ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯ : ಪ್ರಕಾಶಾನಂದ
ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯ : ಪ್ರಕಾಶಾನಂದವೀರಮಾರ್ಗ ನ್ಯೂಸ್ ರಾಣೇಬೆನ್ನೂರ : ಮನುಷ್ಯ ಹಣಕ್ಕಿಂತ ಗುಣವನ್ನು ಪಾಲಿಸಬೇಕು. ಹಣದಿಂದ ಬದುಕುವುದಿಲ್ಲ. ಪ್ರೀತಿಯಿಂದ ಬದುಕಿದಾಗ ಸಾರ್ಥಕ ಜೀವನ ಹೊಂದಲು ಸಾಧ್ಯವಿದೆ ಎಂದು ಸ್ಥಳೀಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಪ್ರಕಾಶಾನಂದ ಮಹಾರಾಜರು ನುಡಿದರು.ಇಲ್ಲಿಯ ದೊಡ್ಡಪೇಟೆಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಶನಿವಾರ ಜೀರ್ಣೋದ್ಧಾರಗೊಂಡ ದೇವಸ್ಥಾನದ ಲೋಕಾರ್ಪಣೆ, ಕಳಸಾರೋಹಣ ಕಾರ್ಯಕ್ರಮದ ಧರ್ಮಸಭೆಯಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು. ದೇವಸ್ಥಾನ ಅಭಿವೃದ್ಧಿಪಡಿಸುವುದು ಅವಶ್ಯವಾಗಿದೆ. ಜೀವನದಲ್ಲಿ ಹೊರರಚನೆಯಾಗಬೇಕು. ದೇಹದಲ್ಲಿ ಹಳೆಯ ಜೀವ ಕೋಶಗಳು ಸತ್ತು…