ಹಾವೇರಿ-ಗದಗ-ದಾವಣಗೆರೆ ಸೇರಿ
ರಾಜ್ಯದ 31 ಜಿಲ್ಲಾ ಪಂಚಾಯಿತಿಗಳಿಗೆ 4096 ಕೋಟಿ ರೂ. ಬಿಡುಗಡೆ
ವೀರಮಾರ್ಗ ನ್ಯೂಸ್ ಬೆಂಗಳೂರು : ರಾಜ್ಯ ಸರ್ಕಾರ ಜಿಲ್ಲಾ ಪಂಚಾಯಿತಿ ವಿವಿಧ ಯೋಜನೆಗಳಿಗೆ 2025-26ನೇ ಸಾಲಿನ ಮೊದಲ ಕಂತಾಗಿ 4 ತಿಂಗಳ ಅವಧಿಗೆ 4096 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ.
2025-26ನೇ ಸಾಲಿನ ಬಜೆಟ್ ಘೋಷಣೆಯನ್ವಯ ಹಣಕಾಸು ಇಲಾಖೆ ಈ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದ ಏಕೀಕೃತ ನಿಧಿಯಿಂದ ಈ ಹಣ ಮಾಡಲಾಗಿದ್ದು, ಈ ಬಿಡುಗಡೆಯು ಮುಂದಿನ 4 ತಿಂಗಳ ಅವಧಿಯ ವೆಚ್ಚಕ್ಕಾಗಿ ಮೀಸಲಾಗಿದೆ. ಜಿಲ್ಲಾ ಖಜಾನೆ ಅಧಿಕಾರಿ ಬಿಡುಗಡೆಯ ಆದೇಶಕ್ಕೆ ಅನುಗುಣವಾಗಿ ಬಿಲ್ ಮೊತ್ತವನ್ನು ಖಜಾನೆಯಲ್ಲಿ ನಿರ್ವಹಿಸುವ ಜಿಲ್ಲಾ ಪಂಚಾಯತ್‌ನ ರಾಜ್ಯ ಯೋಜನೆಗಳ ಸಂದರ್ಭದಲ್ಲಿ ನಿಧಿಗೆ ವರ್ಗಾಯಿಸುವಂತೆ ಸೂಚಿಸಲಾಗಿದೆ.
ಮುಖ್ಯ ಲೆಕ್ಕಾಧಿಕಾರಿಗಳು ಸಂಬಂಧಪಟ್ಟ ಅನುಷ್ಠಾನಾಧಿಕಾರಿಗಳಿಗೆ ಯೋಜನೆವಾರು ಹಣವನ್ನು ಬಿಡುಗಡೆ
ಮಾಡಲು ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ, ಬಿಡುಗಡೆ ಮಾಡಿದ ಹಂಚಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಬಾಕಿಗಳನ್ನು ಪಾವತಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಯಾವ ಜಿಲ್ಲೆಗೆ ಎಷ್ಟು (ಕೋಟಿ ರೂ.ಗಳಲ್ಲಿ) :
ಬೆಂಗಳೂರು ನಗರ – 238.54
ಬೆಂಗಳೂರು ಗ್ರಾಮಾಂತರ – 63.18
ಚಿತ್ರದುರ್ಗ – 172.18
ಕೋಲಾರ – 82.55
ಶಿವಮೊಗ್ಗ – 154.73
ತುಮಕೂರು – 205.64
ಮೈಸೂರ – 183.76
ಚಿಕ್ಕಮಗಳೂರು – 113.60
ದಕ್ಷಿಣ ಕನ್ನಡ – 111.16
ಹಾಸನ – 156.73
ಕೊಡಗು – 58.06
ಮಂಡ್ಯ – 131.83
ಬೆಳಗಾವಿ – 323.75
ವಿಜಯಪುರ – 189.38
ಧಾರವಾಡ – 148.48
ಕಾರವಾರ – 122.99
ಕಲಬುರಗಿ – 200.68
ಬಳ್ಳಾರಿ – 80.26
ಬೀದರ – 140.18
ರಾಯಚೂರು – 106.96
ಯಾದಗಿರಿ – 73.74
ದಾವಣಗೆರೆ – 154.43
ರಾಮನಗರ – 79.68
ಚಿಕ್ಕಬಳ್ಳಾಪುರ – 77.17
ಚಾಮರಾಜನಗರ – 67.94
ಉಡುಪಿ – 73.50
ಬಾಗಲಕೋಟೆ – 139.95
ಗದಗ – 105.09
ಹಾವೇರಿ – 141.05
ಕೊಪ್ಪಳ – 98.64
ವಿಜಯನಗರ – 99.68