ಗದಿಗೆದರಿದ ಕೋಟಾ ನೋಟ ಚಲಾವಣೆ.

ಐಸಿಐಸಿಐ ಬ್ಯಾಂಕ್ ಎಟಿಎಂನಲ್ಲಿ ಖೋಟಾ ನೋಟುಗಳ ಜಮೆ: ಪೊಲೀಸ್ ತನಿಖೆ

ಹಾವೇರಿ ಜಿಲ್ಲಾ : ರಾಣೆಬೆನ್ನೂರು: ನಗರದ ಐಸಿಐಸಿಐ ಬ್ಯಾಂಕ್ ಶಾಖೆಯ ನಗದು ಠೇವಣಿ ಯಂತ್ರದಲ್ಲಿ ₹38 ಸಾವಿರ ಮೌಲ್ಯದ ಖೋಟಾ ನೋಟುಗಳನ್ನು ಜಮೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬ್ಯಾಂಕ್ ಶಾಖೆಯ ಗ್ರಾಹಕ ಸುರೇಶ ಬಿಲ್ಲಾಳ ಎಂಬಾತ ಮೆಡ್ಲೇರಿ ಗ್ರಾಮದವರಾಗಿದ್ದು .14ರಂದು ಸಂಜೆ 4.53ರ ಸುಮಾರಿಗೆ ಬ್ಯಾಂಕಿನ ಎಟಿಎಂ ನಗದು ಠೇವಣಿ ಯಂತ್ರದ ಮೂಲಕ ₹500 ಮುಖಬೆಲೆಯ 76 ಖೋಟಾ ನೋಟುಗಳನ್ನು ಜಮೆ ಮಾಡಿದ್ದಾನೆ ಎಂದು ಬ್ಯಾಂಕ್ ಶಾಖಾ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ರಾಣೆಬೆನ್ನೂರು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ವ್ಯವಸ್ಥಾಪಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೋಟುಗಳ ಜಮೆ ಪ್ರಕ್ರಿಯೆಗೆ ಸಂಬಂಧಿಸಿದ ವಹಿವಾಟಿನ ವಿವರಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಇತರ ಅಗತ್ಯ ದಾಖಲೆಗಳನ್ನು ಪೊಲೀಸರಿಗೆ ಒದಗಿಸಲು ಬ್ಯಾಂಕ್ ಆಡಳಿತ ಮಂಡಳಿ ಸಹಕರಿಸುವುದಾಗಿ ತಿಳಿಸಿದೆ.

ಖೋಟಾ ನೋಟುಗಳನ್ನು ಎಟಿಎಂ ಮೂಲಕ ಜಮೆ ಮಾಡಿರುವ ಪ್ರಕರಣವಾಗಿರುವುದರಿಂದ ಪೊಲೀಸರು ನೋಟುಗಳ ಮೂಲ ಮತ್ತು ವಹಿವಾಟಿನ ಕುರಿತು ತನಿಖೆ ಮುಂದುವರಿಸಿದ್ದಾರೆ.