ವೀರಮಾರ್ಗ ನ್ಯೂಜ್ ಶಿಗ್ಗಾವಿ : ವಿದ್ಯಾರ್ಥಿಗಳು ತಾವು ಪಡೆದ ಕೌಶಲ್ಯವನ್ನೇ ಸದುಪಯೋಗ ಪಡೆಸಿಕೊಂಡು ಉದ್ಯಮಿಯಾಗಿ, ಉದ್ಯೋಗ ನೀಡಿ, ನಿರೂದ್ಯೋಗ ಸಮಸ್ಯಯನ್ನು ಹೋಗಲಾಡಿಸುವಂತೆ ಸಂಪನ್ಮೂಲ ವ್ಯಕ್ತಿ ಮಹಮ್ಮದ ಅರ್ಷಾದ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲೂಕಿನ ಗುಡ್ಡದಚೆನ್ನಾಪುರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಉದ್ಯಮಶೀಲತಾ ಜಾಗೃತಿ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು, ಸ್ವಯಂ ಉದ್ಯೋಗ ಪ್ರಾರಂಭಿಸಲು ಸರ್ಕಾರ ಸಾಕಷ್ಟು ಪ್ರಮಾಣದಲ್ಲಿ ಸಬ್ಸಿಡಿ ನೀಡುವುದರಮೂಲಕ ದನಸಹಾಯ ಕಲ್ಪಿಸಲಾಗುತ್ತಿದೆ. ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಂಡು ಸ್ವಯಂ ಉದ್ಯೋಗ ಪ್ರಾರಂಭಿಸಿ ಉದ್ಯಮಿ ಯಾಗಿ, ಯುವಸಮೂಹಕ್ಕೆ ಉದ್ಯೋಗ ಅವಕಾಶ ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಹೇಮಂತಕುಮಾರ ಕೆ.ಎಸ್, ಮಾತನಾಡಿ, ಉದ್ಯಮಶೀಲತಾ ವಿವಿಧ ತರಬೇತಿ ಕಾರ್ಯಕ್ರಮಗಳು, ಸ್ವಯಂ ಉದ್ಯೋಗ ಪ್ರಾರಂಭಿಸುವವರಿಗೆ ಜ್ಞಾನ, ಮತ್ತು ಹೆಚ್ಚಿನ ಕೌಶಲ್ಯವನ್ನು ಉಚಿತವಾಗಿ ಕಲೆಯಿಸಿ ಕೊಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಿಗಳನ್ನು ಸೃಷ್ಠಿಸುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದೆ. ವ್ಯವಹಾರವನ್ನು ನಿರ್ವಹಿಸುವ, ಅಭಿವೃದ್ಧಿ ಪಡೆಸುವ, ಸಾಮರ್ಥವನ್ನು ಹೆಚ್ಚಿಸುವ ಸದುದ್ದೇಶದಿಂದ ಗೌರವದನದೊಂದಿಗೆ ತರಬೇತಿಯನ್ನು ನೀಡಿ, ಉದ್ಯಮ ಪ್ರಾರಂಭಿಸಲು ದನ ಸಹಾಯ ನೀಡುವುದರಮೂಲಕ ಉತ್ತೇಜಿಸಲಾಗುತ್ತಿದೆ ಎಂದು ಹೇಳಿದರು.
ಇನ್ನೊರ್ವ ಸಂಪನ್ಮೂಲ ವ್ಯಕ್ತಿ ಯಶಪಾಲ ಮಾತನಾಡಿ, ಮನುಷ್ಯನಿಗೆ ಎಲ್ಲದರಕ್ಕೀಂತಲೂ ದೊಡ್ಡ ಸಂಪತ್ತು ಆರೋಗ್ಯ ಸಂಪತ್ತಾಗಿದ್ದು, ಯುವಕರು ದುಶ್ಚಟಗಳಿಂದ ದೂರವಿದ್ದು, ಆರೋಗ್ಯ ಸಂಪತ್ತನ್ನು ಕಾಯ್ದುಕೊಳ್ಳಬೇಕು. ಕ್ಷಯ ರೋಗ ನಿರ್ಮೂಲನೆಗೆ ಪಣ ತೋಡಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶಿಲ್ಫಾ ಹಾಲನವರ, ತುಳಜಾ ಬದ್ದಿ, ಜ್ಯೋತಿ ಸಪ್ಪಂಡಿ, ಮಮತಾ ಸಿ.ಎಸ್, ಜಬಿನಾಭಾನು ನದಾಫ್, ರೇಖಾ, ವೀಣಾ ಹಂಜಿ, ರಾಜೇಶ್ವರಿ ಎಂ, ಮಮತಾ ಜಪಾಟಿ, ಶಾತಾಜಬೇಗಂ ನದಾಫ್, ರಾಮಲಿಂಗೇಶ ಪ್ಯಾಟಿ, ಡಾ.ನಾಗರಾಜ ಹಂಚಿನಮನಿ, ಪ್ರವೀಣ ಬಸಾಪುರ, ಸಿದ್ದಲಿಂಗಪ್ಪ ಕರಿಯಣ್ಣನವರ, ಸೋಮಶೇಖರ, ಪರಶುರಾಮ, ಇಮಾಮ್ ಹುಸೇನ, ಉಮೇಶ ನವಲಗುಂದ, ಜಯಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡೆಸಿಕೊಳ್ಳಿ : ಅರ್ಷಾದ
