ಕಾರ್ಮಿಕರ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಷಣೆ ಚಿಕಿತ್ಸೆ.

ಕರ್ನಾಟಕ ಸರ್ಕಾರ ಕಾರ್ಮಿಕರ ಇಲಾಖೆ ವತಿಯಿಂದ ಉಚಿತ ಆರೋಗ್ಯ ತಪಾಷಣೆಯನ್ನು ರಾಣೇಬೆನ್ನೂರ ತಾಲೂಕ ಹುಲಿಕಟ್ಟಿ ಗ್ರಾಮದ ಕಾರ್ಮಿಕರಿಗೆ ಆರೋಗ್ಯ ತಪಾಷಣೆ ಚಿಕಿತ್ಸೆ ನಡೆಸಲಾಯಿತು.

ವೀರಮಾರ್ಗ ನ್ಯೂಸ್ : ಹಾವೇರಿ ಜಿಲ್ಲಾ : ಈ ಒಂದು ಕಾರ್ಮಿಕರ ಆರೋಗ್ಯ ಉಚಿತ ತಪಾಷಣೆಯನ್ನು ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಮಾಜಿ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಸೇರಿ ತಪಾಷಣೆ ಶಿಬಿರಕ್ಕೆ ಚಾಲನೆ ನೀಡಿದರು.

ನಂತರ ಗ್ರಾಮ ಪಂಚಾಯಿತಿ ಸದಸ್ಯರು ಭೀಮಪ್ಪ ಬೀರಪ್ಪ ಕುಡಪಲಿ ಮಾತನಾಡಿ ಹುಲಿಕಟ್ಟಿ ಗ್ರಾಮದಲ್ಲಿ ಕಟ್ಟಡ ಕಾರ್ಮಿಕರನ್ನು ಅತೀ ಹೆಚ್ಚು ಹೊಂದಿರುವ ಗ್ರಾಮ ಎಂದರೆ ಅದು ನಮ್ಮ ಗ್ರಾಮ ಯಾವ ಯಾವ ಕೆಲಸದಲ್ಲಿ ತೊಡಗಿದ್ದಾರೆ ಎಂದರೆ ಇಟ್ಟಿಗೆ ಬಟ್ಟಿ ಕಾರ್ಮಿಕರು ಬಾರ್ ಬೆಂಡಿಂಗ್ ಕಾರ್ಮಿಕರು ಪೇಂಟ್ರು ಕಾರ್ಮಿಕರು ಎಲೆಕ್ಟ್ರಿಷಿಯನ್ ಕಾರ್ಮಿಕರು ಪಾಯ ಕಡಿಯುವವರು ವೆಲ್ಡಿಂಗ್ ಕಾರ್ಮಿಕರು ಬಡಿಗೆ ಕೆಲಸದ ಕಾರ್ಮಿಕರು ಇನ್ನು ಮುಂತಾದ ಕಾರ್ಮಿಕರಿದ್ದು ಇಂತಹ ಕಾರ್ಮಿಕರೆಲ್ಲರೂ ಈ ಒಂದು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡು ತಪಾಸಣೆ ಮಾಡಿಸಿಕೊಂಡು ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಕಾರ್ಮಿಕರ ಒಂದು ಕಟ್ಟಡದಿಂದಲೇ ನಾವು ಮನೆಯಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯ ಸರ್ಕಾರದಿಂದ ಬರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಾರ್ಮಿಕರೆಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಅಂದಾಗ ಮಾತ್ರ ಕಾರ್ಮಿಕರಿಗೆ ಒಂದು ಮಾನ್ಯತೆ ಸಿಕ್ಕಂತಾಗುತ್ತದೆ ಎಂದು ಮಾತನಾಡಿದರು.

ನಂತರ ಮಾಯಮ್ಮ ದೇವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಖಜಂಚಿಯಾದ ಚಂದ್ರಪ್ಪ ಬಣಕಾರ್ ಮಾತನಾಡಿ ಕಾರ್ಮಿಕರ ಕಾರ್ಡ್ ನಿಂದ ಹಲವಾರು ರೀತಿಯ ಸೌಲಭ್ಯಗಳಿವೆ ಈ ಎಲ್ಲಾ ಸೌಲಭ್ಯಗಳನ್ನು ಕಾರ್ಮಿಕರು ಪಡೆದುಕೊಳ್ಳಬೇಕು ಸೌಲಭ್ಯಗಳೆಂದರೆ ಮದುವೆ ಸಹಾಯದನ ಕಾರ್ಮಿಕರ ಕಲರ್ ಶಿಫ್ ಮಕ್ಕಳ ಸ್ಕೂಲ್ ಕಿಟ್ ಫುಡ್ ಕಿಟ್ಟು ಆರೋಗ್ಯಕಿಟ್ ಕಾರ್ಮಿಕರ ಸಲಕರಣೆಯ ಕೆಟ್ ಹೆರಿಗೆ ಬತ್ತೆ ಕಾರ್ಮಿಕರಿಗೆ ಏನಾದರೂ ತೊಂದರೆಯಾದರೆ ಆಸ್ಪತ್ರೆ ಖರ್ಚನ್ನು ಭರಿಸುವಂತಹ ಮತ್ತು (ಕ್ಲೈಂ ) ಇನ್ನೂ ಮುಂತಾದ ಸೌಲಭ್ಯಗಳು ಇರುತ್ತವೆ . ಇಂತ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕಾರ್ಮಿಕರೆಲ್ಲರಿಗೂ ತಿಳಿಸಿ ಆರೋಗ್ಯ ತಪಾಸಣೆಯನ್ನು ಮಾಡಿಸಿ ಕೆಲಸ ಮಾಡುವ ಕಾರ್ಮಿಕರು ಇನ್ನು ಯಾರು ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡಿರುವುದಿಲ್ಲ ಅಂತವರೆಲ್ಲರೂ ಕಾರ್ಮಿಕರ ಕಾರ್ಡ್ ಮಾಡಿಸಿಕೊಂಡು ಎಲ್ಲಾ ಸೌಲಭ್ಯ ಪಡೆದುಕೊಳ್ಳುವರಾಗಬೇಕೆಂದು ಮಾತನಾಡಿದರು.

ಈ ಸಂದರ್ಭದಲ್ಲಿ ಡಾ” ಷಣ್ಮುಖ ಸಿಬ್ಬಂದಿಗಳು ನಟರಾಜ್ ವಸಂತಿ ಸಾಗರ್ ಲಕ್ಷ್ಮಿ ಜ್ಯೋತಿ ಖಾದರ್ ಸಾಯಿಲ್ ಶಿವಾನಂದ್ ಗ್ರಾಮ ಪಂಚಾಯಿತಿ ಸದಸ್ಯರು ಕರಿಯಪ್ಪ ಮಸಲಾಡದ ಮಲ್ಲಿಕಾರ್ಜುನಯ್ಯ ಹನಗೋಡಿಮಠ ವಿನಾಯಕ ತುವಾರ್ ರಾಮಪ್ಪ ದೊಡ್ಡಸಿದ್ದಪ್ಪನವರು ಚಂದ್ರುಗೌಡ ಮುದಿಗೌಡ್ರು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಅಣ್ಣಪ್ಪ ಸಣ್ಣಕೊಟ್ರಪ್ಪನವ ಲೋಕೇಶ್ ಕೋಲಕಾರ ಕಾರ್ಮಿಕರ ಸಂಘದ ರಾಜಪ್ಪ ಬಾರ್ಕಿ ಹನುಮಂತಪ್ಪ ಮಾಕನೂರು ಅನುಸೂಯಮ್ಮ ಕುಡಪಲಿ ಸಾಕಮ್ಮ ಪೂಜಾರ ಗ್ರಾಮಸ್ಥರು ಮತ್ತಿತರರು ಉಪಸ್ಥಿತರಿದ್ದರು.