ಇಂದು ಭಾವೈಕ್ಯತಾ ದಿನಾಚರಣೆ.( ಲಿಂ.ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಜನ್ಮದಿನ)
ವೀರಮಾರ್ಗ ನ್ಯೂಸ್ : ಸ್ವಾಮೀಜಿಯವರು 21 ಫೆಬ್ರುವರಿ 1949 ರಂದು ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕೋರವಾರದಲ್ಲಿ ಜನಿಸಿದರು. 1974 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದರು. ತಮ್ಮ ಧಾರ್ಮಿಕ ಶಿಕ್ಷಣವನ್ನು ಸಿಂದಗಿ, ಶಿವಮಂದಿರ, ಹುಬ್ಬಳ್ಳಿಗಳಲ್ಲಿ ಪೂರೈಸಿದರು. ಪೀಠಾರೋಹಣ : ಸ್ವಾಮೀಜಿ ಎಡೆಯೂರು ಶ್ರೀ ತೋಂಟದ ಸಿದ್ಧಲಿಂಗ ಶಿವಯೋಗಿಗಳ ಪೀಠ ಪರಂಪರೆಯ 19ನೇಯ ಪೀಠಾಧಿಪತಿಗಳಾಗಿ ಡಂಬಳ-ಗದಗ ಸಂಸ್ಥಾನಮಠಕ್ಕೆ 1974 ಜುಲೈ 29 ರಂದು ಅಧಿಕಾರ ವಹಿಸಿಕೊಂಡರು. ಆ ದಿನ ಧಾರ್ಮಿಕ ಇತಿಹಾಸದಲ್ಲೆ ಒಂದು ಹೊಸ ಅಧ್ಯಾಯ…