ವೀರಮಾರ್ಗ ನ್ಯೂಜ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ರಂಗಪಂಚಮಿ ಅಂಗವಾಗಿ ಬುಧವಾರ ಬೆಳಿಗ್ಗೆಯಿಂದಲೇ ಯುವಕ, ಯುವತಿ, ಕಿರಿಯರು, ಹಿರಿಯರು ಎಂಬ ಬೇದಬಾವ ಮರೆತು ಒಬ್ಬರಿಗೋಬ್ಬರು ಬಣ್ಣ ಏರಚಿ ಹೋಳಿ ಹಬ್ಬಕ್ಕೆ ಮೇರಗು ತಂದರು.
ಬೆಳಿಗ್ಗೆ ಎಂಟು ಗಂಟೆಯಿಂದಲೇ ಚಿಕ್ಕಮಕ್ಕಳು ಪಿಚಗೂರಿ, ಬಣ್ಣದ ಪಾಕೀಟ್ ಹಿಡಿದುಕೋಂಡು, ರಸ್ತೆಗಿಳಿದು ಬಣ್ಣದಾಟದಲ್ಲಿ ತೋಡಗಿದರೇ, ಯುವಕರು, ಯುವತಿಯರು ತಮ್ಮ ಸಹಪಾಠಿಗಳ ಮನೆ, ಮನೆಗೆ ತೇರಳಿ ಬಣ್ಣ ಏರಚುತ್ತಾ ಸಂಭ್ರಮಿಸಿದರು. ಯುವ ಸಮೂಹ ಹಲಗೆ ನಾದಕ್ಕೆ, ಡಿಜೆ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರೆ, ಯುವತಿಯರು ಸಹಪಾಠಿಗಳೋಂದಿಗೆ ರಸ್ತೆಗಿಳಿದು, ಮನೆ,ಮನೆಗೆ ತೆರಳಿ ಒಬ್ಬರಿಗೋಬ್ಬರು ಬಣ್ಣ ಎರಚುವಮೂಲಕ ರಂಗ ಮಂಚಮಿಗೆ ರಂಗು ಮೂಡಿಸಿದರು.
ಪಟ್ಟಣದ ವಿವಿದ ಓಣಿಗಳಲ್ಲಿ ಐದು ದಿನಗಳಿಂದ ರಥಿ, ಕಾಮ, ಹುಲ್ಲಿನ ಕಾಮಣ್ಣನ್ನು ಪ್ರತಿಷ್ಠಾಪಿಸಿ ಪ್ರತಿದಿನ ವಿಶೇಷ ಪೂಜೆ ಸಲ್ಲಿಸಿದ ಜನತೆ ವಿವಿದ ಆಟಗಳನ್ನು ಆಡಿ ಮೋಜು ಮಸ್ತಿಯಲ್ಲಿ ತೋಡಗಿ ಕಾಮನ ಹಬ್ಬದ ಸವಿಯನ್ನು ಸವಿದ ಜನತೆ, ರಂಗ ಪಂಚಮಿದಿನ ಸಾಮೂಹಿಕವಾಗಿ ಬಣ್ಣ ದಲ್ಲಿ ಮಿಂದೇಳುವಮೂಲಕ ರಂಗು ಮೂಡಿಸಿದರು. ಕಾಮಣ್ಣನ ಪ್ರತಿಷ್ಠಾಪಿಸಿದ ಓಣಿಗಳಲ್ಲಿ ಹಿರಿಯರೋಂದಿಗೆ ಕೂಡಿ ಕಾಮದಹನ ಮಾಡುವಮೂಲಕ ರಂಗ ಪಂಚಮಿಗೆ ಸಮಾರೋಪ ಹಾಡಿದರು. ಪಟ್ಟಣದ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದಮಾಡಲಾಗಿತ್ತು. ಪಟ್ಟಣದ ವಿವಿದೆಡೆ ಸಂಘ, ಸಂಸ್ಥೆಗಳಿಂದ ತಂಪುಪಾನಿಯ, ಉಪಹಾರ ವಿತರಿಸಲಾಯಿತು. ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿತ್ತು.
ಬಂಕಾಪುರದಲ್ಲಿ ರಂಗೇರಿದ ಹೋಳಿ ಹಬ್ಬ
