ಕಠಿಣ ಪರಿಶ್ರಮ, ಶ್ರದ್ಧೆಯ ಫಲವಾಗಿ ಪಡೆದ ಇಂಜನೀಯರಿಂಗ್ ಪದವಿ ಉಜ್ವಲ ಭವಿಷ್ಯ : ಡಾ. ಸುರೇಶ
ವೀರಮಾರ್ಗ ನ್ಯೂಸ್ ಲಕ್ಷ್ಮೇಶ್ವರ : ಹಲವು ವರ್ಷಗಳ ಸತತಅಭ್ಯಾಸ, ಪ್ರಾಮಾಣಿಕ ಪ್ರಯತ್ನ, ಕಠಿಣ ಪರಿಶ್ರಮ, ಶೃದ್ಧೆಯ ಫಲವಾಗಿ ಪಡೆದ ಇಂಜನೀಯರಿoಗ್ ಪದವಿ ಉಜ್ವಲ ಭವಿಷ್ಯದ ಮೈಲುಗಲ್ಲಾಗಿದೆ ಜತೆಗೆ ಇಂದಿನ ಸ್ಫಧಾತ್ಮಕ ಜಗತ್ತಿನಲ್ಲಿ ನೀವು ಕೈಗೊಳ್ಳುವ ಅಚಲವಾದ ನಿರ್ಧಾರ ಮುಖ್ಯವಾಗುತ್ತದೆ ಎಂದು ಗದಗ ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಸುರೇಶ ನಾಡಗೌಡರ ಹೇಳಿದರು.
ಅವರು ಶನಿವಾರ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಇಂಜನೀಯರಿಂಗ್ ಕಾಲೇಜಿನಲ್ಲಿ ೨೦೨೫ ರಲ್ಲಿ ತಾಂತ್ರಿಕ ಶಿಕ್ಷಣದ ವಿವಿಧ ವಿಭಾಗಗಳಲ್ಲಿ ಪದವಿ ಪೊರೈಸಿದ ೩೫೦ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಇಂದಿನ ತಾಂತ್ರಿಕ ಮತ್ತು ಔದ್ಯೋಗಿಕ ಯುಗದಲ್ಲಿ ಇಂಜನೀಯರಿoಗ್ ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿದ್ದರೂ ಸ್ಫರ್ಧಾತ್ಮಕ ಮನೋಭಾವ ಅಗತ್ಯವಾಗಿದೆ. ವಿದ್ಯಾರ್ಥಿ ಜೀವನ(ಪದವಿ) ದ ನಂತರ ನಿಮ್ಮ ಜವಾಬ್ದಾರಿ ಹೆಚ್ಚಾಗುತ್ತದೆ. ನಿಮ್ಮ ಸುಂದರ ಭವಿಷ್ಯಕ್ಕಾಗಿ ಪಾಲಕರು ಹತ್ತಾರು ಆಸೆ-ಕನಸು ಹೊತ್ತು ತಮ್ಮನ್ನೇ ಸಮರ್ಪಿಸಿಕೊಂಡಿರುತ್ತಾರೆ. ಜೀವನದಲ್ಲಿ ಕೀಳರಿಮೆ ಬಿಟ್ಟು ದೃಡ ನಿರ್ಧಾರ, ಪ್ರಯತ್ನ, ಶಿಸ್ತು ರೂಢಿಸಿಕೊಳ್ಳಿ. ಕಲಿತ ಶಾಲೆ-ಕಾಲೇಜು, ಶಿಕ್ಷಕರು, ಪಾಲಕರ ಬಗ್ಗೆ ಸದಾ ಪ್ರೀತಿ, ಗೌರವವಿರಲಿ. ವಿದೇಶಕ್ಕೆ ಹೋದವರು ತಂದೆ-ತಾಯಿಗಳನ್ನು ವೃದ್ದಾಶ್ರಮಕ್ಕೆ ತಳ್ಳದಿರಿ ಪಾಲಕರ ನಿರ್ಲಕ್ಷ್ಯ ಈಗ ಕಾನೂನು ಅಪರಾಧ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಪರಶುರಾಮ ಬಾರ್ಕಿ ಮಾತನಾಡಿದರು. ಯುವ ಇಂಜನೀಯರುಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಹೊಸ ತಂತ್ರಜ್ಞಾನ ಕಂಡು ಹಿಡಿದು ದೇಶದ ಅಭಿವೃದ್ದಿಗೆ ಶ್ರೇಷ್ಠ ಕೊಡುಗೆ ಸಲ್ಲಿಸಬೇಕು. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೇ ನಮ್ಮ ಭಾಷೆ, ಸಂಸ್ಕೃತಿ, ಸಂಪ್ರದಾಯ, ಸಮಾಜ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಕೈ ಜೋಡಿಸಬೇಕು. ದಿ.ವೆಂಕಪ್ಪ ಅಗಡಿಯವರು ಗ್ರಾಮೀಣ ಭಾಗದ ಬಡ, ರೈತರ ಮಕ್ಕಳು ಇಂಜನೀಯರಿoಗ್ ಶಿಕ್ಷಣ ಹೊಂದಬೇಕು ಎಂಬ ಸದುದ್ದೇಶದಿಂದ ಸ್ಥಾಪಿಸಿದ ಅಗಡಿ ಸಂಸ್ಥೆಯು ೨ ದಶಕಗಳಿಂದ ಶಿಕ್ಷಣ ರಂಗದಲ್ಲಿ ಅಮೂಲ್ಯವಾದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ವೇದಿಕೆ ಮೇಲೆ ಪಿ.ಯು. ಕಾಲೇಜು ಪ್ರಾಚಾರ್ಯ ಡಾ. ಎನ್. ಹಯವದನ, ಡಾ.ಸುಭಾಸ ಮೇಟಿ, ಪ್ರೋ ವಿಕ್ರಂ ಶಿರೋಳ, ಪ್ರೋ. ಸ್ವಪ್ನ ಚನ್ನಗೌಡರ, ಡಾ. ಅರುಣ ಕುಂಬಿ, ಡಾ. ಆರ್.ಎಂ ಪಾಟೀಲ, ಡಾ. ಸಂತೋಷ ಬುಜರಿ, ಡಾ.ರಾಜಶೇಖರ ಕುಣಬೇವು, ಡಾ.ಶ್ರೀನಿವಾಸ್ ಆರ್, ಡಾ.ಗಿರೀಶ ಯತ್ನಳ್ಳಿ, ರವಿ ಚೌವ್ಹಾಣ, ಮುಕುಂದ ಡಿ, ಪ್ರೊ.ಸೋಮಶೇಖರ ಕೆರಿಮನಿ, ಪ್ರೊ.ಎಸ್.ಎಫ್.ಕೊಡ್ಲಿ, ಪ್ರೋ. ಅರುಣಕುಮಾರ ಜೋಶಿ ಪ್ರೋ ಷಣ್ಮುಖ ಜಿ ಸೇರಿ ವಿವಿದ ವಿಭಾಗಗಳ ಉಪನ್ಯಾಸಕರು, ಪಾಲಕರು ಸಿಬ್ಬಂದಿಗಳು ಇದ್ದರು. ಪ್ರೋ.ಬಸವರಾಜ ಸೊರಟೂರ, ಸ್ವಾಗತಿಸಿದರು ವಿದ್ಯಾರ್ಥಿಗಳಾದ ಅಪೂರ್ವ, ಸೃಷ್ಟಿ ನಿರೂಪಿಸಿದರು.