ವೀರಮಾರ್ಗ ನ್ಯೂಜ್ ಶಿಗ್ಗಾವಿ : ತಾಲೂಕಿನ ಸದಾಶಿವಪೇಟೆಯ ಶ್ರೀ ಶರಣ ಬಸವೇಶ್ವರ ದಾಸೋಹಮಠದ ೪೫ನೇ ವರ್ಷದ ಜಾತ್ರಾ ಮಹೋತ್ವವದ ಅಂಗವಾಗಿ ನಡೆದ ಶ್ರೀ ಶರಣಬಸವೇಶ್ವರರ ಭಾವಚಿತ್ರದ ಮೇರವಣಿಗೆಗೆ ಶ್ರೀ ಶಿವದೇವ ಶರಣರು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಮೇರವಣಿಗೆ ಸುಮಂಗಲೆಯರ ಕುಂಭೋತ್ಸವ, ಸಕಲ ವಾದ್ಯ ವೈಭವಗಳೊಂದಿಗೆ ಶ್ರೀ ಮಠದಿಂದ ಪ್ರಾರಂಭಗೋಂಡು ಸದಾಶಿವಪೇಟೆ, ನಾರಾಯಣಪುರ, ಇಬ್ರಾಹಿಂಪುರ, ಮುನವಳ್ಳಿ ಗ್ರಾಮಗಳ ಪ್ರಮುಖ ರಸ್ತೆಗಳಲ್ಲಿ ಸಾಗಿಬಂದಿತು. ಮೇರವಣಿಗೆಯನ್ನು ಭಕ್ತರು ಅಂಗಳಕೆ ಮಡಿನೀರು ಚಿಮುಕಿಸಿ, ರಂಗೋಲಿಹಾಕಿ, ತಳಿರು ತೋರಣಕಟ್ಟಿ ಭಕ್ತಿಯಿಂದ ಬರಮಾಡಿಕೋಂಡು ಹೂವಿನಮಾಲೆ, ಹಣ್ಣು, ಕಾಯಿ ಸಮರ್ಪಿಸಿ ಭಕ್ತಿ ನಮನ ಸಲ್ಲಿಸಿದರು. ಮೇರವಣಿಗೆ ಸಾಗಿಬಂದು ಪುನ: ಶ್ರೀ ಮಠದ ಆವರಣ ತಲುಪಿ ಸಮಾರೋಪ ಗೋಂಡಿತು. ನಂತರ ಅನ್ನ ಪ್ರಸಾದ ನಡೆಯಿತು.
ತನ್ನಿಮಿತ್ಯ ಪ್ರಾಥ:ಕಾಲ ಶ್ರೀ ಶರಣಬಸವೇಶ್ವರ ಮೂರ್ತಿಗೆ ಹಾಗು ಲಿಂ. ಶ್ರೀ ರೇವಣಸಿದ್ದೇಶ್ವರ ಕತೃ ಗದ್ದುಗೆಗೆ ಶ್ರೀ ಗದಿಗಯ್ಯ ಮಹಾತಂತಮಠ ಹಾಗು ಕುಮಾರಸ್ವಾಮಿ ಹೊಸಮಠ ರವರಿಂದ ಮಹಾ ರುದ್ರಾಭಿಷೇಕ, ಸಹಶ್ರಭಿಲ್ವಾರ್ಚನೆ, ರುದ್ರಪಠಣ ಸೇರಿದಂತೆ ವಿವಿದ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು.
ನಿತ್ಯ ದಾಸೋಹ ಸೇವಾರ್ಥಿ ರಮೇಶ ಕಲಿವಾಳ, ಫಕ್ಕೀರಪ್ಪ ವಡವಿ, ಪುಟ್ಟಪ್ಪ ಬಾಗಣ್ಣವರ, ಶಿವು ಹಿರೇಮಠ, ವೀರಪ್ಪ ವಡವಿ, ಪ್ರಬಾಕರ ಬಡಿಗೇರ, ಶರಣಪ್ಪ ಹೊಳಲಾಪುರ, ಈರಪ್ಪ ರವದಿ, ಶರಣಪ್ಪ ಅತ್ತಿಗೇರಿ, ಸಂಗಪ್ಪ ವಡವಿ, ಶಂಭು ಕಿವುಡನವರ, ಪ್ರಭಾಕರ ಬಡಿಗೇರ, ಬಸಣ್ಣ ಚಿಗರಿ, ಗುರುಲಿಂಗಯ್ಯ ನಂದಿಮಠ, ಬಸವಂತಪ್ಪ ಕಿವುಡನವರ, ಸಂಗಪ್ಪ ಗಂಗೂರ, ರುದ್ರಪ್ಪ ಕಿವುಡನವರ, ಚಂದ್ರು ಐಯನಗೌಡ್ರ ಸೇರಿದಂತೆ ಶ್ರೀ ಗದಿಗೇಶ್ವರ ಯುವಕಮಂಡಳದ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಸಕಲ ವೈಭವದೊಂದಿಗೆ ಶ್ರೀ ಶರಣಬಸವೇಶ್ವರ ಜಾತ್ರೆ
