ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ

ಹಾವೇರಿ-ಗದಗ-ದಾವಣಗೆರೆ ಜನ ಜೀವನ, ವ್ಯಾಪಾರ ವಹಿವಾಟು ಸಹಜ ಸ್ಥಿತಿ ವೀರಮಾರ್ಗ ನ್ಯೂಜ್ ಬೆಂಗಳೂರು : ಎಂಇಎಸ್ ಪುಂಡರ ಅಟ್ಟಹಾಸ ಖಂಡಿಸಿ ಕನ್ನಡಿಗರ ಮೇಲಿನ ದೌರ್ಜನ್ಯ ವಿರೋಧಿಸಿ, ಮಹದಾಯಿ, ಮೇಕೆದಾಟು ಯೋಜನೆಗಳ ಜಾರಿಗೆ ಆಗ್ರಹಿಸಿ ಸೇರಿದಂತೆ 20 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕನ್ನಡಪರ ಸಂಘಟನೆಗಳ ಒಕ್ಕೂಟ ಇಂದು ಕರೆ ಕೊಟ್ಟಿದ್ದ ಕರ್ನಾಟಕ ಬಂದ್ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ಬೆಳಗಾವಿ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಲ್ಲಿ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದರೆ, ರಾಜಧಾನಿ ಬೆಂಗಳೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೊಳ್ಳೇಗಾಲ, ಹಾಸನ, ಧಾರವಾಡ, ಚಿಕ್ಕಮಗಳೂರು, ತುಮಕೂರು,…

Read More

ಜಿಲ್ಲಾಮಟ್ಟದ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ.

ಜಿಲ್ಲಾಮಟ್ಟದ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆವ್ಯವಸ್ಥಿತ ಹಾಗೂ ಪ್ರಾಮಾಣಿಕವಾಗಿ ಕಾರ್ಮಿಕ ಸುಂಕ ಸಂಗ್ರಹಿಸಿ ವೀರಮಾರ್ಗ ನ್ಯೂಸ್ : ಚಿತ್ರದುರ್ಗ : ಕಟ್ಟಡ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವ್ಯವಸ್ಥಿತವಾಗಿ ಹಾಗೂ ಪ್ರಾಮಾಣಿಕವಾಗಿ ಕಾರ್ಮಿಕ ಸುಂಕ ಸಂಗ್ರಹಿಸಲು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚನೆ ನೀಡಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಮಟ್ಟದ ಸುಂಕ ಸಂಗ್ರಹಣಾ ಮೇಲ್ವಿಚಾರಣಾ ಸಮಿತಿ…

Read More

ಮಣ್ಣಿನ ಆರೋಗ್ಯ ಮತ್ತು ಕೃಷಿಯ ಮೇಲೆ ಪೋಷಕಾಂಶಗಳ ನಷ್ಟ ಮತ್ತು ಲಾಭ.

ವೀರಮಾರ್ಗ ನ್ಯೂಸ್ : ಮಣ್ಣಿನ ಆರೋಗ್ಯ ಮತ್ತು ಕೃಷಿಯ ಮೇಲೆ ಪೋಷಕಾಂಶಗಳ ನಷ್ಟ ಮತ್ತು ನೀರಿನ ಹರಿವಿನ ಪರಿಣಾಮ ಪರಿಚಯ ಕೃಷಿಯಲ್ಲಿ ಮಣ್ಣು ಅತ್ಯಂತ ಅಮೂಲ್ಯವಾದ ಸಂಪನ್ಮೂಲಗಳಲ್ಲಿ ಒಂದಾಗಿದೆ, ಇದು ಸಸ್ಯಗಳ ಬೆಳವಣಿಗೆ ಮತ್ತು ಆಹಾರ ಉತ್ಪಾದನೆಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತದೆ. ಆದಾಗ್ಯೂ, ಸಾಕಷ್ಟು ಮಣ್ಣಿನ ಸಾವಯವ ಪದಾರ್ಥಗಳಿಲ್ಲದೆ, ಪೋಷಕಾಂಶಗಳ ನಷ್ಟ ಮತ್ತು ನೀರಿನ ಹರಿವು ಪ್ರಮುಖ ಸಮಸ್ಯೆಗಳಾಗುತ್ತವೆ, ಮಣ್ಣಿನ ಫಲವತ್ತತೆ, ಬೆಳೆ ಉತ್ಪಾದಕತೆ ಮತ್ತು ಪರಿಸರ ಸುಸ್ಥಿರತೆಗೆ ಅಪಾಯವನ್ನುಂಟುಮಾಡುತ್ತವೆ. ಈ ಲೇಖನವು ಈ ಸಮಸ್ಯೆಗಳು ಹೇಗೆ ಉದ್ಭವಿಸುತ್ತವೆ,…

Read More

ನಾಳೆಯಿಂದ ಹಾವೇರಿ ಜಿಲ್ಲೆ ಸೇರಿ ರಾಜ್ಯವೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಕಲ ಸಿದ್ಧತೆ

ವೀರಮಾರ್ಗ ನ್ಯೂಜ್ ಬೆಂಗಳೂರು : ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ-01 ನಾಳೆಯಿಂದ ಏಪ್ರಿಲ್ 4ರ ವರೆಗೂ ನಡೆಯಲಿದ್ದು, ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ.ಪ್ರಸಕ್ತ ಸಾಲಿನಲ್ಲಿ 15,881 ಶಾಲೆಗಳ 8,42,817 ವಿದ್ಯಾರ್ಥಿಗಳು 38,091 ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 15,539 ಖಾಸಗಿ ಶಾಲೆ ಸೇರಿ 8,96,447 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 3,35,468 ಬಾಲಕರು, 3,78,389 ಬಾಲಕಿಯರು ಪರೀಕ್ಷೆ ಬರೆಯಲಿದ್ದು, 2018 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.2,818 ಸ್ಥಾನಿಕ, ಜಿಲ್ಲಾ ಹಂತದಲ್ಲಿ 410, ತಾಲ್ಲೂಕು…

Read More

ಕರ್ನಾಟಕ ಬಂದ್‌ಗೆ ಕರೆ ನೀಡುವ ಅಗತ್ಯವಿರಲಿಲ್ಲ : ಡಿಕೆಶಿ

Ino ವೀರಮಾರ್ಗ ನ್ಯೂಸ್ : ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಶೂನ್ಯವೇಳೆಯಲ್ಲಿ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಏಕಾಏಕಿ ಬಂದ್ ಕರೆಯುವ ಅಗತ್ಯವಿರಲಿಲ್ಲ. ಈ ನಿರ್ಧಾರ ಸರಿಯಲ್ಲ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.ಇದಕ್ಕೂ ಮುನ್ನ ಮಾತನಾಡದ ನಾರಾಯಣಸ್ವಾಮಿ ಅವರು, ನಾಳೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದೆ. ಮಾ.22ರಂದು ಬಂದ್ ಕರೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಇಂತಹ ಗೊಂದಲದ ಪರಿಸ್ಥಿತಿಯನ್ನು ನಿವಾರಣೆ ಮಾಡಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ತಿಳಿಸಬೇಕೆಂದು…

Read More

ಆಧುನಿಕ ಯುಗದಲ್ಲಿ ಧರ್ಮ ಸಂಸ್ಕೃತಿಗಳ ಬಗ್ಗೆ ನಿರ್ಲಕ್ಷ ಮನೋಭಾವ: ರಂಭಾಪುರಿಶ್ರೀ

ವೀರಮಾರ್ಗ ನ್ಯೂಜ್ ಇಂಡಿ : ಮಾನವ ಜೀವನ ಅಮೂಲ್ಯವಾದದ್ದು. ಧರ್ಮದ ಆದರ್ಶ ಮೌಲ್ಯಗಳನ್ನು ಜೀವನದ ಪರಿಪಾಲನೆಯಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ. ಹುಟ್ಟು ಎ? ಸಹಜವೋ ಸಾವು ನಿಶ್ಚಿತವಾದುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಗುರುವಾರ ತಾಲೂಕಿನ ಜೇವೂರು ಗ್ರಾಮದ ಶ್ರೀ ರೇವಣಸಿದ್ದಯ್ಯ ಸ್ವಾಮಿಗಳ 39ನೇ ವ?ದ ಪುಣ್ಯ ಸ್ಮರಣೋತ್ಸವ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಆಧುನಿಕ ಯುಗದಲ್ಲಿ ಧರ್ಮ ಸಂಸ್ಕೃತಿಗಳ ಬಗ್ಗೆ ನಿರ್ಲಕ್ಷ ಮನೋಭಾವ ಉಂಟಾಗುತ್ತಿದ್ದು ಎಲ್ಲೆಡೆ ಅಶಾಂತಿ ಅತೃಪ್ತಿ…

Read More

ತಾಲೂಕಿನ 93 ಶಾಲೆಗಳಿಗೆ 1 ಕೋಟಿ 55 ಲಕ್ಷ ರೂ. ವೆಚ್ಚದಲ್ಲಿ ಸೌಲಭ್ಯ ಕಲ್ಪನೆ : ಶಾಸಕ ಶ್ರೀನಿವಾಸ

ವೀರಮಾರ್ಗ ನ್ಯೂಜ್ ಹಾನಗಲ್ : ದೇಶದ 75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸರಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಲು ಕೈ ಜೋಡಿಸುವಂತೆ ನೀಡಿದ ಕರೆಗೆ ತಾಲೂಕಿನಲ್ಲಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಮಾತ್ರವಲ್ಲದೇ ಹಳೆ ಬೇರು, ಹೊಸ ಚಿಗುರು ಹೆಸರಿನಲ್ಲಿ ರಾಜ್ಯಮಟ್ಟದ ಕಾರ್ಯಕ್ರಮವಾಗಿ ರೂಪಗೊಳ್ಳಲು ಪ್ರೇರಣೆಯಾಗಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.ತಾಲೂಕಿನ ಅಕ್ಕಿಆಲೂರಿನ ಸಿ.ಜಿ. ಬೆಲ್ಲದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಬೇರು, ಚಿಗುರು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರಿ ಶಾಲೆ, ಕಾಲೇಜುಗಳು ಅಭಿವೃದ್ಧಿ…

Read More

ಮನುಷ್ಯನಿಗೆ ಎಲ್ಲಾ ಅಂಗಕ್ಕಿಂತ ಕಣ್ಣು ಮಹತ್ವ : ಶಿವಾಜಪ್ಪ

ವೀರಮಾರ್ಗ ನ್ಯೂಜ್ ಸವಣೂರು : ಕಣ್ಣಿನ ಆರೋಗ್ಯ ದೃಷ್ಠಿಯಿಂದ ನಿಯಮಿತವಾಗಿ ಕಣ್ಣುಗಳ ತಪಾಸಣಾ ಮಾಡಿಸಿಕೊಳ್ಳಬೇಕಾಗಿದೆ ಎಂದು ಕಳಸೂರ ಗ್ರಾಮದ ಹಿರಿಯರಾದ ಶಿವಾಜಪ್ಪ ಪುಟ್ಟಣ್ಣನವರ ಹೇಳಿದರು.ತಾಲ್ಲೂಕಿನ ಕಳಸೂರ ಗ್ರಾಮದ ಶ್ರೀ ಭೋಗೇಶ್ವರ ದೇವಸ್ಥಾನದಲ್ಲಿ ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ, ಅಮ್ಮಾ ಸಂಸ್ಥೆ(ರಿ) ಹಿರೇಮುಗದೂರ. ಕಳಸೂರ ಗ್ರಾಮ ಪಂಚಾಯಿತಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.ಮನುಷ್ಯನಿಗೆ ಎಲ್ಲಾ ಅಂಗಕ್ಕಿಂತ ಕಣ್ಣು ಮಹತ್ವ ಪಡೆದಿದೆ. ಗ್ರಾಮೀಣ ಭಾಗದ ಬಡವರಿಗೆ ಉಪಯೋಗವಾಗಲಿ ಎಂಬ…

Read More

ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಳ್ಳಿ : ಅರ್ಷಾದ

ವೀರಮಾರ್ಗ ನ್ಯೂಜ್ ಶಿಗ್ಗಾವಿ : ವಿದ್ಯಾರ್ಥಿಗಳು ತಾವು ಪಡೆದ ಕೌಶಲ್ಯವನ್ನೇ ಸದುಪಯೋಗ ಪಡೆಸಿಕೊಂಡು ಉದ್ಯಮಿಯಾಗಿ, ಉದ್ಯೋಗ ನೀಡಿ, ನಿರೂದ್ಯೋಗ ಸಮಸ್ಯಯನ್ನು ಹೋಗಲಾಡಿಸುವಂತೆ ಸಂಪನ್ಮೂಲ ವ್ಯಕ್ತಿ ಮಹಮ್ಮದ ಅರ್ಷಾದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕಿನ ಗುಡ್ಡದಚೆನ್ನಾಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಸಬ್ಸಿಡಿ ನೀಡುವುದರಮೂಲಕ ದನಸಹಾಯ ಕಲ್ಪಿಸಲಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿ ಉದ್ಯಮಿ ಯಾಗಿ, ಯುವಸಮೂಹಕ್ಕೆ ಉದ್ಯೋಗ ಅವಕಾಶ…

Read More

ಸಕಲ ವೈಭವದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರೆ

ವೀರಮಾರ್ಗ ನ್ಯೂಜ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಶರಣ ಬಸವೇಶ್ವರ ದಾಸೋಹಮಠದ ೪೫ನೇ ವರ್ಷದ ಜಾತ್ರಾ ಮಹೋತ್ವವದ ಅಂಗವಾಗಿ ನಡೆದ ಶ್ರೀ ಶರಣಬಸವೇಶ್ವರರ ಭಾವಚಿತ್ರದ ಮೇರವಣಿಗೆಗೆ ಶ್ರೀ ಶಿವದೇವ ಶರಣರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.ಮೇರವಣಿಗೆ ಸುಮಂಗಲೆಯರ ಕುಂಭೋತ್ಸವ, ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಮಠದಿಂದ ಪ್ರಾರಂಭಗೋಂಡು ಸದಾಶಿವಪೇಟೆ, ನಾರಾಯಣಪುರ, ಇಬ್ರಾಹಿಂಪುರ, ಮುನವಳ್ಳಿ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದಿತು. ಮೇರವಣಿಗೆಯನ್ನು ಭಕ್ತರು ಅಂಗಳಕೆ ಮಡಿನೀರು ಚಿಮುಕಿಸಿ, ರಂಗೋಲಿಹಾಕಿ, ತಳಿರು ತೋರಣಕಟ್ಟಿ ಭಕ್ತಿಯಿಂದ ಬರಮಾಡಿಕೋಂಡು ಹೂವಿನಮಾಲೆ,…

Read More