ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಇಂದು ನಮ್ಮ ದೇಶದ ಮಣ್ಣಿನ ಮಗ ಎಂಬ ಬಿರುದಾಂಕಿತ, ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಶ್ರೀ H. D. ದೇವೇಗೌಡರ ಧರ್ಮ ಪತ್ನಿ ಶ್ರೀಮತಿ ದಿವಂಗತ ಚೆನ್ನಮ್ಮ ರವರಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು ಈ ಸಂದರ್ಭದಲ್ಲಿ ರುದ್ರಾಗೌಡ ಪಾಟೀಲ್ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು.ಹಾವೇರಿ. ಹನುಮಂತಪ್ಪ ಬ್ಯಾಡಗಿ ಜಿಲ್ಲಾ ಉಪಾಧ್ಯಕ್ಷರು.ಮಂಜನಾಥ್ ಬಣಕಾರ್ ತಾಲ್ಲೂಕ್ ಅಧ್ಯಕ್ಷರು ರಟ್ಟೀಹಳ್ಳಿ. ಹರೀಶ ಹಲಗೇರಿ. ತಾಲ್ಲೂಕು ಯುವ ಮೋರ್ಚಾ ಅಧ್ಯಕ್ಷರು. B. S. ಸಿದ್ದಬಸಪ್ಪನವರ ಜಿಲ್ಲಾ ಕಮಿಟಿ ಸದಸ್ಯರು. ಮಾಲತೇಶ್ ಅರಳಿಕಟ್ಟಿ ಯಶವಂತ ಹೇಡಿಯಾಲ,
ಮುಸ್ತಫಾ ದೊಡ್ಡಮನಿ, ಶಮಂತ್ ಗಾಣಿಗೇರ, ಬೆಟ್ಟಪ್ಪ ಬೆಟ್ಟಣ್ಣನವರ, ಶಿವನಗೌಡ ಚೀಲೂರ್.
ಹಾಗೂ ಅಪಾರ ಅಭಿಮಾನಿಗಳು ಕಾರ್ಯಕರ್ತರು ಜೊತೆಗೂಡಿ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮ ವನ್ನು ಯಶಶ್ವಿ ಗೊಳಿಸಿದರು. ಈ ಸಂದರ್ಭದಲ್ಲಿ ಮಾತೃಶ್ರೀ ಸಮಾನರಾದ ಶ್ರೀಮತಿ ದಿವಂಗತ ಚೆನ್ನಮ್ಮ ದೇವೇಗೌಡರ ಆತ್ಮಕ್ಕೆ ಭಗವಂತನು ಚಿರಶಾಂತಿ ಕರುಣಿಸಲು ಮತ್ತು ಶ್ರೀಯುತ ದೇವಗೌಡರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು. ರುದ್ರಗೌಡ ಪಾಟೀಲ್ JDS ಪಕ್ಷದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ಹಾವೇರಿ.
ರಟ್ಟೀಹಳ್ಳಿ /ಹಿರೇಕೆರೂರ.
ಇಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರ ಜೆಡಿಎಸ್ ಪಕ್ಷದ ಕಾರ್ಯಾಲಯದಲ್ಲಿ, ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರೀಯ ಹಿರಿಯ ನಾಯಕ ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ದಿವಂಗತ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಪವಿತ್ರ ಸ್ಮರಣಾರ್ಥ ಭಾವಪೂರ್ಣ ಶ್ರದ್ಧಾಂಜಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಹಾವೇರಿ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ಗೌಡ ಶಿವಣ್ಣನವರು ದಿವಂಗತ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸಿದರು. ಬಳಿಕ ಅವರು ಮಾತನಾಡಿ, ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರ ಸರಳತೆ, ಸೌಜನ್ಯ ಹಾಗೂ ಕುಟುಂಬ ಮೌಲ್ಯಗಳನ್ನು ಸ್ಮರಿಸುತ್ತಾ ಗೌರವ ನಮನ ಸಲ್ಲಿಸಿದರು.
ಅಲ್ಲದೆ, “ದೇವರು ದಿವಂಗತ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ ಹಾಗೂ ಈ ಅಪಾರ ದುಃಖವನ್ನು ಭರಿಸುವ ಶಕ್ತಿಯನ್ನು ಮಾನ್ಯ ಶ್ರೀ ಎಚ್.ಡಿ. ದೇವೇಗೌಡ ಅವರ ಕುಟುಂಬದವರಿಗೆ ನೀಡಲಿ” ಎಂದು ಪ್ರಾರ್ಥಿಸಿದರು.
ಬಳಿಕ ದಿವಂಗತ ಆತ್ಮದ ಶಾಂತಿಗಾಗಿ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.
ಈ ಶ್ರದ್ಧಾಂಜಲಿ ಸಭೆಯಲ್ಲಿ ಜೆಡಿಎಸ್ ಪಕ್ಷದ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿ, ದಿವಂಗತ ಶ್ರೀಮತಿ ಚೆನ್ನಮ್ಮ ದೇವೇಗೌಡ ಅವರಿಗೆ ತಮ್ಮ ಗೌರವಪೂರ್ವಕ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.