ಕಿಲ್ಲಾ ಚಂದ್ರಸಾಲಿ ಸರಕಾರಿ ಕಾಮ-ರತಿ ಉತ್ಸವವನ್ನು ಶಾಂತತೆಯಿಂದ ಆಚರಿಸಬೇಕು : ಸಿಪಿಐ ಡಿ.ಬಿ. ಪಾಟೀಲ

ವೀರಮಾರ್ಗ ನ್ಯೂಸ್ ಗದಗ : ನಗರದ ಕಿಲ್ಲಾ ಚಂದ್ರಸಾಲಿಯ ಸರಕಾರಿ ಕಾಮ-ರತಿ ಉತ್ಸವವು ಗದಗ ಜಿಲ್ಲೆಗೆ ಕಿರೀಟ ಇದ್ದ ಹಾಗೆ ನವಲಗುಂದದ ರಾಮಲೀಂಗೇಶ್ವರ ಕಾಮ-ರತಿ ಉತ್ಸವ ನಂತರ ಅತಿ ಹೆಚ್ಚು ಪ್ರಸಿದ್ದಿ ಪಡದಿರುವ ಕಾಮ-ರತಿ ಉತ್ಸವ ಇದಾಗಿದೆ ಎಂದು ಗದಗ ಶಹರ ಪೊಲೀಸ್ ಠಾಣೆಯ ಸಿಪಿಐ ಡಿ.ಬಿ. ಪಾಟೀಲ ಅವರು ಹೇಳಿದರು.
ನಗರದ ಕಿಲ್ಲಾ ಓಣಿಯ ತ್ರಿಕೂಟೇಶ್ವರ ದೇವಸ್ಥಾನದ ಉತ್ತರ ದಿಕ್ಕಿನ ದ್ವಾರದ ಆವರಣದಲ್ಲಿ 160ನೇ ವರ್ಷದ ಕಿಲ್ಲಾ ಚಂದ್ರಸಾಲಿಯ ಸರಕಾರಿ ಕಾಮ-ರತಿ ಉತ್ಸವ ಸಮಿತಿಯಿಂದ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಅವರು ಮಾತನಾಡಿ, ವರ್ಷದಿಂದ ವರ್ಷಕ್ಕೆ ಕೆಜಿಗಟ್ಟಲೆ ಹೆಚ್ಚು ಆಭರಣ ಧರಿಸುವ ಮೂಲಕ ಪ್ರಸಿದ್ದಿ ಪಡೆದಿರುವ ಕಿಲ್ಲಾ ಚಂದ್ರಸಾಲಿ ಸರಕಾರಿ ಕಾಮ-ರತಿ ಉತ್ಸವ ಸಮಿತಿಗೆ ಪೊಲೀಸ್ ಇಲಾಖೆಯಿಂದ ಭದ್ರತೆಗಾಗಿ ಗನ್‌ಮ್ಯಾನ್ ನೀಡಲಾಗುವುದು. ಈ ಓಣಿಯ ಗುರು-ಹಿರಿಯರು ಯುವಕರಿಗೆ ಮಾರ್ಗದರ್ಶನ ನೀಡಿ ಮಂಗಳವಾರ ನಡೆಯುವ ಮೆರವಣಿಗೆಯನ್ನು ಬೇಗನೆ ಆರಂಭಿಸಿ ಬೇಗನೆ ಮುಗಿಸಬೇಕು ಎಂದು ಸಿಪಿಐ ಡಿ.ಬಿ.ಪಾಟೀಲ ಮನವಿ ಮಾಡಿದರು.
ಯುವ ಮುಖಂಡ ಸುಧೀರ ಕಾಟಿಗರ ಅವರು ಮಾತನಾಡಿ, 160 ವರ್ಷಗಳ ಹಿಂದೆ ನಮ್ಮ ಓಣಿಯ ಹಿರಿಯರು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮಕ್ಕೆ ನಡೆದುಕೊಂಡು ಹೋಗಿ ಕಾಮ-ರತಿಯನ್ನು ತಂದು ಪ್ರತಿಷ್ಠಾಪಿಸಿದ್ದಾರೆ. ಅಂದು ನಂಬಿ ಬಂದವರಿಗೆ ಬೇಡಿದ ಫಲವನ್ನು ನೀಡುತ್ತಾ ಬಂದಿದ್ದರಿಂದ ಇಂದು ಭಕ್ತರಿಂದ ಸುಮಾರು 25 ಕೆ.ಜೆ.ಯಷ್ಟು ಬಂಗಾರದ ಒಡವೆಗಳನ್ನು ಧರಿಸುತ್ತಾ ಬಂದಿರುವುದು ಸಾಕ್ಷಿಯಾಗಿದೆ. ಅಲ್ಲದೆ, ಈ ಕಾಮ-ರತಿಗೆ ಶತಮಾನಗಳಿಂದ ಸರಕಾರಿ ಗೌರವದೊಂದಿಗೆ ಭದ್ರತೆ ನೀಡುತ್ತಾ ಬಂದಿರುವುದು ವಿಶೇಷವಾಗಿದೆ ಎಂದು ಹೇಳಿದರು.
ಕಳೆದ ಹಲವಾರು ದಿ. ಬಾಬಾಸಾ ಡೋಂಗರಸಾ ಖೋಡೆ ಅವರು ಕಾಮ-ರತಿ ಉತ್ಸವ ಕಾರ್ಯಗಳಲ್ಲಿ ಸೇವೆ ಸಲ್ಲಿಸಿದ್ದರಿಂದ ಅವರ ಧರ್ಮಪತ್ನಿ ಕೌಶಲ್ಯಬಾಯಿ ಖೋಡೆ ಅವರಿಗೆ ಮತ್ತು ಸಮಿತಿಯ ಮಾಜಿ ಅಧ್ಯಕ್ಷ ಪ್ರೇಮನಾಥಸಾ ಖೋಡೆ ಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪಿಎಸ್‌ಐ ಕಿರಣಕುಮಾರ, ನಗರಸಭೆ ಸದಸ್ಯೆ ಶೈಲಾ ಬಾಕಳೆ, ಕಾಮ-ರತಿ ಸಮಿತಿಯ ಅಧ್ಯಕ್ಷ ಸುರೇಶ ಬಾಕಳೆ, ಉಪಾಧ್ಯಕ್ಷ ಮನೋಹರ ದಲಬಂಜನ, ಗೌರವ ಕಾರ್ಯದರ್ಶಿ ವೆಂಕಟೇಶ ಖೋಡೆ, ಕಾರ್ಯದರ್ಶಿ ವೆಂಕಟೇಶ ಬಾಂಡಗೆ, ಖಜಾಂಚಿ ಪ್ರಕಾಶ ಕಾಟಿಗರ, ಹಿರಿಯರಾದ ಕುಮಾರ ಬದಿ, ಪರಶುರಾಮ ಬದಿ, ಡಿ.ಎಚ್. ಕಬಾಡಿ, ಗೋಪಾಲ ಖೋಡೆ, ರಾಜೇಶ ಖೋಡೆ, ಅಂಜು ಖಟವಟೆ, ಶ್ರೀಕಾಂತ ಪವಾರ, ಮಾಧು ಬದಿ, ಸರೋಜಾಬಾಯಿ ಶೇಜವಾಡೇಕರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಬಾಕಳೆ ಸ್ವಾಗತಿಸಿದರು. ಜಿ.ಎನ್. ಹಬೀಬ ನಿರೂಪಿಸಿದರು. ಪರಶುರಾಮ ಮಿಸ್ಕೀನ್ ವಂದಿಸಿದರು.

Leave a Reply

Your email address will not be published. Required fields are marked *