ರಾಜ್ಯಮಟ್ಟದ ಜಂಗೀ ಕುಸ್ತಿಯಲ್ಲಿ ರೋಷನ್‌ಗೆ ಗೆಲುವಿನ ಮಾಲೆ, ದ್ವಿತೀಯ ಸ್ಥಾನ ಕರಡಿಕೊಪ್ಪ
ವೀರಮಾರ್ಗ ನ್ಯೂಸ್ ಶಿಗ್ಗಾವಿ : ತಾಲೂಕಿನ ಬಂಕಾಪುರ ಪಟ್ಟಣದ ಸುಂಕದಕೇರಿ ಹೊಂಡದ ಶ್ರೀ ದುರ್ಗಾದೇವಿ ಜಾತ್ರೋತ್ಸವದ ಅಂಗವಾಗಿ ನಡೆದ ರಾಜ್ಯಮಟ್ಟದ ಜಂಗೀ ಬಯಲು ಅಂತಿಮ ಕುಸ್ತಿ ಪಂದ್ಯಾವಳಿಯಲ್ಲಿ ಮಾಸೂರಿನ ರೋಷನ್ ಗೆಲುವಿನ ಮಾಲೆ ತನ್ನದಾಗಿಸಿಕೊಂಡರೆ, ದ್ವಿತೀಯ ಸ್ಥಾನ ಕರಡಿಕೊಪ್ಪದ ಪ್ರಥಮ ಅವರಿಗೆ ಲಭಿಸಿದೆ.
ಮಾಸೂರಿನ ರೋಷನ್ ಹಾಗು ಕರಡಿಕೊಪ್ಪದ ಪ್ರಥಮ ಅಂತಿಮ ಪಂದ್ಯದ ಅಖಾಡಕ್ಕೀಳಿದಾಗ ಕುಸ್ತಿ ಪ್ರೇಮಿಗಳ ಉತ್ಸಾಹ ಇಮ್ಮಡಿಗೊಂಡು ಕೇಕೆ, ಶಿಳ್ಳೆ, ಚಪ್ಪಾಳೆ ಹೋಡೆಯೂವಮೂಲಕ ಕುಸ್ತಿ ಪಟುಗಳನ್ನು ಪ್ರೋತ್ಸಾಹಿಸಿದರು. ಕುಸ್ತಿ ಖಣದಲ್ಲಿ ಜಗಜಟ್ಟಿಗಳ ಕಾಳಗ ರೋಮಾಂಚಕಾರಿಯಾಗಿ ನಡೆದು, ಕುಸ್ತಿ ಪ್ರೇಮಿಗಳ ಕಣ್ಮನ ಸೇಳೆದರು. ಅಂತಿಮವಾಗಿ ಕರಡಿಕೊಪ್ಪದ ಪ್ರಥಮ ಅವರನ್ನು ಮಣಿಸುವಮೂಲಕ ಮಾಸೂರಿನ ರೋಷನ್ ಅವರು ಜಯದ ಮಾಲೆ ತಮ್ಮದಾಗಿಸಿಕೊಂಡರು. ಪ್ರಥಮ ಹಾಗು ದ್ವಿತೀಯ ಸ್ಥಾನ ಪಡೆದ ರೋಷನ ಹಾಗು ಪ್ರಥಮ ಅವರಿಗೆ ಕಮೀಟಿಯವರು ಗೌರವ ಕಾಣಿಕೆ ಸಮರ್ಪಿಸಿ ಸನ್ಮಾನಿಸಿ ಗೌರವಿಸಿದರು.

ಪಿ.ಎಸ್.ಐ. ನಿಂಗರಾಜ ಕರಕಣ್ಣನವರ, ಜಾತ್ರೋತ್ಸವ ಕಮೀಟಿ ಸದಸ್ಯರಾದ ಸೋಮು ಕುರಿ, ಗಂಗಾಧರ ಪುಜಾರ, ರಾಮಕೃಷ್ಣ ಆಲದಕಟ್ಟಿ, ಸತೀಷ ಆಲದಕಟ್ಟಿ, ಬಿ.ಎಸ್.ಗಿಡ್ಡಣ್ಣವರ, ವಿಜಯ್ ರಾಣೋಜಿ, ನೀಲಪ್ಪ ಕುರಿ, ವೀರುಪಾಕ್ಷಪ್ಪ ಹುರಳಿ, ಸೋಮಂತ ಪುಜಾರ, ಯಲ್ಲಪ್ಪ ದ್ವಾಸಿ, ಗದಿಗಯ್ಯ ಹಿರೇಮಠ, ಸುರೇಶ ರಾಣೋಜಿ, ಮಲ್ಲಪ್ಪ ಕಟಗಿ, ಎಫ.ಸಿ.ಕಾಡಪ್ಪಗೌಡ್ರ, ಸಿದ್ದಪ್ಪ ಹರವಿ ಸೇರಿದಂತೆ ಇತರರು ಇದ್ದರು.