ಮಾಜಿ ಪ್ರಧಾನಿ ದೇವೇಗೌಡ ರವರ ಪತ್ನಿ ಚೆನ್ನಮ್ಮ ವಿಧಿವಶ.

ವೀರಮಾರ್ಗ ನ್ಯೂಸ್ : ಬೆಂಗಳೂರು : ಮಾಜಿ ಪ್ರಧಾನಿ ಎಚ್ ಡಿ.ದೇವೇಗೌಡ ರವರ ಪತ್ನಿ ಚೆನ್ನಮ್ಮ ರವರು ಶನಿವಾರ ವಿಧಿವಶರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಚೆನ್ನಮ್ಮ ರವರಿಗೆ ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಕಳೆದ ಮೂರು ದಿನಗಳಿಂದ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೆನ್ನಮ್ಮ ರವರು ಶನಿವಾರ ವಿಧಿವಶರಾಗಿದ್ದಾರೆ.