ವಿದ್ಯಾರ್ಥಿಗಳ ಭವಿಷ್ಯಕ್ಕೆ ಗುರುಗಳ ಪಾತ್ರ ಮುಖ್ಯ : ಸಾಹಿತಿ ಯಲಿಗಾರ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ಸಮಾಜದಲ್ಲಿ, ಸಜ್ಜನರ ನಿರ್ಮಾಣದಲ್ಲಿ ತಾಯಿ ಮೊದಲ ಗುರುವಾದರೆ, ನಂತರದ ಸ್ಥಾನ ವಿದ್ಯೆನೀಡಿದ ಗುರುಗಳಿಗೆ ಲಭಿಸಲಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಗುರುಗಳ ಪಾತ್ರ ಪ್ರಮುಖವಾಗಿದೆ ಎಂದು ಸಾಹಿತಿ ಬ.ಫ.ಯಲಿಗಾರ ಹೇಳಿದರು.
ಪಟ್ಟಣದ ಮಾಮ್ಲೇದೇಸಾಯಿ ಪ್ರೌಢಶಾಲೆಲ್ಲಿ ೧೯೮೫-೮೬ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಸುಮಾರು ೩೮ ವರ್ಷಗಳ ಹಿಂದೆ ಇದೇ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿದ ವಿದ್ಯಾರ್ಥಿಗಳು ವಟ್ಟಿಗೆ ಸೇರಿ, ತಮಗೆ ವಿದ್ಯೆಧಾರೆ ಎರೆದ ಶಿಕ್ಷಕರೆಲ್ಲರನ್ನು ಆಹ್ವಾನಿಸಿ ಗುರುಗಳ ಸ್ಮರಣೆ ಮಾಡುವ ಇಂತಹ ಕಾರ್ಯಕ್ರಮ ಅಭೂತ ಪೂರ್ವ ಕಾರ್ಯಕ್ರಮವಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಪಿ.ಎಸ್.ಯಲಿಗಾರ ಮಾತನಾಡಿ, ನಮ್ಮ ಹಳೆಯ ವಿದ್ಯಾರ್ಥಿಗಳು ೪೦ ವರ್ಷದ ಬಳಿಕ ಒಂದೇಡೆ ಸೇರಿರುವುದು ನಾವು ಕಳೆದ ಹಳೆಯ ದಿನಗಳ ಕ್ಷಣಗಳನ್ನು ಮೇಲಕು ಹಾಕುವಂತಾಗಿದೆ. ಹಳೆಯ ವಿದ್ಯಾರ್ಥಿಗಳು ಯಾವುದೇ ಬಾಷೆ, ಜಾತಿ, ಧರ್ಮಕ್ಕೆ ಅಂಟಿಕೊಳ್ಳದೆ ತಮಗೆ ವಿದ್ಯೆಯನ್ನು ದಾನಮಾಡಿದ ಶಿಕ್ಷಕರೇಲ್ಲರನ್ನೂ ಒಂದೇಡೆ ಸೇರಿಸಿ ಗೌರವಿಸುತ್ತಿರುವ ಈ ಕಾರ್ಯಕ್ರಮ ಅವರು ಗುರುಸ್ಥಾನಕ್ಕೆ ನೀಡುವ ಗೌರವವಾಗಿದೆ ಎಂದು ಹೇಳಿದರು.
ಹಳೆಯ ವಿದ್ಯಾರ್ಥಿ ಮಹೇಶ ದ್ಯಾವಪ್ಪನವರ ಮಾತನಾಡಿ, ನಮ್ಮ ಬ್ಯಾಚಿನ ಸ್ನೇಹಿತರನ್ನು ಪುನರ್ ಸಮ್ಮಿಲನ ಗೋಳಿಸಲು ಸುಮಾರು ಐದು ತಿಂಗಳಿನಿಂದ ವ್ಯಾಟ್ಸಾಪ್ ಗ್ರೂಪ್ ರಚಿಸಿ, ಜವಾಬ್ದಾರಿ ಹಂಚಿಕೋಂಡು ಮಾಡಿದ ಪ್ರಯತ್ನ ಇಂದೂ ಸಫಲಗೋಂಡಿದೆ. ಎಲ್ಲಾ ಸ್ನೇಹಿತರು ಒಂದೇಡೆ ಸೇರಿರುವದರಿಂದ ಹಳೆಯ ಶಾಲಾ ನೆನಪುಗಳನ್ನು ಸ್ಮರಿಸುವಂತಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಹಳೆಯ ವಿದ್ಯಾರ್ಥಿಗಳು ತಮಗೆ ವಿದ್ಯಾದಾನಮಾಡಿದ ಶಿಕ್ಷರನ್ನು ಸನ್ಮಾನಿಸಿ ಗೌರವಿಸಿದರು.
ದತ್ತಣ್ಣ ವೇರ್ಣೇಕರ, ಎಸ್.ಪಿ. ಜೋಶಿ, ಆರ್.ಎಸ್. ಸಿಂಧೂರ, ಕೆ.ಡಿ. ಪಾಟೀಲ, ಎಲ್.ಜಿ. ಕಾಂಗೋ, ಬಿ.ಡಿ. ಚಾರಿ, ಸಿ.ಎಸ್. ಸುರಗಿಮಠ, ನಾಗೇಂದ್ರಪ್ಪ ಕಮ್ಮಾರ, ಜಿ.ಎನ್. ಯಲಿಗಾರ, ಆರ್.ಎಸ್. ಭಟ್, ಕೆ.ಬಿ.ಚನ್ನಪ್ಪ, ಜಯಣ್ಣ ಹೆಸರೂರ, ರಾಜು ಮಾಮ್ಲೇದೇಸಾಯಿ, ಆರ್.ಸಿ. ಹಿರೇಮಠ, ವಿನೋದಾ ಪಾಟೀಲ, ಶಿವಾನಂದ ಕುನ್ನೂರ ಸೇರಿದಂತೆ ಇತರರು ಇದ್ದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಗುರುಗಳ ಪಾತ್ರ ಮುಖ್ಯ : ಸಾಹಿತಿ ಯಲಿಗಾರ
