ್ದರು.
ಜನ ಸೇವೆಗಾಗಿ ಯುವಮನಸ್ಸುಗಳನ್ನು ಸಿದ್ಧವಾಗಲಿ : ಶ್ರೀಕಾಂತ
