ಬಸವಣ್ಣನವರ ತೇಜೋವಧೆ ಖಂಡನೀಯ:
ರವಿ ಹಂಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ಮಂಜುನಾಥ ಗೌಡಶಿವಣ್ಣನವರ
ರಾಣೇಬೆನ್ನೂರು: ಕರ್ನಾಟಕದ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ವ್ಯಕ್ತಿತ್ವ ಹಾಗೂ ತತ್ವಾದರ್ಶಗಳಿಗೆ ಧಕ್ಕೆ ತರುವ ರೀತಿಯಲ್ಲಿ ಚಿತ್ರಿಸಿರುವ ರವಿ ಹಂಜ್ ಅವರ ವಿರುದ್ಧ ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ಹಾವೇರಿ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರವಿ ಹಂಜ್ ಅವರು ರಚಿಸಿರುವ ‘ಬಸವ ಮಂಟಪ’ ಕೃತಿಯಲ್ಲಿನ ಬರಹಗಳು ಬಸವಣ್ಣನವರ ಅನುಯಾಯಿಗಳು ಹಾಗೂ ನಾಡಿನ ಜನರ ಭಾವನೆಗಳಿಗೆ ನೋವುಂಟು ಮಾಡುವಂತಿವೆ. ಇಂತಹ ಬರಹಗಳನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ. ಐತಿಹಾಸಿಕ ಮಹಾಪುರುಷರ ವ್ಯಕ್ತಿತ್ವವನ್ನು ಅವಹೇಳನ ಮಾಡುವ ಮೂಲಕ ಸಮಾಜದಲ್ಲಿ ಅನಗತ್ಯ ಗೊಂದಲ ಮತ್ತು ಅಶಾಂತಿ ಸೃಷ್ಟಿಸುವ ಪ್ರಯತ್ನಗಳು ಖಂಡನೀಯ ಎಂದು ತಿಳಿಸಿದ್ದಾರೆ.
ವಿಶ್ವಗುರು ಬಸವಣ್ಣನವರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಸಮಾನತೆ, ಕಾಯಕ, ದಾಸೋಹ, ಮಾನವೀಯತೆ ಹಾಗೂ ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಜಗತ್ತಿಗೆ ಸಾರಿದ ಮಹಾನ್ ದಾರ್ಶನಿಕರು.
ಜಾತಿ, ಧರ್ಮ, ವರ್ಗಗಳ ಬೇಧಭಾವವಿಲ್ಲದೆ ಎಲ್ಲರಿಗೂ ಸಮಾನ ಅವಕಾಶ ದೊರೆಯಬೇಕು ಎಂಬ ಆಶಯದೊಂದಿಗೆ ಅನುಭವ ಮಂಟಪದ ಮೂಲಕ ವಿಚಾರ ವಿನಿಮಯಕ್ಕೆ ಹೊಸ ವೇದಿಕೆ ಕಲ್ಪಿಸಿದವರು. ಅವರ ವಚನಗಳು ಇಂದಿಗೂ ಸಮಾಜಕ್ಕೆ ಮಾರ್ಗದರ್ಶಕ ಶಕ್ತಿಯಾಗಿವೆ. ಇಂತಹ ಮಹಾನ್ ವ್ಯಕ್ತಿತ್ವದ ಕುರಿತು ಬರೆಯುವಾಗ ಐತಿಹಾಸಿಕ ಸತ್ಯ, ಸಾಮಾಜಿಕ ಜವಾಬ್ದಾರಿ ಹಾಗೂ ಸಾರ್ವಜನಿಕ ಭಾವನೆಗಳನ್ನು ಗೌರವಿಸುವುದು ಅತ್ಯಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಇತಿಹಾಸದ ಮಹಾಪುರುಷರು, ಸಮಾಜ ಸುಧಾರಕರು ಹಾಗೂ ಸಾಂಸ್ಕೃತಿಕ ನಾಯಕರ ಕುರಿತು ವಿವಾದಾತ್ಮಕ ಮತ್ತು ಅವಹೇಳನಕಾರಿ ಬರಹಗಳನ್ನು ಪ್ರಕಟಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಸಮಾಜದ ಶಾಂತಿ, ಸೌಹಾರ್ದತೆ ಹಾಗೂ ಮಹಾಪುರುಷರ ಘನತೆಗೆ ಧಕ್ಕೆ ತರುವಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದ್ದರೂ ಅದಕ್ಕೆ ಸಾಮಾಜಿಕ ಜವಾಬ್ದಾರಿಯೂ ಇರಬೇಕು ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ‘ಬಸವ ಮಂಟಪ’ ಕೃತಿಯ ಮಾರಾಟ ಮತ್ತು ಪ್ರಕಟಣೆ ಕುರಿತು ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು. ಬಸವಣ್ಣನವರ ಗೌರವ ಹಾಗೂ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಬಾರದು ಎಂದು ಮಂಜುನಾಥ ಗೌಡಶಿವಣ್ಣನವರ ಒತ್ತಾಯಿಸಿದ್ದಾರೆ.
ಕೋರ್ಟ್ ಸರ್ಕಲ್ ಬಳಿ ಪ್ರತಿಭಟನೆ ಮಾಡಿ.
ಸನ್ಮಾನ್ಯ ಮುಖ್ಯಮಂತ್ರಿಗಳು,ಕರ್ನಾಟಕ ಸರ್ಕಾರ ವಿಧಾನಸೌಧ, ಬೆಂಗಳೂರು
- ಮಾನ್ಯ ಮುಖ್ಯ ಕಾರ್ಯದರ್ಶಿಗಳು
- ಕರ್ನಾಟಕ ಸರ್ಕಾರ ವಿಧಾನಸೌಧ.ಬೆಂಗಳೂರು ಇವರ ಸನ್ನಿಧಿಗೆ.
ಸದರ ಮನವಿಯನ್ನು ಮಾನ್ಯ ತಹಶೀಲ್ದಾರವರ ಮುಖಾಂತರ ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಮತ್ತು ಮಾನ್ಯ ಮುಖ್ಯ ಕಾರ್ಯದರ್ಶಿಗಳಿಗೆ ತುರ್ತಾಗಿ ಕ್ರಮ ಜರುಗಿಸಲು ಈ ಮೂಲಕ ವಿನಂತಿಸಲಾಗಿದೆ ಮತ್ತು ರವಿ ಹಂಜ್ ಹಾಗೂ ವಿಶ್ವೇಶ್ವರಭಟ್ ಭಾರತದಿಂದಲೇ ಗಡಿಪಾರು ಮಾಡಲು ಕೋರಿ ಮನವಿ.
ಮಾನ್ಯರೇ,
ವಿಷಯ :- ಮಹಾನ್ ಮಾನವತಾವಾದಿ ದಾರ್ಶನಿಕರು ಆದ ಬಸವೇಶ್ವರ ಕುರಿತು ಅವಹೇಳನಕಾರಿಯಾಗಿ ಪ್ರಕಟಿಸಿದ ಬಸವ ಮಂಟಪ ಪುಸ್ತಕದ ಕುರಿತು 12ನೇ
ಶತಮಾನದಲ್ಲಿ ಸ್ಥಾಪಿಸಿದ ಅನುಭವ ಮಂಟಪದ ಮೂಲಕ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿ ಮಹಿಳೆ ಮತ್ತು ಶೋಷಣೆಗೆ ಒಳಗಾದ ಹಾಗೂ ಆರ್ಥಿಕವಾಗಿ ಹಿಂದುಳಿದ ಸಾಮಾಜಿಕವಾಗಿ ಹಿಂದುಳಿದ ಎಲ್ಲರನ್ನು ಒಗ್ಗೂಡಿಸಿ ಸಮಾನತೆಯನ್ನು ಬಸವಾದಿ ಶರಣರು 12ನೇ ತಮಾನದಲ್ಲಿ ಹೊರಾಟ ಮಾಡಿದ್ದನ್ನು ಐತಿಹಾಸಿಕವಾಗಿ ಬಸವಾದಿ ಶರಣರು ನಿರಂತರ ಹೊರಾಟ ಮಾಡಿ ಅಂದಿನ ದಿನಮಾನದಲ್ಲಿ ಸಾವಿರಾರು ಶರಣರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದು ಅದೆ. ಶರಣರ ಜೀವನ ತೆರೆದಿಟ್ಟ ಪುಸ್ತಕ ಇಂತಹ ಶ್ರೇಷ್ಠ ಇತಿಹಾಸವನ್ನು ತಿರುಚಲು ಹೊರಟ ದುಷ್ಟ ಕೂಟಕ್ಕೆ ಪ್ರೇರಣೆಯಾಗಿ ಶ್ರೀ ರವಿ ಹಂಜ್ ಮತ್ತು ಪ್ರಕಟಿಸಿದ ಶ್ರೀ ವಿಶ್ವೇಶ್ವರ ಭಟ್ ವಿಶ್ವವಾಣಿ ಸಂಪಾದಕರು ಇವರು ಇತ್ತೀಚಿಗೆ ಬಸವ ಮಂಟಪ ಎಂಬ ಪುಸ್ತಕ ಪ್ರಕಟಿಸಿ ವಿಶ್ವಗುರು ಬಸವೇಶ್ವರರನ್ನು ಅವಹೇಳನಕಾರಿಯಾಗಿ ಬಸವೇಶ್ವರರನ್ನು ಸುಳ್ಳುಗಾರ, ಕೊಲೆಗಡುಕ, ಮೋಸಗಾರ ಎನ್ನುವಂತೆ ಬಿಂಬಿಸಿ ಇಡೀ ಸಮಾಜಕ್ಕಲ್ಲದೇ ಎಲ್ಲಾ ಸಮುದಾಯಗಳಿಗೂ ಅತಿಯಾದ ನೋವನ್ನುಂಟು ಮಾಡಿದ್ದಾರೆ. ಸಕಾರಣ ರವಿ ಹಂಜ್ ಮತ್ತು ವಿಶ್ವೇಶ್ವರ ಭಟ್ ಇವರನ್ನು ನಿರಂತರವಾಗಿ ಭಾರತದಿಂದ ಗಡಿಪಾರು ಕ್ರಮ ಹಾಗೂ ತೀವ್ರವಾಗಿ ಕಾನೂನು ಕ್ರಮ ಜರುಗಿಸುವುದಲ್ಲದೇ ಇದಕ್ಕೆ ಷಡ್ಯಂತ್ರ ನಡೆಸಿದ ಎಲ್ಲಾ ವ್ಯಕ್ತಿಗಳ ಶೋಧನೆ ಮಾಡಿ ಅವರುಗಳ ಮೇಲೆಯೂ ಸಹ ನಿರ್ಧಯವಾಗಿ ಕಠಿಣ ಕಾನೂನು ಕ್ರಮ ಜರುಗಿಸುವುದು ಅವಶ್ಯವಿದೆ. ಕಾರಣ ಇಂದಿನ ಘನ ಸರಕಾರ ಯಾವುದೇ ಮುಲಾಜಿಗೆ ಒಳಗಾಗದೇ ಇವರಿರ್ವರ ಜೊತೆ ಹಿಂದೆ ಸಹಕರಿಸಿದ ವ್ಯಕ್ತಿಗಳಿಗೂ ಸಹ ಕಠಿಣ ಕಾನೂನು ಕ್ರಮ ಜರುಗಿಸಲು ಮತ್ತೊಮ್ಮೆ ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇವೆ. ಇಲ್ಲದೇ ಹೊದರೆ ಸಮಾಜದಲ್ಲಿ ದ್ವೇಷ, ದಂಗೆ ಸಮಾಜದ ಸ್ವಾಸ್ಥ್ಯ ಹದಗೆಡುತ್ತದೆ. ಕಾರಣ ಕೂಡಲೇ ಕ್ರಮ ಜರುಗಿಸಲು ಅರ್ಜಿ ಸಲ್ಲಿಸಿದರು.