ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತ ಮೇರು ಪರ್ವತದ ವ್ಯಕ್ತಿ ಡಾ.ಅಂಬೇಡ್ಕರ್: ಶಿವಾನಂದ

ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತ ಮೇರು ಪರ್ವತದ ವ್ಯಕ್ತಿ ಡಾ.ಅಂಬೇಡ್ಕರ್ : ಶಿವಾನಂದ
ವೀರಮಾರ್ಗ ನ್ಯೂಸ್ ಶಿಗ್ಗಾವಿ :
ಭೀಮರಾವ್ ಅಂಬೇಡ್ಕರ್ ರವರು, ಸಮಾಜದಲ್ಲಿ ಸಮಾನತೆ, ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಶ್ರಮಿಸಿದವರಾಗಿದ್ದರು. ಭಾರತದ ಶ್ರೇಷ್ಠ ಸಂವಿಧಾನವನ್ನು ರಚಿಸಿ ಸಂವಿಧಾನ ಶಿಲ್ಪಿ ಎನಿಸಿಕೊಂಡರು ಎಂದು ಬಂಕಾಪುರ ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ಹೇಳಿದರು.
ತಾಲೂಕಿನ ಬಂಕಾಪುರ ಪಟ್ಟಣದ ಪುರಸಭೆ ಆಶ್ರಯದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಜನ್ಮದಿನಾಚರಣೆ, ಡಾ.ಬಾಬು ಜಗಜೀವನ ರಾವ್‌ರವರ ೧೧೮ನೇ ಜನ್ಮದಿನಾಚರಣೆ ಅಂಗವಾಗಿ ನಡೆದ ಡಾ. ಅಂಬೇಡ್ಕರ್‌ರವರ ಭಾವಚಿತ್ರದ ಮೇರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ಅಂಬೇಡ್ಕರ್‌ರವರು ಸಮಾಜಕ್ಕೆ ನೀಡಿದ ಕೊಡುಗೆಯಿಂದಾಗಿ ಭಾರತೀಯ ಇತಿಹಾಸದ ಪುಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತ ಮೇರು ಪರ್ವತದ ವ್ಯಕ್ತಿಯಾದರು. ಅಂಬೇಡ್ಕರ್ ರವರು ತಮ್ಮ ಜೀವನದ ಎಲ್ಲ ಅಡೆ, ತಡೆಗಳನ್ನು ಮೇಟ್ಟಿನಿಂತು ಸಮಾಜಕ್ಕಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಅಂಬೇಡ್ಕರ್ ರವರು ಎಂದು ಹೇಳಿದರು.
ಡಾ.ಅಂಬೇಡ್ಕರ್ ರವರ ಭಾವಚಿತ್ರದ ಮೇರವಣಿಗೆ ವೈಭವಕ್ಕೆ ಸಾಕ್ಷಿಬೂತವಾಗಿ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ಪುನ: ಪುರಸಭೆ ಆವರಣಕ್ಕೆ ಬಂದು ತಲುಪಿ ಸಮಾರೋಪ ಗೋಂಡಿತು.
ಪುರಸಭೆ ಅಧ್ಯಕ್ಷೆ ಮಮತಾ ಮಾಗಿ ಉಪಾಧ್ಯಕ್ಷ ಆಂಜನೇಯ ಗುಡಗೇರಿ, ಸ್ಥಾಯಿ ಸಮೀತಿ ಅಧ್ಯಕ್ಷ ಅಯೂಬಖಾನ ಪಠಾಣ, ಕಾರ್ಮಿಕ ಸಂಘದ ಅಧ್ಯಕ್ಷ ನಿಂಗಪ್ಪ ಹೊಸಮನಿ, ಸದಸ್ಯರಾದ ಸತೀಷ ಆಲದಕಟ್ಟಿ, ಸುರೇಶ ಕುರಗೋಡಿ, ಮುಖಂಡರಾದ ಗುರು ಛಲವಾದಿ, ಶಿವಾನಂದ ಮಾಗಿ, ರವಿ ನರೇಗಲ್, ರುದ್ರಪ್ಪ ಪವಾಡಿ ಸೇರಿದಂತೆ ಪುರಸಭೆ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *