ಅಡಿಕೆ ಬೆಳೆಗಾರರಿಗೆ ಮೋಸ ರೈತ ಭುವನೇಶ್ವರ ಶಿಡ್ಲಾಪುರ ಆಕ್ರೋಶ.

ಅಡಿಕೆ ಬೆಳೆಗಾರರಿಗೆ ಮೋಸ ರೈತ ಭುವನೇಶ್ವರ ಶಿಡ್ಲಾಪುರ ಆಕ್ರೋಶ.

ವೀರಮಾರ್ಗ ನ್ಯೂಸ್ : ಹಾನಗಲ್ : ಹಾನಗಲ್ ತಾಲೂಕಿನಲ್ಲಿ ಅಡಿಕೆ ಬೆಳೆಗಾರರಿಗೆ ಪ್ರತಿವರ್ಷ ಒಂದು ಹೆಕ್ಟರಿಗೆ 30,000 ಸಾವಿರದಿಂದ 40,000 ಸಾವಿರಗಳವರೆಗೆ ಫಸಲ್ ಭೀಮಾ ಯೋಜನೆ ಅಡಿಕೆ ಬೆಳೆಗೆ ವಿಮೆ ಜಮೆಯಾಗುತ್ತಿತ್ತು . ಹಿಂದಿನ ವರ್ಷ 2025/ 26ನೇ ಇಸ್ವಿಯಲ್ಲಿ ತುಂಬಿದ ಅಡಿಕೆ ಬೆಳೆ ವಿಮೆಗೆ ರೈತರ ಹಣ ತುಂಬಿ ಎರಡು ವರ್ಷ ಗತಿಸಿದರು ಇವಾಗ ರೈತರಿಗೆ ಭಿಕ್ಷೆಯಂತೆ ಒಂದು ಹೆಕ್ಟರಿಗೆ 5000 ದಿಂದ
7000 ಸಾವಿರದಂತೆ ಕೆಲವೊಂದು ಪಂಚಾಯಿತಿಗಳಿಗೆ ಇನ್ನೂ ಕಡಿಮೆ ಹಣವನ್ನು ಹಾಕಿದ್ದಾರೆ ನಾವು ಕಟ್ಟಿದ ಹಣಕ್ಕೆ ಬಡ್ಡಿಯೂ ಸಹಿತ ಸಿಕ್ಕಿಲ್ಲ ಇದರಲ್ಲಿ ಮೋಸವಿದೆ ಸರ್ಕಾರ ಇದನ್ನು ಮರು ಪರಿಶೀಲಿಸಿ ಹಾನಗಲ್ ತಾಲೂಕಿನ ಅಡಿಕೆ ಬೆಳೆಗಾರರಿಗೆ ನ್ಯಾಯ ಕೊಡಿಸಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಶಾಸಕರ ಮನೆಯ ಎದುರು ಕುಳಿತು ಪ್ರತಿಭಟನೆ ಮಾಡುವ ಪರಿಸ್ಥಿತಿ ಬರುತ್ತೆ ಆದ ಕಾರಣ ಶಾಸಕರು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇದನ್ನು ಸರ್ಕಾರದ ಮಟ್ಟದಲ್ಲಿ ತಂದು ಹಾನಗಲ್ ತಾಲೂಕಿನ ಅಡಿಕೆ ಬೆಳೆಗಾರರಿಗೆ ನ್ಯಾಯ ಕೊಡಿಸಬೇಕು ಹಿಂದೆ ಹಾನಗಲ್ ತಾಲೂಕಿನ ಶಾಸಕರಾದ ಬೆಳೆ ವಿಮೆ ಹರಿಕಾರ ಹಾನಗಲ್ ತಾಲೂಕಿನ ರೈತರ ಪಾಲಿನ ಅಣ್ಣಾವ್ರು ದಿವಂಗತ ಶ್ರೀ ಸಿ ಎಂ ಉದಾಸಿ ಯವರು ಇಡೀ ರಾಜ್ಯದಲ್ಲಿಯೇ ಹಾನಗಲ್ ತಾಲೂಕಿಗೆ ಹಾವೇರಿ ಜಿಲ್ಲೆಗೆ ಹೆಚ್ಚು ಬೆಳೆ ವಿಮೆಕೊಡಿಸಿದ ಕೀರ್ತಿ ಹೊಂದಿದ್ದರು ಇವಾಗ ಏಕೆ ಈ ತಾರತಮ್ಯ ಆಗುತ್ತಿದೆ ಎಂದು ಅಡಿಕೆ ಬೆಳೆಗಾರ ಭುವನೇಶ್ವರ ಶಿಡ್ಲಾಪುರ ಅಸಮಾಧಾನ ಹೊರಹಾಕಿದ್ದಾರೆ.

ಹಾನಗಲ್ ತಾಲೂಕಿನ ಆಪತ್ಬಾಂಧವ ಎಂದು ಹೆಸರಾಗಿರುವ ಶ್ರೀನಿವಾಸ್ ಮಾನೆ ಶಾಸಕರು ಇದನ್ನು ಬೇಗನೆ ಸರಿಪಡಿಸಿ ಅಡಿಕೆ ಬೆಳೆಗಾರರಿಗೆ ನ್ಯಾಯ ಕೊಡಿಸಬೇಕು ಮತ್ತು ಹಾನಗಲ್ ಪಟ್ಟಣದಲ್ಲಿ ದಾವಣಗೆರೆ ಶಿವಮೊಗ್ಗ ಪಟ್ಟಣದಲ್ಲಿ ಹೇಗೆ ಅಡಿಕೆ ಮಾರುಕಟ್ಟೆಗಳಿವೆ ಹಾಗೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಅಡಿಕೆ ಮಾರುಕಟ್ಟೆಯನ್ನು ಮಾಡಬೇಕೆಂದು ಅಡಿಕೆ ಬೆಳೆಗಾರರು ವಿನಂತಿಸಿಕೊಂಡಿದ್ದಾರೆ.